ಬೆಂಗಳೂರು:ಸಿಲಿಕಾನ್​ ಸಿಟಿಯ ಬಹುದೊಡ್ಡ ಸಮಸ್ಯೆಯೆಂದರೆ ಅದು ಟ್ರಾಫಿಕ್. ಪ್ರತಿನಿತ್ಯ ಸಾಕಷ್ಟು ಮಂದಿ ಟ್ರಾಫಿಕ್​ನಿಂದಾಗಿ ತುಂಬಾ​ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಅದೇ ಟ್ರಾಫಿಕ್​ ಮಗುವೊಂದನ್ನು ಬಲಿ ಪಡೆದುಕೊಂಡಿದೆ.
ಬೆಂಗಳೂರಿನ ನೆಲಮಂಗಲದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಟ್ರಾಫಿಕ್​ ಜಾಮ್​ನಿಂದಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಒಂದೂವರೆ ವರ್ಷದ ಮಗು ದುರಂತ ಸಾವಿಗೀಡಾಗಿದೆ.
ಮಗುವನ್ನು ತುರ್ತು ಚಿಕಿತ್ಸೆಗೆಂದು ಹಾಸನದಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಆಂಬ್ಯುಲೆನ್ಸ್​ನಲ್ಲಿ ಕರೆತರಲಾಗುತ್ತಿತ್ತು. ಹಾಸನದಿಂದ ಕೇವಲ ಒಂದು ಗಂಟೆಯಲ್ಲೇ ಜೀರೋ ಟ್ರಾಫಿಕ್​ನಲ್ಲಿ ಮಗು ನೆಲಮಂಗಲ ತಲುಪಿತ್ತು. ಆದರೆ, ನೆಲಮಂಗಲದಿಂದ ಗೊರಗುಂಟೆಪಾಳ್ಯ ರಸ್ತೆಯಲ್ಲಿ ಆಂಬ್ಯುಲೆನ್ಸ್​ ಟ್ರಾಫಿಕ್​ನಲ್ಲಿ ಸಿಲುಕಿತು.
ಟ್ರಾಫಿಕ್​ನಲ್ಲಿ ಸಿಲುಕಿ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಏನು ಅರಿಯದ ಕಂದಮ್ಮ ಪ್ರಾಣ ಬಿಟ್ಟಿದೆ. ನೆಲಮಂಗಲದಿಂದ ಗೊರಗುಂಟೆಪಾಳ್ಯಗೆ ಟ್ರಾಫಿಕ್ ಜಾಮ್​ ಹಿನ್ನೆಲೆ ಸುಮಾರು 20 ನಿಮಿಷಕ್ಕೂ ಹೆಚ್ಚು ಸಮಯ ವ್ಯರ್ಥವಾಯಿತು. ಇದರ ನಡುವೆ ಸರಿಯಾದ ಚಿಕಿತ್ಸೆ ಸಿಕ್ಕಿದ್ದರೆ ಮಗು ಬದುಕುಳಿಯುವ ಸಾಧ್ಯತೆ ಇತ್ತು. ಆದರೆ, ಆಂಬ್ಯುಲೆನ್ಸ್​ಗೆ ದಾರಿ ಸಿಗದೇ ಮಗು ಮೃತಪಟ್ಟಿದೆ.(ದಿಗ್ವಿಜಯ ನ್ಯೂಸ್​)
ಅದಾನಿ ಗ್ರೂಪ್​ಗೆ 21 ಸಾವಿರ ಕೋಟಿ ರೂ. ಸಾಲ: ಚಿಂತಿಸುವ ಅಗತ್ಯವಿಲ್ಲ ಎಂದ SBI ಚೇರ್ಮನ್​

ರಾಯಲ್​ ಎನ್​ಫೀಲ್ಡ್​ಗೆ ಕೆಟಿಎಂ ಬೈಕ್​ಗೆ ಡಿಕ್ಕಿ: ಯುವತಿ ದುರಂತ ಸಾವು, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಘಟನೆ

ರಾಜ್ಯ ಸರ್ಕಾರಕ್ಕೆ ಸೇರಬೇಕಾದ 76 ಲಕ್ಷ ರೂ. ಗುಳುಂ! ಡಿ‌ ಗ್ರೂಪ್​ ನೌಕರನ ಕೈಚಳಕ, ಪತ್ನಿ, ನೆಂಟರ ಖಾತೆಗೆ ಹಣ ಜಮೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 18 =
Remember me
