ಬೆಂಗಳೂರು:ಬೈಕ್​ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಹಾಡಹಗಲೇ ಯುವಕನೊಬ್ಬನನ್ನು ಬೆದರಿಸಿ, ಮೊಬೈಲ್​ ಕಸಿದು ಪರಾರಿಯಾಗಿರುವ ಘಟನೆ ವಿದ್ಯಾರಣ್ಯಪುರ ಬಳಿ ಇರುವ ರಾಮಚಂದ್ರಪುರದ ದೇವಿಕಾ ಬೇಕರಿ ಎದುರು ನಡೆದಿದೆ.
ಸಂತ್ರಸ್ತ ಯುವಕ ಟೀ ಕುಡಿಯಲೆಂದು ಬೇಕರಿ ಬಳಿ ನಿಂತಿದ್ದ. ಈ ವೇಳೆ ಪಲ್ಸರ್ ಬೈಕ್​ನಲ್ಲಿ ಬಂದ ಮೂವರು ದುರುಳರು ಮೊಬೈಲ್ ರಾಬರಿ ಮಾಡಿ ಪರಾರಿಯಾಗಿದ್ದಾರೆ. ದೋಚುವ ಮುನ್ನ ಸುತ್ತಮುತ್ತ ವೀಕ್ಷಣೆ ಮಾಡಿರುವ ದುಷ್ಟರು, ಯಾರೂ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ಕೃತ್ಯ ಎಸಗಿದ್ದಾರೆ.
ಯುವಕ ಎಷ್ಟೇ ಬೇಡಿಕೊಂಡರೂ ಬಿಡದ ಆಗಂತುಕರು ಮೊಬೈಲ್ ದೋಚಿದ್ದಾರೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಡಹಗಲೇ ಇಂತಹ ಘಟನೆ ನಡೆದಿರುವುದು ಪೊಲೀಸ್​ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸುವಂತಿದೆ.(ಏಜೆನ್ಸೀಸ್​)
ಹಾರ ಬದಲಾಯಿಸಿದ ಬೆನ್ನಲ್ಲೇ ಕುಸಿದು ಬಿದ್ದ ವಧು: ಆಸ್ಪತ್ರೆಗೆ ಕರೆದೊಯ್ದ ಕುಟುಂಬಕ್ಕೆ ಕಾದಿತ್ತು ಶಾಕ್​

ಪೊಲೀಸರ ಬೆಂಬಲದೊಂದಿಗೆ ಮದ್ವೆಯಾಗಿ ಹೊಸ ಜೀವನ ಆರಂಭಿಸಿದ ಇಬ್ಬರು ಮಹಿಳಾ ಮಾವೋವಾದಿಗಳು!

ಮೌಲ್ಯವರ್ಧನೆಯಿಂದ ಆದಾಯ ದ್ವಿಗುಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − one =
Remember me
