| ಮೃತ್ಯುಂಜಯ ಕಪಗಲ್ ಬೆಂಗಳೂರು
ವಿಧಾನಪರಿಷತ್​ನಲ್ಲಿ ಬಲ ಹೆಚ್ಚಿಸಿಕೊಳ್ಳುವುದು ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಪ್ರತಿಷ್ಠೆಯಾಗಿದ್ದರೆ, ತನ್ನ ಭದ್ರಕೋಟೆ ಉಳಿಸಿಕೊಳ್ಳುವ ಛಲ ಜೆಡಿಎಸ್​ಗೆ. ಇನ್ನು ಕಾಂಗ್ರೆಸ್​ಗೆ ಅಸ್ತಿತ್ವದ ಪ್ರಶ್ನೆ. ಮೇಲ್ಮನೆಯ ಇತ್ತೀಚಿನ ಅಧಿವೇಶನದಲ್ಲಿ ಕೈಗಾರಿಕಾ ವಿವಾದಗಳ ತಿದ್ದುಪಡಿ ಮಸೂದೆಗೆ ಸೋಲು, ಆಹೋರಾತ್ರಿ ಚರ್ಚೆ ನಡೆದರೂ ಭೂಸುಧಾರಣೆ, ಎಪಿಎಂಸಿ ಇನ್ನಿತರ ಮಹತ್ವದ ಮಸೂದೆಗಳು ಪರ್ಯಾಲೋಚನೆಗೂ ಬಾರದೆ ಬಿಜೆಪಿ ಸರ್ಕಾರ ಮುಖಭಂಗ ಅನುಭವಿಸಿದೆ. ಬಹುಮತ ಇಲ್ಲದಿರುವುದು, ಕಾಂಗ್ರೆಸ್-ಜೆಡಿಎಸ್ ಒಂದಾಗಿ ತಿರುಗಿ ಬಿದ್ದದ್ದು ಹಿನ್ನೆಡೆಗೆ ಕಾರಣವೆಂದು ಕಮಲ ನಾಯಕರಿಗೆ ಗೊತ್ತಿದೆ. ಹೀಗಾಗಿ ಚುನಾವಣೆ ಘೋಷಿತ 4 ವಿಧಾನಪರಿಷತ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಸಂಖ್ಯಾಬಲ ವೃದ್ಧಿಸಿಕೊಳ್ಳುವ ಪಣತೊಟ್ಟಿದೆ.
ರಾಜಕೀಯ ಅಧಿಕಾರ ಶಕ್ತಿ ಕೇಂದ್ರದಲ್ಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರ ಅತ್ಯಂತ ಪ್ರಭಾವಿ, ನೀತಿ- ನಿರೂಪಣೆ ದೃಷ್ಟಿಯಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಬದಲಾದ ರಾಜಕೀಯ ವಿದ್ಯಮಾನ, ಜಾತಿವಾರು ಲೆಕ್ಕಾಚಾರ ಕ್ಷೇತ್ರದ ರಾಜಕೀಯ ನಕ್ಷೆ ಬದಲಾಯಿಸಿದೆ. ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸಿನ ಜತೆಗೆ ಆಯಾ ಪಕ್ಷಗಳ ಪ್ರಭಾವವೂ ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಹಾಗೆಯೇ ಕರೊನಾ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ಹೆಸರು ನೋಂದಣಿಯಲ್ಲೂ ಅರ್ಹ ಶಿಕ್ಷಕರು ಹೆಚ್ಚಿನ ಉತ್ಸಾಹ ತೋರಿಸದಿರುವುದು ಎದ್ದು ಕಾಣುತ್ತಿದೆ.
