ಬೆಂಗಳೂರು:ಜಗತ್ತಿನಾದ್ಯಂತ ಕೆಲವು ಕಂಪನಿಗಳು ಆರ್ಥಿಕ ಸಂಕಷ್ಟದಿಂದಾಗಿ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ನಡೆಸುತ್ತಿದೆ. ಇದು ದೊಡ್ಡ ಪ್ರಮಾಣದ ನೀರುದ್ಯೋಗಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮ ಹೇಗೆ ಇದೆ ಎಂದರೆ ಬೆಂಗಳೂರಿನ ಕಂಪನಿಯೊಂದು ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿ ಕೇವಲ 48 ಗಂಟೆಯೊಳಗೆ ಸಾವಿರಾರು ಅರ್ಜಿ ಸಲ್ಲಿಕೆಯಾಗಿದೆ.

ಬೆಂಗಳೂರಿನ ಸ್ಟಾರ್ಟ್‌ಅಪ್‌ ಕಂಪನಿಯೊಂದರ ಸ್ಥಾಪಕರು ಮತ್ತು ಸಿಇಒ ಒಬ್ಬರು ಟ್ವಿಟ್ಟರ್‌ನಲ್ಲಿ ಹಾಕಿರುವ ಒಂದು ಪೋಸ್ಟ್‌ ವೈರಲ್‌ ಆಗಿದೆ. ಅವರು ಕಂಪನಿಯ ವೆಬ್‌ಸೈಟ್‌ನಲ್ಲಿ “ಕಾಯಂ ವರ್ಕ್‌ ಫ್ರಮ್‌  ಹೋಮ್​” ಉದ್ಯೋಗವೊಂದನ್ನು ಪೋಸ್ಟ್‌ ಮಾಡಿದ್ದರು. ಈ ರೀತಿ ಉದ್ಯೋಗ ಮಾಹಿತಿ ಅಪ್ಲೋಡ್‌ ಮಾಡಿದ 48 ಗಂಟೆಗಳಲ್ಲಿ 3 ಸಾವಿರ ಜನರು ಅರ್ಜಿ ಸಲ್ಲಿಸಿದ್ದಾರೆ.
Received over 3K resumes in the last 48 hours just on our website – how bad is the job market?
— Kartik Mandaville (@kar2905)July 16, 2023

ಇದನ್ನೂ ಓದಿ:ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಬದಲಾಗಿ ಇನ್ಮುಂದೆ ಮನೆ ಬೆಳಗೋದು ಗೃಹಜ್ಯೋತಿ
ಸ್ಪ್ರಿಂಗ್‌ವಿಲ್‌ ಕಂಪನಿಯ ವೆಬ್‌ಸೈಟ್‌ನಲ್ಲಿ ಪ್ರಾಡಕ್ಟ್‌, ಫೌಂಡರ್ಸ್‌ ಆಫೀಸ್‌ ಮತ್ತು ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ ಎಂಜಿನಿಯರ್‌ ಇತ್ಯಾದಿ ಹುದ್ದೆಗಳನ್ನು ನಮೂದಿಸಲಾಗಿದೆ. ವಿಶೇಷವೆಂದರೆ ಈ ಉದ್ಯೋಗ ಲಭ್ಯತೆ ಕುರಿತು ಅವರು ಎಲ್ಲೂ ಸೋಶಿಯಲ್‌ ಮೀಡಿಯಾದಲ್ಲಿ ಪ್ರಮೋಟ್‌ ಮಾಡಿಲ್ಲವಂತೆ. ಕೇವಲ ಕಂಪನಿಯ ವೆಬ್‌ಸೈಟ್‌ನಲ್ಲಿ ಈ ಉದ್ಯೋಗದ ವಿವರವನ್ನು ನೀಡಲಾಗಿದೆ. ಯಾವುದೇ ರೀತಿಯ ಅಲರ್ಟ್‌, ಪ್ರಮೋಷನ್‌ ಏನೂ ಮಾಡದೆ ಇಷ್ಟೊಂದು ಸಂಖ್ಯೆಯಲ್ಲಿ ಅರ್ಜಿಗಳು ಬಂದಿರುವುದು ನಿಜಕ್ಕೂ ಅಚ್ಚರಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಮದುವೆಯಾಗಲು ನಾನಿನ್ನೂ ಗರ್ಭಿಣಿಯಾಗಿಲ್ಲ: ವಿವಾಹದ ಬಗ್ಗೆ ನಟಿ ತಾಪ್ಸಿ ಸೆನ್ಸೇಷನಲ್ ಕಾಮೆಂಟ್.
