ಬೆಂಗಳೂರು:ಮಾಜಿ ಸಚಿವರ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಎನ್ನಲಾದ ಯುವತಿಯು ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ತನ್ನನ್ನೂ ಪ್ರತಿವಾದಿಯಾಗಿಸುವಂತೆ ಕೋರ್ಟ್​ಗೆ ಮನವಿ ಮಾಡಿದ್ದಾಳೆ.
ಪ್ರಕರಣ ಸಂಬಂಧ ಗುರುವಾರ ಎಸ್​ಐಟಿಯಿಂದ ತನಿಖಾ ಪ್ರಗತಿ ವರದಿ ಸಲ್ಲಿಕೆಯಾಗಿದೆ. ಯುವತಿ ಪರ ಸುಪ್ರೀಂ ಕೋರ್ಟ್ ವಕೀಲೆ​ ಇಂದಿರಾ ಜೈಸಿಂಗ್ ವಾದ ಮಂಡಿಸಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಎಜಿ ವಾದಿಸಿದ್ದಾರೆ. ಎಸ್​ಐಟಿ ತನಿಖೆ ಪ್ರಶ್ನಿಸಿ ಈಗಾಗಲೇ ಯುವತಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾಳೆ.
ಇನ್ನು ಯುವತಿ ಕೊಟ್ಟಿರುವ ದೂರನ್ನು ಎಸ್ಐಟಿ ಮುಕ್ತಾಯಗೊಳಿಸುವ ಸಾಧ್ಯತೆ ಇದೆ. ಯುವತಿಯ ಅರ್ಜಿಯನ್ನು ಪಿಐಎಲ್​ನೊಂದಿಗೆ ಲಿಸ್ಟ್ ಮಾಡಲು ಮನವಿ ಮಾಡಲಾಗಿದ್ದು, ಪೊಲೀಸ್​ ಆಯುಕ್ತರ ಸೂಚನೆ ಮೇರೆಗೆ ತನಿಖಾ ವರದಿಗೆ ಜಂಟಿ ಪೊಲೀಸ್ ಆಯುಕ್ತರು ಸಹಿ ಮಾಡಿದ್ದಾರೆ.
ನಿನ್ನೆ ಹೈಕೋರ್ಟ್​ಗೆ ಎಸ್​ಐಟಿ ವರದಿ ನೀಡಿದ್ದು, ಪಿಐಎಲ್​ಗೆ ಮಾಜಿ ಸಚಿವರ ಪರ ವಕೀಲ ಸಿ.ವಿ.ನಾಗೇಶ್ ಲಿಖಿತ ರೂಪದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ತನಿಖಾ ಪ್ರಗತಿ ವರದಿ ಇಡಲು ಹೈಕೋರ್ಟ್ ಸೂಚನೆ ನೀಡಿದ್ದು, ಜೂನ್ 23ಕ್ಕೆ ವಿಚಾರಣೆ ಮೂಂದೂಡಿದೆ.(ದಿಗ್ವಿಜಯ ನ್ಯೂಸ್​)
ಪಬ್​ಜಿ ಲೈವ್​ ಸ್ಟ್ರೀಮಿಂಗ್​ನಲ್ಲಿ ಅಶ್ಲೀಲತೆ: ಚೆನ್ನೈ ಮೂಲದ ಯೂಟ್ಯೂಬರ್​ ದಂಪತಿಯ ಬಂಧನ!

ಅಮೆರಿಕಕ್ಕೆ ಹೋಗಬಯಸುವ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌: ಕೋವಿಡ್‌ ಲಸಿಕೆ ಕಡ್ಡಾಯವಲ್ಲ

ಪತ್ನಿಯ ಗೆಳತಿಯರು ಮನೆಗೆ ಬರುತ್ತಿದ್ದಂತೆ ಅವರ ಬಟ್ಟೆ ಬಿಚ್ಚುತ್ತಾನೆ ಗಂಡ! ಬೆಚ್ಚಿಬೀಳಿಸುತ್ತೆ ದಂಪತಿ ಕೃತ್ಯ

ಸ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + seven =
Remember me
