ಬೆಂಗಳೂರು: ಸರ್ಕಾರದ 2.03 ಎಕರೆ ಆಸ್ತಿಯನ್ನು ಕಬಳಿಸಲು ಖಾಸಗಿ ಸಂಸ್ಥೆಯೊಂದು ಹುನ್ನಾರ ಮಾಡಿದ್ದು, ಇದಕ್ಕೆ ಬಿಬಿಎಂಪಿ ಅವಕಾಶ ನೀಡಬಾರದು ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.
ಹೊಂಬೇಗೌಡನಗರ ವಾರ್ಡ್​ನ (ವಿಲ್ಸನ್ ಗಾರ್ಡನ್) ರುದ್ರಭೂಮಿ ಮುಂಭಾಗದಲ್ಲಿ 2.03 ಎಕರೆ ಸರ್ಕಾರಿ ಆಸ್ತಿಯಿದೆ. ಅದನ್ನು ಚರೀಷ್ಮಾ ಬಿಲ್ಡರ್ಸ್ ಸಂಸ್ಥೆ ತನ್ನ ಹೆಸರಿಗೆ ಖಾತೆ ಮಾಡಿಕೊಡುವಂತೆ ಬಿಬಿಎಂಪಿ ಹಾಗೂ ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿದೆ. ಇಲ್ಲಿರುವ 150 ಕೋಟಿ ರೂ. ಮೌಲ್ಯದ 2 ಎಕರೆ ಭೂಮಿಯನ್ನು ಯಾವುದೇ ಕಾರಣಕ್ಕೂ ಖಾಸಗಿ ಸಂಸ್ಥೆಗೆ ಖಾತೆ ಮಾಡಿಕೊಡಬಾರದು ಎಂದು ಬಿಬಿಎಂಪಿ ಆಯುಕ್ತ ಅನಿಲ್​ಕುಮಾರ್ ಹಾಗೂ ತೋಟಗಾರಿಕೆ ಇಲಾಖೆ ಸಚಿವ ನಾರಾಯಣಗೌಡ ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:ತರಕಾರಿ, ಸೊಪ್ಪು ದುಪ್ಪಟ್ಟು ಬೆಲೆಗೆ ಮಾರಾಟ: ಸುಲಿಗೆಗಿಳಿದ ಚಿಲ್ಲರೆ ವ್ಯಾಪಾರಿಗಳು
ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ (2017 ರಲ್ಲಿ) ಮೊದಲ ಬಾರಿಗೆ ಈ ಆಸ್ತಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಚರೀಷ್ಮಾ ಬಿಲ್ಡರ್ಸ್ ಅರ್ಜಿ ಸಲ್ಲಿಸಿ ರಾಜಕೀಯ ಒತ್ತಡ ತಂದಿದ್ದರು. ಆದರೆ, ಈ ಆಸ್ತಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, 1980 ರಿಂದಲೂ ಹಾಪ್​ಕಾಮ್್ಸ ನೋಡಿಕೊಳ್ಳುತ್ತಿದೆ. ಇಲ್ಲಿನ ಹಾಪ್​ಕಾಮ್ಸ್​ನಿಂದ 17 ಸಾವಿರಕ್ಕೂ ಹೆಚ್ಚು ರೈತರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇಂತಹ ಸ್ವತ್ತಿನ ಮೇಲೆ ಭೂಗಳ್ಳರು ಕಣ್ಣು ಹಾಕಿದ್ದು, ಕಬಳಿಕೆಗೆ ಹುನ್ನಾರ ಮಾಡಿದ್ದಾರೆ.
ಇದನ್ನೂ ಓದಿ:ಸರ್ಕಾರದ ವಿರುದ್ಧ ಡಿಕೆಶಿ ಆಕ್ರೋಶ ಹೋರಾಟ ನಡೆಸುವ ಎಚ್ಚರಿಕೆ
ಈ ಆಸ್ತಿಯ ಬಗ್ಗೆ ಬೆಂಗಳೂರು ಉತ್ತರ ತಾಲೂಕು ತಹಸೀಲ್ದಾರ್ ಪರಿಶೀಲಿಸಿ ನಡೆಸಿ ಅಣ್ಣಿಪುರ ಗ್ರಾಮದ ಸರ್ವೆ ನಂ.18ರಲ್ಲಿರುವ 2.03 ಎಕರೆ ಪ್ರದೇಶವು ಸರ್ಕಾರಿ ಇನಾಮು ಜಮೀನಾಗಿರುತ್ತದೆ ಎಂದು 2012ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಹೀಗಾಗಿ ಸರ್ಕಾರಿ ಭೂಮಿ ಖಾಸಗಿಯವರ ಪಾಲಾಗದಂತೆ ಹಾಗೂ ಬಿಲ್ಡರ್ಸ್​ನವರ ಆಮಿಷಕ್ಕೂ ಒಳಗಾಗದಂತೆ ಸರ್ಕಾರಿ ಸ್ವತ್ತನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ.
ಭೀಕರ ಕರಡಿ ದಾಳಿಗೆ ತತ್ತರಿಸಿದ ಚನ್ನಪಟ್ಟಣ: ನಗರಸಭೆ ಮಾಜಿ ಸದಸ್ಯೆ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + fifteen =
Remember me
