ಬೆಂಗಳೂರು:ಹೋದೆಯ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಎಂಬಂತೆ ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆ ದಿನದಿಂದ ದಿನಕ್ಕೆ ಉಗ್ರರೂಪ ತಾಳುತ್ತಿದೆ. ಹೀಗಿರುವಾಗ ಜನರ ಭರವಸೆಯಾಗಿರುವ ಕರೊನಾ ಔಷಧ ಕಾಳಸಂತೆಯಲ್ಲಿ ಕಂತೆ-ಕಂತೆ ಹಣಕ್ಕೆ ಮಾರಾಟವಾಗುತ್ತಿರುವುದು ವಿಪರ್ಯಾಸ.
ಕರೊನಾ ರೋಗಿಗಳಿಗೆ ಕೊಡಲು ರೆಮಿಡಿಸಿವರ್ ಇಂಜೆಕ್ಷನ್ ಆಸ್ಪತ್ರೆಗಳಲ್ಲಿ ಸ್ಟಾಕ್ ಇಲ್ಲ. ಆದರೆ, ಕಾಳ ಸಂತೆಯಲ್ಲಿ ಮಾತ್ರ ಭರ್ಜರಿಯಾಗಿ ಮಾರಾಟವಾಗುತ್ತಿದ್ದು, ಕರೊನಾ ಔಷಧಿಗೆ ಮಾರಾಟ ಮಾಡುತ್ತಿದ್ದವರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನಾದ್ಯಂತ ಸಿಸಿಬಿ ಕಾರ್ಯಾಚರಣೆ ನಡೆಸಿ ಕರೊನಾ‌ ಔಷಧಿ ರೆಮಿಡಿಸಿವರ್​ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದು, ಲಸಿಕೆಯನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ರಾಜೇಶ್, ಸಾಕೀಬ್ ಹಾಗೂ ಸೊಹೈಲ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿರಿ:ದಾವೂದ್ ಮಾದರಿಯಲ್ಲಿ ಭೂಗತ ಚಟುವಟಿಕೆ ನಡೆಸುತ್ತಿದ್ದಾರೆ ಉತ್ತರ ಭಾರತದ ಡಾನ್​ಗಳು!

ರಾಜೇಶ್ ಮತ್ತು ಸಾಕೀಬ್ ಗುರುಶ್ರೀ ಮೆಡಿಕಲ್ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಇಬ್ಬರ ವಿರುದ್ಧ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಬ್ಬ ಆರೋಪಿ ಸೊಹೈಲ್ ವಿರುದ್ಧ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಒಂದು ರೆಮಿಡಿಸಿವರ್ ಇಂಜೆಕ್ಷನ್​ಗೆ ಹೆಚ್ಚುವರಿಯಾಗಿ 10,500 ರೂ.ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಒಟ್ಟು 11 ರೆಮಿಡಿಸಿವರ್​ ಇಂಜೆಕ್ಷನ್ ಬಾಟಲ್​ಗಳನ್ನು ಜಪ್ತಿ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)
ಜ್ವರದಿಂದ ಬಳಲುತ್ತಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು: ಮುಗಿಲು ಮುಟ್ಟಿದ ಪಾಲಕರ ಆಕ್ರಂದನ
3 ವರ್ಷದಲ್ಲಿ 18 ಬಾಡಿಗೆ ಮನೆ ಬದಲಾವಣೆ: ಪತ್ನಿಯ ವಿಚಿತ್ರ ವರ್ತನೆಗೆ ಬೇಸತ್ತ ಗಂಡ ಮಾಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