“ಉದ್ಯೋಗ ಮಾರುಕಟ್ಟೆ ಎಷ್ಟು ಕೆಟ್ಟದ್ದಾಗಿದೆ?” ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಎಷ್ಟು ಜನರು ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ ಎಂದು ಇದರಿಂದ ತಿಳಿಯಬಹುದು. ಜತೆಗೆ, ಎಷ್ಟು ಸಾವಿರ ಜನರು ಕಾಯಂ ವರ್ಕ್‌ ಫ್ರಮ್‌ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಬಹುತೇಕ ಕಂಪನಿಗಳು ಈಗ ಉದ್ಯೋಗಿಗಳನ್ನು ಆಫೀಸ್‌ಗೆ ಕರೆಯುತ್ತಿದ್ದು, ಮನೆಯಲ್ಲಿ ಕೆಲಸ ಮಾಡುವ ಅವಕಾಶಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಹುಡುಕುತ್ತಿದ್ದಾರೆ ಎಂದು ಈ ಪೋಸ್ಟ್​​ಗೆ ಹಲವಾರು ಜನ ಕಾಮೆಂಟ್​ ಮಾಡುವ ಮೂಲಕವಾಗಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:VIDEO | ಎಂಎಸ್​​ ಧೋನಿ ಬೈಕ್, ಕಾರ್​ ಕಲೆಕ್ಷನ್; ಇಲ್ಲಿದೆ ನೋಡಿ ವೆಂಕಟೇಶ್ ಪ್ರಸಾದ್ ಶೇರ್ ಮಾಡಿದ ವಿಡಿಯೋ..
ಈ ಉದ್ಯೋಗಗಳು ಕಾಯಂ ವರ್ಕ್‌ ಫ್ರಮ್‌ ಹುದ್ದೆಗಳು. ಈ ಕಾರಣಕ್ಕಾಗಿ ಇದು ಹೆಚ್ಚು ಜನರಿಂದ ಅರ್ಜಿ ಪಡೆದಿರಬಹುದು ಎಂದು ಕೆಲವು ಜನರು ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹಲವಾರು ಟೆಕ್ ಕಂಪನಿಗಳು ದೇಶಾದ್ಯಂತ ವಜಾಗೊಳಿಸಿದ ನಂತರ ಸಾವಿರಾರು ಜನರು ಉದ್ಯೋಗದಿಂದ ಹೊರಗುಳಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ ಕೆಲವು ಜನಪ್ರಿಯ ಟೆಕ್ ಕಂಪನಿಗಳಲ್ಲಿ ಅಮೆಜಾನ್, ಮೆಟಾ, ಗೂಗಲ್ ಮತ್ತು ಟ್ವಿಟರ್ ಸೇರಿವೆ.
VIDEO | ಒಂದು ಕೈಯಲ್ಲಿ ಗನ್, ಇನ್ನೊಂದು ಕೈಯಲ್ಲಿ ಸಿತಾರ್, ಹಾಡು ಹಾಡುತ್ತಲೇ ಗಾಳಿಯಲ್ಲಿ ಗುಂಡು ಹಾರಿಸಿದ ಗಾಯಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + twelve =
Remember me
