ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಹಿಂದಿನ ಮಾಸ್ಟರ್ ಮೈಂಡ್ ಎಸ್​ಡಿಪಿಐ ಮುಖಂಡ ಫೈರೋಜ್ ಪಾಷ ಎಂಬುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಇದರ ಬೆನ್ನಲ್ಲೇ ನಾಗವಾರ ವಾರ್ಡ್​ನ ಕಾಪೋರೇಟರ್ ಇರ್ಷಾದ್ ಬೇಗಂ ಪತಿ ಕಲೀಲ್ ಪಾಷನನ್ನು ಗುರುವಾರ ರಾತ್ರಿ ಸಿಸಿಬಿ ಪೊಲೀಸರು ಬಂಧಿಸಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 213ಕ್ಕೆ ಏರಿಕೆಯಾಗಿದೆ. 29 ಎಫ್​ಐಆರ್ ದಾಖಲಾಗಿವ
ಟಿಪ್ಪು ಹೆಸರಿನಲ್ಲಿ ವಾಟ್ಸ್​ಆಪ್ ಗ್ರೂಪ್ ಮಾಡಿಕೊಂಡಿದ್ದ ಫೈರೋಜ್ ಪಾಷ, ಸಿವಿಲ್ ಡಿಫೆನ್ಸ್​ನಲ್ಲಿ ಕರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದ. ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸೇರಿ ಕಾಂಗ್ರೆಸ್​ನ ಹಿರಿಯ ಮುಖಂಡರ ಜತೆ ಫೋಟೋ ತೆಗೆಸಿಕೊಂಡು ಫೇಸ್​ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದ. ಆ.11ರ ಸಂಜೆ ಫೇಸ್​ಬುಕ್​ನಲ್ಲಿ ನವೀನ್ ಹಾಕಿದ್ದ ವಿವಾದಾತ್ಮಕ ಪೋಸ್ಟ್ ಅನ್ನು ಸ್ಕ್ರೀನ್ ಶಾಟ್ ತೆಗೆದು ವ್ಯಾಟ್ಸ್​ಆಪ್​ನಲ್ಲಿ ವೈರಲ್ ಮಾಡಿದ್ದ. ನಗರ ಜಿಲ್ಲಾ ಘಟಕದ ಕಾರ್ಯದರ್ಶಿ ಮುಜಾಮಿಲ್ ಪಾಷ, ನಮ್ಮ ಧರ್ಮ ಗುರುವಿನ ಬಗೆ್ಗ ಅವಹೇಳನ ಮಾಡಿರುವುದನ್ನು ಖಂಡಿಸಿ ಶಾಸಕರು ಹಾಗೂ ನವೀನ್ ಮನೆ ಮುಂದೆ ಪ್ರತಿಭಟನೆ ನಡೆಸಲು ಆಗಮಿಸುವಂತೆ ಎಸ್​ಡಿಪಿಐ ಕಾರ್ಯಕರ್ತರಿಗೆ ಪ್ರಚೋಧಿಸಿದ್ದ. ಡಿ.ಜೆ.ಹಳ್ಳಿಯ ಅಫ್ನಾನ್, ಸೈಯದ್ ಮಸೂದ್, ಅಯಾಜ್ ಹಾಗೂ ಅಲ್ಲಾಬಕ್ಷ್ ಸೇರಿ ಪ್ರಮುಖರ ಜತೆ ಮಾತುಕತೆ ನಡೆಸಿ, ಬೇರೆಬೇರೆ ಕಡೆಗಳಿಂದ ಜನ ಜಮಾವಣೆಯಾಗುವಂತೆ ಫೈರೋಜ್ ಮತ್ತು ಮುಜಾಮಿಲ್ ಸಂಘಟಿಸಿದ್ದರು. ಅದೇ ದಿನ ಸಂಜೆ 6.30ಕ್ಕೆ ಡಿ.ಜೆ.ಹಳ್ಳಿ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಈ ದೂರು ಸ್ವೀಕರಿಸಿದ ಇನ್​ಸ್ಪೆಕ್ಟರ್ ಕೇಶವಮೂರ್ತಿ, ಆರೋಪಿಯನ್ನು ಬಂಧಿಸಲು 2 ಗಂಟೆ ಅವಕಾಶ ನೀಡುವಂತೆ ಕೇಳಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದಾಗ ಏಕಾಏಕಿ ಠಾಣೆಗೆ ನುಗ್ಗಿ ದಾಂಧಲೆ ಆರಂಭಿಸಿದ್ದರು.
ಇದನ್ನೂ ಓದಿ:ವಾರದಲ್ಲಿ ಎರಡು ಸಾವಿರ ಹೆಚ್ಚುವರಿ ವೈದ್ಯರು ಕೊವಿಡ್ ಚಿಕಿತ್ಸೆಗೆ ಲಭ್ಯ; ಸಚಿವ ಸುಧಾಕರ್ ಮಾಹಿತಿ
ಹೆಣ್ಣು ಮಕ್ಕಳಿಗೆ ಎಚ್ಚರಿಕೆ:
ಗಲಭೆಗೂ ಮೊದಲು ಕಿಡಿಗೇಡಿಗಳು ತಮ್ಮ ಏರಿಯಾಗಳಲ್ಲಿ ಸುತ್ತಾಡಿ ಮನೆ ಮನೆಗೆ ಹೋಗಿ ಮನೆಯಿಂದ ಹೊರಗೆ ಹೆಣ್ಣು ಮಕ್ಕಳು ಮತ್ತು ಮಹಿಳೆಯರು, ವಯಸ್ಸಾದವರು ಬರದಂತೆ ಎಚ್ಚರಿಕೆ ಕೊಟ್ಟಿದ್ದರು. ಇದಕ್ಕೇಂದು ಒಂದು ತಂಡವನ್ನು ಎಲ್ಲೆಡೆ ಕಳುಹಿಸಿ ಪ್ರಚಾರ ಮಾಡಿಸಿದ್ದರು.
