ಬೆಂಗಳೂರು:ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜಿಆರ್ ಫಾರ್ಮ್ ಹೌಸ್ ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಸೋಮವಾರ ನಸುಕಿನ ಜಾವದವರೆಗೆ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಕೆಲವು ನಟ, ನಟಿಯರು ಸಿಕ್ಕಿ ಬಿದಿದ್ದರು. ಸೆಲೆಬ್ರಿಟಿಗಳು ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಡಸ್ಟ್‌ಬಿನ್ ಕವರ್‌ಗಳಿಂದ ಮುಖಮುಚ್ಚಿಕೊಂಡು ಹೊರಗೆ ಹೋಗಿದ್ದಾರೆ.
CCBಯ ಆಂಟಿ ನಾರ್ಕೋಟಿಕ್ಸ್ ವಿಭಾಗವು ದಾಳಿಯ ನಂತರ ಶೋಧ ಕಾರ್ಯ ನಡೆಸಿದಾಗ ಅಪಾರ ಪ್ರಮಾಣದ ಎಂಡಿಎಂಎ ಮಾತ್ರೆಗಳು ಮತ್ತು ಕೊಕೇನ್ ಗಳು ಸಿಕ್ಕಿವೆ. ಪಾರ್ಟಿ ಆಯೋಜಕ ವಾಸು ಸೇರಿದಂತೆ ಕೆಲವರನ್ನು ಸಿಸಿಬಿ ಬಂಧಿಸಿದೆ. ಇನ್ನೂ ಕೆಲವರು ಸಲೆಬ್ರೆಟಿಗಳನ್ನು ವಿಚಾರಣೆ ಮಾಡಿ ಕೆಲವು ಮಾಹಿತಿಯನ್ನು ಅವರಿಂದ ಸಂಗ್ರಹಿಸಿ ಮತ್ತೆ ಕರೆದಾಗ ಬರಬೇಕು ಎಂದು ಪೊಲೀಸರು ಹೇಳಿ ಕಳುಹಿಸಿದ್ದಾರೆ ಎನ್ನಲಾಗಿತ್ತು.
ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ಆಯೋಜನೆ ಮಾಡಿದ್ದ ಬರ್ತಡೇ ಪಾರ್ಟಿಗೆ ‘ಸನ್ ಸೆಟ್ ಟು ಸನ್ ರೈಸ್’ (sun set to sun rise party) ಥೀಮ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಡರಾತ್ರಿಯಾದರೂ ಸುಮಾರು 100ಕ್ಕೂ ಅಧಿಕ ಜನರು ಜೋರಾಗಿ ಡಿಜೆ ಹಾಕಿಕೊಂಡು ಫಾರ್ಮ್‌ಹೌಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿಸಿದ ಸಿಸಿಬಿ ಪೊಲೀಸರು ರಾತ್ರೋ ರಾತ್ರಿ ಫಾರ್ಮ್‌ಹೌಸ್‌ ಮೇಲೆ ದಾಳಿ ಮಾಡಿದ್ದಾರೆ.
ಬರ್ತಡೇ ಹೆಸರಲ್ಲಿ ನಡೆಯುತ್ತಿದ್ದ ಡ್ರಗ್ಸ್ ಗಾಂಜಾ ಪಾರ್ಟಿ ಇದಾಗಿದೆ ಎಂದು ತಿಳಿದುಬಂದಿದೆ. ಆಗ ಸಿಸಿಬಿ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳನ್ನು ಕರೆಸಿ ಮತ್ತಷ್ಟು ದಾಳಿ ಮಾಡಿದಾದ ಮಾದಕ ವಸ್ತುಗಳಾದ ಎಂಡಿಎಂಎ  ಮಾತ್ರೆಗಳು ಮತ್ತು  ಕೊಕೇನ್ ಪತ್ತೆಯಾಗಿವೆ.
ರೇವ್‌ಪಾರ್ಟಿಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿ ವಿವಿಧೆಡೆಯಿಂದ ಸೆಲೆಬ್ರಿಟಿಗಳು, ಶ್ರೀಮಂತರು, ರಾಜಕೀಯ ನಾಯಕರ ಮಕ್ಕಳು, ಟೆಕ್ಕಿಗಳು ಸೇರಿದಂತೆ ಎಲ್ಲರೂ ಆಗಮಿಸಿದ್ದರು. ಆದರೆ, ಕಾನೂನು ಬಾಹಿರ ಪಾರ್ಟಿಯಲ್ಲಿ ಪಾಲ್ಗೊಂಡು ಈಗ ಮುಖ ಮುಚ್ಚಿಕೊಂಡು ಹೊರಗೆ ಹೋಗಿದ್ದಾರೆ.  ವೈದ್ಯಕೀಯ ಸಿಬ್ಬಂದಿ ಫಾರ್ಮ್‌ಹೌದ್ ಒಳಗೆ ತೆರಳಿ ರಕ್ತದ ಮಾದರಿ ಸಂಗ್ರಹ ಮಾಡಿಕೊಂಡು ಬೆಂಗಳೂರು ಸಿಸಿಬಿ ಪೊಲೀಸರು 101 ಜನರನ್ನು ಸಂಜೆ ವೇಳೆಗೆ ರಿಲೀಸ್ ಮಾಡಿ ಕಳುಹಿಸಿದ್ದಾರೆ. ಹೋಗುವಾಗ ಕೆಲವರು ಮಾಧ್ಯಮಗಳಿಗೆ ಮುಖ ತೋರಿಸಲಾಗಿದೇ ಡಸ್ಟ್‌ಬಿನ್ ಕವರ್‌ಗಳಿಂದ ಮುಖ ಮುಚ್ಚಿಕೊಂಡು ಹೊರಗೆ ಹೋಗಿದ್ದಾರೆ.
ರೇವ್ ಪಾರ್ಟಿಯಲ್ಲಿ ನಾನಿಲ್ಲವೆಂದು ಪೊಲೀಸರಿಗೆ ಚಳ್ಳೆಹಣ್ಣು ನಟಿ ಹೇಮಾ! ಈಕೆ ವಿರುದ್ಧ ಮತ್ತೊಂದು ಪ್ರಕರಣ ದಾಖಲು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 9 =
Remember me
