ಬೆಂಗಳೂರು:ನಿನ್ನೆ ಮಾರತ್ತಹಳ್ಳಿಯ ಕಾಲೇಜೊಂದರಲ್ಲಿ ಯುವಕ-ಯುವತಿಯರು ಪಾಕಿಸ್ತಾನ್​ ಜಿಂದಾಬಾದ್​ ಎಂದು ಘೋಷಣೆ ಕೂಗಿದ್ದ ಘಟನೆ ನಡೆದ ನಂತರ ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದರು.
ಮಾರತ್ತಹಳ್ಳಿ ನಗರದ ಠಾಣಾ ವ್ಯಾಪ್ತಿಯಲ್ಲಿ ಬರುವ ನ್ಯೂ ಹಾರಿಜನ್ ಕಾಲೇಜಿನಲ್ಲಿ ಈ ಘಟನೆ ನಡೆದಿತ್ತು. ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಪಾಕಿಸ್ತಾನ್ ಜಿಂದಬಾದ್ ಎಂದು ಯುವಕ-ಯುವತಿಯರು ಕೂಗಾಡಿದ್ದಾರೆ. ಘಟನೆಯ ಬಗ್ಗೆ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ವಿಡಿಯೋದಲ್ಲಿರುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸದ್ಯ ಪ್ರಕರಣವನ್ನು ಮಾರತ್ತಹಳ್ಳಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಎಸಿಪಿ ಕಿಶೋರ್ ಭರಣಿ ನೇತೃತ್ವದಲ್ಲಿ ನಿನ್ನೆ ತಡರಾತ್ರಿ‌ 10‌ ಗಂಟೆವರೆಗೂ ಆರೋಪಿಗಳ ವಿಚಾರಣೆ ನಡೆಸಲಾಗಿದೆ.ಆರೋಪಿಗಳಾದ ಪಂಜಾಬ್​ ಮೂಲದ ಆರ್ಯನ್, ರಿಯಾ ರವಿಚಂದ್ರ, ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಮೂವರ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ
ವಿಚಾರಣೆ ವೇಳೆ ಬಾಯಿ ಬಿಟ್ಟಿರುವ ವಿದ್ಯಾರ್ಥಿಗಳು ತಮಾಷೆಗಾಗಿ ಪಾಕ್ ಪರ ಘೋಷಣೆ ಕೂಗಿದ್ದೇವೆ ಎಂದಿದ್ದಾರೆ. ಇಂದು ಪೊಲೀಸರು ಮೊಬೈಲ್‌ ಫೋನ್ ಪರಿಶೀಲನೆ ನಡೆಸಲಿದ್ದಾರೆ. ಈ ವಿದ್ಯಾರ್ಥಿಗಳು ದೇಶ ವಿರೋಧಿ ಚಟುವಟಿಕೆಗಳಲ್ಲಿ ನಿರತರಾಗಿರುವವರ ಸಂಪರ್ಕದಲ್ಲಿದ್ದಾರಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ.ಯಾವುದಾದರು ಸಂಘಟನೆಯ ನಂಟು ಈ ವಿದ್ಯಾರ್ಥಿಗಳಿಗೆ ಇದೆಯಾ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.
ಸದ್ಯಕ್ಕೆ ಪ್ರಾಥಮಿಕ ತನಿಖೆಯಲ್ಲಿ ಈ ವಿದ್ಯಾರ್ಥಿಗಳು ಯಾವುದೇ ಸಂಘಟನೆಗಳ ನಂಟು ಹೊಂದಿಲ್ಲ ಎಂದು ಕಂಡು ಬರುತ್ತಿದೆ. ಇಂದು 10 ಗಂಟೆಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಮೂವರನ್ನೂ ಕಾಲೇಜು ಆಡಳಿತ ಮಂಡಳಿ ನವಂಬರ್ 30ರ ವರೆಗೂ ಸಸ್ಪೆಂಡ್ ಮಾಡಿದೆ.
