ಬೆಂಗಳೂರು:ಟೋಲ್​ ಕಟ್ಟು ಅಂದ್ರೆ ವ್ಯಕ್ತಿಯೊಬ್ಬ ಮಚ್ಚು ತೋರಿಸಿ ಬೆದರಿಕೆ ಹಾಕಿ ರಂಪಾಟ ಮಾಡಿರುವ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಸಾದಹಳ್ಳಿ ಟೋಲ್​ನಲ್ಲಿ ನಡೆದಿದೆ.
ದೇವನಹಳ್ಳಿ ತಾಲೂಕಿನ ತೆಲ್ಲೊಹಳ್ಳಿ ನಿವಾಸಿ ಚಂದ್ರಪ್ಪ, ಬೆದರಿಕೆ ಹಾಕಿದ ವ್ಯಕ್ತಿ. ಈತ ದೇವನಹಳ್ಳಿ ಕಡೆಯಿಂದ ಬೆಂಗಳೂರು ಕಡೆಗೆ ಪೋರ್ಡ್ ವಾಹನದಲ್ಲಿ ತೆರಳುತ್ತಿದ್ದ. ಟೋಲ್ ಬಳಿ ನಾವು ಸ್ಥಳೀಯರು ಹಣ ಕಟ್ಟೊದಿಲ್ಲ ಗೇಟ್ ಓಪನ್ ಮಾಡಿ ಅಂತಾ ರಂಪಾಟ ಮಾಡಿದ್ದಾನೆ.
ಈ ವೇಳೆ ಅಲ್ಲಿನ ಸಿಬ್ಬಂದಿ ಐದು ಕಿ.‌ಮೀ ವ್ಯಾಪ್ತಿ ಬಿಟ್ಟು ಎಲ್ಲರು ಟೋಲ್ ಕಟ್ಟಬೇಕು ಅಂತಾ ಸೂಚನೆ ನೀಡಿದ್ದಾರೆ. ಆದರೆ, ಟೋಲ್ ಗೇಟ್ ಓಪನ್ ಮಾಡ್ತಿರೋ ಇಲ್ಲವೋ? ಗೇಟ್​ ತೆರೆಯದಿದ್ದರೆ ಪರಿಣಾಮ ನೆಟ್ಟಿಗಿರಲ್ಲ ಎಂದು ಸಿಬ್ಬಂದಿ ಜತೆ ವಾಗ್ವಾದ ಮಾಡಿದ್ದಾನೆ.
ಟೋಲ್ ನಿರ್ವಾಹಕ ಶ್ರೀಧರ್ ಎಂಬುವವರು ಕೇಳಲು ಹೋದಾಗ ಸೀಟ್ ಕೆಳಗೆ ಇದ್ದ ಮಚ್ಚು ತೆಗೆದು ಟೋಲ್ ಎತ್ತೋ ಎಂದು ಬೆದರಿಕೆ ಹಾಕಿದ್ದಾನೆ. ಮಚ್ಚು ತೋರಿಸುತ್ತಿದ್ದಂತೆ ಟೋಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಚಿಕ್ಕಜಾಲ ಪೊಲೀಸರು ರಂಪಾಟ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆದು ಕಾರು ಸೀಜ್ ಮಾಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಹಿರಿಯರ ಮಾತಿಗೆ ಬೆಲೆ ಕೊಟ್ಟು ಬಂದ ಯುವಕನಿಗೆ ಪ್ರೇಯಸಿ ಮುಂದೆಯೇ ಬಿಗ್​ ಶಾಕ್​!

ಅರವಿಂದ್​ಗೆ ಟ್ರೋಫಿ ಗೆಲ್ಲುವ ಅವಕಾಶ ಕಸಿದ ಎರಡನೇ ಇನ್ನಿಂಗ್ಸ್​: ಇಲ್ಲಿದೆ ಅಚ್ಚರಿಯ ಮಾಹಿತಿ!

ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡ್ತಿದ್ದ ಇಂಜಿನಿಯರ್​ ಸಮುದ್ರಕ್ಕೆ ಹಾರಿ ಆತ್ಮಹತ್ಯೆ

Sign in to your account
Please enter an answer in digits:sixteen + 18 =
Remember me
