ಬೆಂಗಳೂರು:ವಿಧಾನಸೌಧದ ಬಳಿ ಈ ಹಿಂದೆ ಹತ್ತು ಲಕ್ಷ ರೂ. ಹಣ ಪತ್ತೆಯಾಗಿದ್ದ ಪ್ರಕರಣ ರಾಜ್ಯದಲ್ಲಿ ಭಾರೀ ಸುದ್ದಿಯಾಗಿತ್ತು. ಇದೀಗ ವಿಧಾನಸೌಧ ಠಾಣಾ ಪೊಲೀಸರು ಕೊನೆಗೂ ಹಣದ ಮೂಲವನ್ನು ಪತ್ತೆ ಹಚ್ಚಿದ್ದಾರೆ.
ಇಂಜಿನಿಯರ್​ ಜಗದೀಶ್​ ಮೂವರು ವ್ಯಕ್ತಿಗಳಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದ. ಗುತ್ತಿಗೆದಾರರೊಬ್ಬರಿಂದ ಐದು ಲಕ್ಷ ಹಾಗೂ ತನ್ನಿಬ್ಬರು ಸಹೋದ್ಯೋಗಿಗಳ ಬಳಿ ತಲಾ 3.5 ಮತ್ತು 1.5 ಲಕ್ಷ ರೂ. ಹಣ ಸಾಲ ಪಡೆದಿದ್ದ. ಜಗದೀಶ್​ಗೆ ಹಣ ಕೊಟ್ಟ ಮೂವರು ವ್ಯಕ್ತಿಗಳನ್ನು ವಿಚಾರಣೆ ನಡೆಸಿರುವ ವಿಧಾನಸೌಧ ಪೊಲೀಸರು ಹೇಳಿಕೆನ್ನು ದಾಖಲಿಸಿದ್ದಾರೆ.
ಪೊಲೀಸರ ತನಿಖೆ ವೇಳೆ ಜಗದೀಶ್ ಮೇಲೆ ಚೆಕ್ ಬೌನ್ಸ್ ಪ್ರಕರಣ ಇರುವುದು ಬೆಳಕಿಗೆ ಬಂದಿದೆ. ಚೆಕ್​​ಬೌನ್ಸ್ ಪ್ರಕರಣ ಸಂಬಂಧ ಹಣ ಮರುಪಾವತಿಗೆ ಜಗದೀಶ್​ ಹಣ ಹೊಂದಿಸಿದ್ದ ಎಂದು ತಿಳಿದುಬಂದಿದೆ. ಸದ್ಯ ಹಣ ಕೊಟ್ಟವರ ಹೇಳಿಕೆ ದಾಖಲಿಸಿ, ಅಂತಿಮ ಹಂತದ ತನಿಖೆಯನ್ನು ನಡೆಸಲಾಗುತ್ತಿದೆ.
ಚೆಕ್​​​ಬೌನ್ಸ್ ಸಂಬಂಧ ಬ್ಯಾಂಕ್ ವ್ಯವಹಾರ ಮಾಹಿತಿ, ಪ್ರಕರಣ ವಿವರಗಳ ಸಂಗ್ರಹ ಮಾಡಿರುವ ವಿಧಾನಸೌಧ ಪೊಲೀಸರು ಅಂತಿಮ ಹಂತದ ತನಿಖೆ ನಡೆಸಿ, ಪ್ರಕರಣಕ್ಕೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ.
ಪ್ರಕರಣ ಹಿನ್ನೆಲೆಜನವರಿ 5ರಂದು ವಿಧಾನಸೌಧದ ಪೂರ್ವ ಗೇಟ್​ನಲ್ಲಿ 10 ಲಕ್ಷ ರೂಪಾಯಿ ಹಣವನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಕೇಂದ್ರ ಡಿಸಿಪಿ ಶ್ರೀನಿವಾಸ ಗೌಡ ಹೇಳಿಕೆ ನೀಡಿ, PWD ಇಲಾಖೆಯ ಜೂನಿಯರ್ ಇಂಜಿನಿಯರ್ ಜಗದೀಶ್​ ಹಣದ ಸಹಿತ ಬಂದಿದ್ದರು. ಈ ವೇಳೆ ವಿಧಾನ ಸೌಧ ಮತ್ತು ವಿಕಾಸ ಸೌಧದ ಭದ್ರತಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಹಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ, ಅವರ ಬಳಿ ಸರಿಯಾದ ಉತ್ತರ ಇಲ್ಲ. ಸದ್ಯ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದ್ದರು.(ದಿಗ್ವಿಜಯ ನ್ಯೂಸ್​)
ಯಾವ ರೀತಿ ಮಲಗುವುದು ಉತ್ತಮ? ಯುವತಿಯ ಡಬಲ್​ ಮೀನಿಂಗ್​ ಪ್ರಶ್ನೆ, ಸಿಟ್ಟಿಗೆದ್ದ ಆಟೋ ಚಾಲಕರು

ಚಿತ್ರ ಬಿಡುಗಡೆ ಬೆನ್ನಲ್ಲೇ ಕೋಟಿ ಗಳಿಕೆ​ ಪೋಸ್ಟ್​: ಮಲಯಾಳಂ ಇಂಡಸ್ಟ್ರಿಗೆ IT ಶಾಕ್​, 225 ಕೋಟಿ ರೂ. ಕಪ್ಪುಹಣ ಪತ್ತೆ

ಶಿವರಾತ್ರಿ ಹಿನ್ನೆಲೆ ಸೋಮನಾಥ ದೇವಸ್ಥಾನಕ್ಕೆ ಮಗನ ಜತೆ ಮುಕೇಶ್​ ಅಂಬಾನಿ ಭೇಟಿ: 1.51 ಕೋಟಿ ರೂ. ದೇಣಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 11 =
Remember me
