ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ವಿಚಿತ್ರವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರಬಿದ್ದಿದೆ. ತನಗಿರುವ ಕಾಯಿಲೆ ಮತ್ತು ಅದರ ಪರಿಣಾಮಗಳ ಬಗ್ಗೆ ಗೂಗಲ್ ಸರ್ಚ್ ಮಾಡಿದ್ದ ಟೆಕ್ಕಿ ಕೊನೆಗೆ ಪಾರ್ಶ್ವವಾಯುವಿಗೆ ತುತ್ತಾಗುತ್ತೇನೆ ಎಂಬ ಭಯದಿಂದ ಸಾವಿಗೆ ಶರಣಾಗಿದ್ದಾನೆ.
ಸಾಫ್ಟ್​ ಇಂಜಿನಿಯರ್ ವಿಜಯ್‌ ಕುಮಾರ್ (51) ಮೃತ ದುರ್ದೈವಿ. ಹೃದಯ ಸಂಬಂಧಿ ಕಾಯಿಲೆಗೆ ಬೇಸತ್ತು ಕಾರಿನಲ್ಲಿ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಮಹಾಲಕ್ಷ್ಮಿ ಲೇಔಟ್​ನ ಕುರುಬರಹಳ್ಳಿ ಜಂಕ್ಷನ್ ಬಳಿ ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತನಗಿದ್ದ ಹೃದಯ ಸಂಬಂಧಿ ಕಾಯಿಲೆ ಬಗ್ಗೆ ತಿಳಿದು ವಿಜಯ್​ ಕುಮಾರ್​ ಖಿನ್ನತೆಗೆ ಒಳಗಾಗಿದ್ದ. ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಾಯಿಲೆಯ ಪರಿಣಾಮಗಳ ಬಗ್ಗೆ ಗೂಗಲ್ ಸರ್ಚ್ ಮಾಡಿದ್ದ ವಿಜಯ್​ ಕೊನೆಗೊಮ್ಮೆ ಪಾರ್ಶ್ವವಾಯುವಿಗೆ ತುತ್ತಾಗುವ ಮಾಹಿತಿ ಸಿಕ್ಕಿತ್ತು‌. ಒಳ್ಳೆಯ ಕೆಲಸ, ಕೈತುಂಬಾ ಸಂಬಳವಿದ್ರೂ ತನ್ನ ಜೀವನ ಹೀಗೆಲ್ಲಾ ಅಂತ್ಯವಾಗಬಹುದು ಅಂತಾ ಭಯಪಟ್ಟು ಮತ್ತಷ್ಟು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ದಾರಿ ಆಯ್ಕೆ ಮಾಡಿಕೊಂಡಿದ್ದಾನೆ.
ಕೊನೆಗೆ ಸಾಯುವುದಕ್ಕೂ ಗೂಗಲ್ ಸರ್ಚ್ ಇಂಜಿನ್ ಬಳಕೆ ಮಾಡಿದ್ದ ವಿಜಯ್ ಕುಮಾರ್, ನೈಟ್ರೋಜನ್ ಗ್ಯಾಸ್ ಸೂಕ್ತವೆಂದು ಅದರ ಸಿಲಿಂಡರ್ ಖರೀದಿ ಮಾಡಿದ್ದ. ಬಳಿಕ ಕುರುಬರಹಳ್ಳಿ ಜಂಕ್ಷನ್ ಬಳಿ ಬಂದು ತನ್ನ ಕಾರಿನ ಹಿಂಬದಿ ಸೀಟ್​ನಲ್ಲಿ ಕುಳಿತುಕೊಂಡಿದ್ದ. ಬಳಿಕ ಅಲ್ಲೇ ಪಕ್ಕದಲ್ಲಿದ್ದ ಪಾನಿಪುರಿ ಮಾರುವ ಹುಡುಗನ ಸಹಾಯ ಕೇಳಿ ಕಾರಿಗೆ ಕವರ್ ಹಾಕುವಂತೆ ಹೇಳಿದ್ದ.
ತನಗೆ ತುಂಬಾ ಸುಸ್ತಾಗುತ್ತಿದೆ. ನಾನು ವಿಶ್ರಾಂತಿ ಪಡೆಯಬೇಕು. ಬಿಸಿಲು ತುಂಬಾ ಇದೆ. ಹೀಗಾಗಿ ಸ್ವಲ್ಪ ಹೊತ್ತು ಮಲಗುವುದಾಗಿ ಹೇಳಿ ಪಾನಿಪುರಿ ಮಾರುವ ಹುಡುಗನ ಬಳಿ ಕಾರಿನ ಕವರ್ ಕೊಟ್ಟು ತಾನು ಕಾರಿನ ಒಳಗೆ ಕುಳಿತ ಬಳಿಕ ಕಾರಿನ ಕವರ್ ಹಾಕುವಂತೆ ಹೇಳಿದ್ದ. ಬಳಿಕ ಕಾರಿನ ಗ್ಲಾಸ್ ಬಂದ್ ಮಾಡಿ, ತನ್ನ ಮುಖಕ್ಕೆ ಕವರ್ ಕಟ್ಟಿಕೊಂಡು ನೈಟ್ರೋಜನ್ ಗ್ಯಾಸ್ ಹಾಯಿಸಿ, ಮೃತಪಟ್ಟಿದ್ದಾನೆ.
ಮೃತ ವಿಜಯ್ ಕುಮಾರ್ ಮಹಾಲಕ್ಷ್ಮಿ ಲೇಔಟ್​ನ ನಿವಾಸಿ. ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದ. ಕಾರನ್ನು ನೋಡಿ ಅನುಮಾನಗೊಂಡ ಸ್ಥಳೀಯರು ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ವಿಜಯ್​ ಕುಮಾರ್​ ಸಾವು ಬದುಕಿನ ನಡುವೆ ಹೋರಾಡತ್ತಿದ್ದ. ಕೂಡಲೇ ಆತನನ್ನು ಅಸ್ಪತ್ರೆಗೆ ದಾಖಲಿಸಲು ಪೊಲೀಸರು ಮುಂದಾದರು. ಆದರೆ, ಮಾರ್ಗಮಧ್ಯೆ ಟೆಕ್ಕಿ ಕೊನೆಯುಸಿರೆಳದನು. ಸದ್ಯ ಯುಡಿಆರ್ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​​)
ಚೀನಾದಲ್ಲಿ ಆರಂಭವಾಗಿದೆ ಅಸಹ್ಯ ಎನಿಸುವ ಹೊಸ ಡೇಟಿಂಗ್​ ಸಂಸ್ಕೃತಿ: ಮೊದಲ ಭೇಟಿಯಲ್ಲೇ ಇದನ್ನು ಮಾಡಬೇಕಂತೆ…

ಮುಂಬರುವ IPL ಹರಾಜಿನಲ್ಲಿ ಈ ಇಬ್ಬರು ಆಟಗಾರರನ್ನು ಟಾರ್ಗೆಟ್​ ಮಾಡಲು ಮುಂಬೈಗೆ ಮಂಜ್ರೇಕರ್ ಸಲಹೆ​

ಮೈಮಾಟ ಪ್ರದರ್ಶಿಸಲು ಹೋಗಿ ಎಡವಟ್ಟು: ದುಬೈನಲ್ಲಿ ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​ ಬಂಧನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten − four =
Remember me