ಈ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಹೊಂದಲು ಇದೇ ವರ್ಷ ಕಾಲೇಜು ಸೇರಿದ್ದರು.ಇವರು ಮೊದಲ‌ ವರ್ಷದ ಎಂಜಿನಿಯರಿಂಗ್​ ವ್ಯಾಸಾಂಗ ಮಾಡುತ್ತಿದ್ದಾರೆ. ಆರ್ಯನ್ ಮೊದಲ ವರ್ಷ ಮೆಕ್ಯಾನಿಕಲ್ ಎಂಜಿನಿಯರ್(ME) ವಿದ್ಯಾರ್ಥಿ. ವಿದ್ಯಾರ್ಥಿನಿ ರಿಯಾ ಮತ್ತು ಮತ್ತೊಬ್ಬ ಆರೋಪಿ ಇನ್ಫಾರ್ಮೇಶನ್ ಸೈನ್ಸ್​ನ(IS) ವಿದ್ಯಾರ್ಥಿಗಳು.
ನಿನ್ನೆ ವಿಚಾರಣೆ ವೇಳೆ ರಿಯಾ ಪೋಷಕರು ಎಸಿಪಿ ಕಿಶೋರ್ ಭರಣಿ ಕಣ್ಣೀರು ಹಾಕಿದ್ದಾರೆ. ‘ಇರೋದು ಒಬ್ಬಳೇ ಮಗಳು. ಹೀಗೆಲ್ಲಾ ಮಾಡುತ್ತಾಳೆ ಎಂದು ಅಂದುಕೊಂಡಿರ್ಲಿಲ್ಲ. ದಯವಿಟ್ಟು ನಮ್ಮನ್ನ ಕ್ಷಮಿಸಿ ಸರ್’ ಎಂದು ಗೋಳಾಡಿದ್ದಾರೆ,
ಕಾಲೇಜಿನಲ್ಲಿ ಇದೇ ತಿಂಗಳ 25 ಮತ್ತು 26 ರಂದು ಫೆಸ್ಟ್ ಇದೆ. ಅದಕ್ಕಾಗಿ ಸಿದ್ಧತೆ ವಿದ್ಯಾರ್ಥಿಗಳು ಮಾಡಿಕೊಳ್ಳುತ್ತಿದ್ದರು. ಹಾಗಾಗಿ ನ.17 ರ ಸಂಜೆ ಒಟ್ಟಿಗೆ ಸೇರಿದ್ದಾರೆ. ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಮಾತುಕತೆ ನಡೆಸುತ್ತಿದ್ದಾಗ ಈ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಹಾಕಿದ್ದಾರೆ.
ಈ ಸಂದರ್ಭ ಇತರೆ ವಿದ್ಯಾರ್ಥಿಗಳು ಮಾತುಕತೆಯನ್ನು ಮೊಬೈಲ್ ನಲ್ಲಿ‌ ಚಿತ್ರೀಕರಣ ಮಾಡಿಕೊಳ್ಳುತ್ತಾ ಇದ್ದರು. ಆಗ ಪಾಕ್ ಪರ ಘೋಷಣೆ ಕೂಗಿದ್ದು ಕೂಡ ಮೊಬೈಲ್ ನಲ್ಲಿ ಸೆರೆಯಾಗಿದೆ. ಅದೇ ವಿಡಿಯೋ ಕ್ಲಿಪ್ ಅನ್ನು ಕಾಲೇಜು ವಿದ್ಯಾರ್ಥಿಗಳ ತಮ್ಮ ಗ್ರೂಪ್​ಗಳಲ್ಲಿ ಶೇರ್ ಮಾಡಿಕೊಂಡಿದ್ದರು.ಅದನ್ನು ನೋಡಿದ ಇತರೆ ವಿದ್ಯಾರ್ಥಿಗಳೂ ಘೋಷಣೆ ಕೂಗಿದ್ದವರ ಮೇಲೆ ಹಲ್ಲೆಗೂ ಮುಂದಾಗಿದ್ದರು. ಈ ಘಟನೆಯ ನಂತರ ಆರೋಪಿಗಳು ಕ್ಷಮೆ ಕೇಳಿದ್ದರು ಎನ್ನಲಾಗಿದೆ. ಈ ಘಟನೆಯ ನಂತರ ಕಾಲೇಜು ಆಡಳಿತ ಮಂಡಳಿ ಅವರನ್ನು ಸಸ್ಪೆಂಡ್​ ಮಾಡಿ ಮಾರತ್ತಹಳ್ಳಿ ಠಾಣೆಗೆ ಬಂದು ದೂರು‌ ದಾಖಲಿಸಿದೆ.
ಕಾಲೇಜೊಂದರ ಕಾರ್ಯಕ್ರಮದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದ ವಿದ್ಯಾರ್ಥಿಗಳು..!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
