ಬೆಂಗಳೂರು:ಮಡಿವಾಳ ಸಂಚಾರ ಪೊಲೀಸ್ ಠಾಣೆಯ ಎದುರು ಆಹಾರವಿಲ್ಲದೆ ನಿತ್ರಾಣವಾಗಿ ಬಿದ್ದಿದ್ದ ಹದ್ದನ್ನು ಸಂರಕ್ಷಿಸಿದ ಪೊಲೀಸರು ಬನ್ನೇರುಘಟ್ಟದಲ್ಲಿರುವ ಪ್ರಾಣಿ ದಯಾ ಸಂಘಕ್ಕೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಎರಡು ದಿನಗಳಿಂದ ಮಡಿವಾಳ ಸಂಚಾರ ಠಾಣೆಯ ಆಸುಪಾಸಿನಲ್ಲಿ ಹಾರಾಡುತ್ತಿದ್ದ ಹದ್ದೊಂದು ಶುಕ್ರವಾರ ಬೆಳಗ್ಗೆ ಹಾರಲಾಗದೆ ಠಾಣೆಯ ಮುಂಬಾಗ ಬಿದ್ದಿತ್ತು. ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರು ಈ ಹದ್ದನ್ನು ಗಮನಿಸಿ ಆಹಾರ ನೀಡಿ ಆರೈಕೆ ಮಾಡಿದ್ದಾರೆ ಎಂದು ಮಡಿವಾಳ ಸಂಚಾರ ಠಾಣೆ ಪಿಎಸ್‌ಐ ಶಿವರಾಜ್ ಕುಮಾರ್ ಅಂಗಡಿ ತಿಳಿಸಿದ್ದಾರೆ.
ಲಾಕ್‌ಡೌನ್ ಆಗಿರುವುದರಿಂದ ನೀರು, ಆಹಾರ ಸಿಗದೆ ಸಾವಿರಾರು ಪಕ್ಷಿಗಳು ಕಷ್ಟ ಅನುಭವಿಸುತ್ತಿವೆ. ಈ ಹಿಂದೆ ಹೋಟೆಲ್, ಅಂಗಡಿಗಳ ಮುಂದೆ ಇಡಲಾಗುತ್ತಿದ್ದ ಆಹಾರಗಳು ಪಕ್ಷಿಗಳಿಗೆ ಆಸರೆಯಾಗಿದ್ದವು.
ಇಲ್ಲಿದೆ ನೋಡಿ ಶುಭ ಸುದ್ದಿ: ದೇಶದಲ್ಲಿ ಹೆಚ್ಚುತ್ತಿದೆ ಕರೊನಾವನ್ನೇ ಮಣಿಸಿ ಗುಣಮುಖ ಆಗುತ್ತಿರುವ ಸೋಂಕಿತರ ಸಂಖ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 5 =
Remember me