ಕಾಪೋರೇಟರ್ ಪತಿ ಸೆರೆನಾಗವಾರ ವಾರ್ಡ್​ನ ಇರ್ಷಾದ್ ಬೇಗಂ ಪತಿ ಕಲೀಲ್ ಪಾಷ ಕೂಡ ಗಲಭೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂಬುದು ಬಂಧಿತರ ವಿಚಾರಣೆ ವೇಳೆ ಗೊತ್ತಾಗಿದೆ. ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ನೇತೃತ್ವದ ತಂಡ ತಡರಾತ್ರಿ ಕಾಪೋರೇಟರ್ ಮನೆ ಮೇಲೆ ದಾಳಿ ನಡೆಸಿ ಆಕೆಯ ಪತಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ಗಲಭೆ ವೇಳೆ ಯಾರು ಎಲ್ಲಿ ಇರಬೇಕು. ಏನು ಮಾಡಬೇಕೆಂದು ಯೋಜನೆ ರೂಪಿಸಿ ಗುಂಪೊಂದನ್ನು ಠಾಣೆ ಬಳಿಗೆ ಕರೆತಂದು ಬಿಟ್ಟು ಅಲ್ಲಿಂದ ನಿಧಾನವಾಗಿ ಕಲೀಲ್ ಎಸ್ಕೇಪ್ ಆಗಿದ್ದ. ಗಲಾಟೆ ಬಳಿಕ ಮತ್ತೆ ಠಾಣೆ ಬಳಿ ಬಂದು ಪೊಲೀಸರಿಗೆ ಸಹಕರಿಸುವಂತೆ ನಟಿಸಿದ್ದ.
ಇದನ್ನೂ ಓದಿ:ಮನೆಯ ನಾಲ್ಕು ಕಡೆ ನಾಲ್ಕು ಶವಗಳು; ನಿಧಿಗಾಗಿ ಹಿತ್ತಲಿನಲ್ಲಿ ನಡೆಸಿದ್ದರಾ ಕ್ಷುದ್ರಪೂಜೆ?
ಬಳ್ಳಾರಿ ಜೈಲಿಗೆ 127 ಕೈದಿಗಳು:ಗುರುವಾರ ರಾತ್ರೋರಾತ್ರಿ 127 ಆರೋಪಿಗಳನ್ನು ಬಳ್ಳಾರಿ ಜೈಲಿಗೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಸಿಸಿಬಿ ಮತ್ತು ಕೆಎಸ್​ಆರ್​ಪಿ ಪಡೆ ಭದ್ರತೆಯಲ್ಲಿ ಸ್ಥಳಾಂತರ ಮಾಡಲಾಗಿದೆ. ಆರೋಪಿಗಳು ಬೆಂಗಳೂರಲ್ಲೇ ಇದ್ದರೇ ಗಲಾಟೆ ಸಾಧ್ಯತೆ ಇರುವುದರಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕರೊನಾ ಮುಂಜಾಗ್ರತೆ ನಡುವೆ ಸ್ವಾತಂತ್ರ್ಯ ಸಂಭ್ರಮ: ಸೀಮಿತ ಸಂಖ್ಯೆಯ ಗಣ್ಯರಿಗೆ ಆಹ್ವಾನ
ಶಾಸಕರಿಂದ ಪೊಲೀಸರಿಗೆ ದೂರು:ಶಾಸಕ ಅಖಂಡ ಶ್ರೀನಿವಾಸ್​ಮೂರ್ತಿ, 3 ದಿನಗಳ ಬಳಿಕ ಡಿ.ಜೆ.ಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಆ.11ರಂದು ಗಲಭೆಕೋರರು ಕಾವಲುಭೈರಸಂದ್ರ ಮನೆಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿ ಚಿನ್ನಾಭರಣ ಕದ್ದು, 3 ಕೋಟಿ ರೂ. ನಷ್ಟು ಉಂಟು ಮಾಡಿದ್ದಾರೆ. ಆರೋಪಿಗಳು ಯಾರೆಂದು ಗೊತ್ತಿಲ್ಲ. ಕಿಡಿಗೇಡಿಗಳನ್ನು ಪತ್ತೆಮಾಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಸಂಜೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ಭೇಟಿ ಮಾಡಿ ತನ್ನ ಕುಟುಂಬಕ್ಕೆ ಹೆಚ್ಚಿನ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.
VIDEO: ಟಾಟಾ ನ್ಯಾನೋ ಕಾರಿಗಿಂತಲೂ ಚಿಕ್ಕ ಕಾರು ಇದು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − thirteen =
Remember me