ಶಿಕ್ಷಣ ಕ್ಷೇತ್ರ ಬೆಳೆದಂತೆ ಸಮಸ್ಯೆಗಳೂ ಏರುಮುಖವಾಗುತ್ತಿದ್ದು, ಅನುದಾನರಹಿತ ಶಾಲೆಗಳ ಶಿಕ್ಷಕರ ವೇತನ ಸಮಸ್ಯೆಯೇ ಈ ಸಲದ ಚುನಾವಣಾ ಕಾರ್ಯಸೂಚಿಯಾಗಲಿದೆ. ಶಿಕ್ಷಕರ ಜತೆಗೆ ನಿಕಟ ಬಾಂಧವ್ಯ, ಸಮಸ್ಯೆಗಳಿಗೆ ಸ್ಪಂದನೆ, ಶಿಕ್ಷಣ ಸಂಸ್ಥೆಗಳು ಹಾಗೂ ಸಂಘಟನೆಗಳೊಂದಿಗೆ ಒಡನಾಟವೇ ಪೈಪೋಟಿಗೆ ಇಳಿದವರ ಭವಿಷ್ಯ ನಿರ್ಧರಿಸಿರುವುದು ಎಂಬುದನ್ನು ಈವರೆಗಿನ ಚುನಾವಣೆ ಫಲಿತಾಂಶಗಳು ಸಾರಿ ಹೇಳುತ್ತವೆ.
ಅಭ್ಯರ್ಥಿಗಳ ಕಸರತ್ತು:ಜೆಡಿಎಸ್​ನಿಂದ 3 ಬಾರಿ ಗೆದ್ದಿರುವ ಪುಟ್ಟಣ್ಣ ಈ ಸಲ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಹಿಂದಿನ ಸಾಧನೆ, ಮುಂದಿನ ಗುರಿ ಇಟ್ಟುಕೊಂಡು ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ಪರಿಣತರು, ತಮ್ಮದೆ ಆದ ಪ್ರಭಾವ ಬೀರುವವರ ಒಲವು ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡಿರುವ ಜೆಡಿಎಸ್​ನ ಎ.ಪಿ.ರಂಗನಾಥ ವಕೀಲರಾಗಿ ಚಿರಪರಿಚಿತರು. ವಕೀಲರ ಸಂಘ- ಸಂಸ್ಥೆಗಳಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸಿದ್ದು, ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರೂ ಆಗಿದ್ದವರು. ಪಕ್ಷದ ಗಟ್ಟಿ ನೆಲೆ, ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ವರ್ಚಸ್ಸನ್ನು ನೆಚ್ಚಿಕೊಂಡಿದ್ದಾರೆ. ಪ್ರಬಲ ನಾಯಕರ ವರ್ಚಸ್ಸು ಹಾಗೂ ಪಕ್ಷ ಅಧಿಕಾರದಲ್ಲಿದ್ದಾಗ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮುಂದಿಟ್ಟುಕೊಂಡು ಕಾಂಗ್ರೆಸ್ ಉಮೇದುವಾರ ಪ್ರವೀಣ್ ಪೀಟರ್ ಕಸರತ್ತು ನಡೆಸಿದ್ದು, ರಾಜಧಾನಿಯ ಅನೇಕ ಶಿಕ್ಷಣ ಸಂಸ್ಥೆಗಳ ಜತೆಗಿನ ಸಂಪರ್ಕ ನೆರವಿಗೆ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಕ್ಷೇತ್ರದ ವ್ಯಾಪ್ತಿ
ಬೆಂಗಳೂರು ನಗರ, ಗ್ರಾಮೀಣ, ರಾಮನಗರ ಜಿಲ್ಲೆಗಳು. 5 ಲೋಕ ಸಭಾ ಹಾಗೂ 36 ವಿಧಾನಸಭಾ ಕ್ಷೇತಗಳನ್ನು ಒಳಗೊಂಡಿದೆ. ಸರ್ಕಾರಿ, ಖಾಸಗಿ ಅನುದಾನಿತ, ಅನುದಾನರಹಿತ ಸೇರಿ 6,500 ಶಿಕ್ಷಣ ಸಂಸ್ಥೆಗಳಿರುವ ಅಂದಾಜು.
ರಾಜಕೀಯ ಬಲಾಬಲ
ಲೋಕಸಭಾ ಸದಸ್ಯರು- 4 ಬಿಜೆಪಿ, 1 ಕಾಂಗ್ರೆಸ್. ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್ ತಲಾ 14, ಜೆಡಿಎಸ್-6, ಪಕ್ಷೇತರ-1 ಮತ್ತು ಆರ್.ಆರ್.ನಗರ ಸದ್ಯಕ್ಕೆ ಖಾಲಿ ಇದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾಯಿತ ಆಡಳಿತ ಮಂಡಳಿ ಅವಧಿ ಮುಗಿದು, ಆಡಳಿತಾಧಿಕಾರಿ ನೇಮಕವಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + sixteen =
Remember me
