ಬೆಂಗಳೂರು:ಯಾರು ಏನೇ ಅಂದರೂ ವಿರೋಧ ಮಾಡಿದರೂ ಬೆಂಗಳೂರು ನಿವಾಸಿಗಳಿಗೆ ಪೂರೈಸುತ್ತಿರುವ ಕುಡಿಯುವ ನೀರಿನ ದರ ಹೆಚ್ಚಳ ಶತಃಸಿದ್ಧವೆಂದು ಬೆಂಗಳೂರು ನಗರಾಭಿವೃದ್ಧಿ ಹೊಣೆ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಘಂಟಾೋಷವಾಗಿ ಸಾರಿದರು.
ವಿಧಾನಸೌಧ ಮಹಾದ್ವಾರದ ಮೆಟ್ಟಿಲು ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಬಾಗಿಲಿಗೆ ಬರಲಿದೆ ಕಾವೇರಿ ಸಂಪರ್ಕ, 110 ಹಳ್ಳಿಗಳಿಗೆ ಕಾವೇರಿ ಸಂಪರ್ಕ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರು ನಗರ ಜಲ ಮಂಡಳಿ ಕಷ್ಟಪಟ್ಟು ನೀರು ಪೂರೈಕೆ ನಿರ್ವಹಿಸುತ್ತಿದೆ. ಕಳೆದ 12-13 ವರ್ಷಗಳಿಂದ ನೀರಿನ ದರ ಏರಿಸಿಲ್ಲ. ರಾಜಧಾನಿಯ 1.40 ಕೋಟಿ ಜನರಿಗೆ ನೀರು ಒದಗಿಸಲೇಬೇಕು.
ಇದಕ್ಕಾಗಿ ಸಾಲ ಮಾಡಿ, ಸಂಪರ್ಕ ಜಾಲ ಹೆಚ್ಚಿಸದಿದ್ದರೆ ನೀರು ಪೂರೈಕೆ ಕಷ್ಟಕರ. ನೀರಿನ ದರ ಹೆಚ್ಚಳ ಮಾಡದಿದ್ದರೆ ಸಂಸ್ಥೆ ಉಳಿಯವುದಿಲ್ಲ, ನೌಕರರು ಬದುಕಲು ಆಗುವುದಿಲ್ಲ, ವಿದ್ಯುತ್ ಬಿಲ್ ಕಟ್ಟಲೂ ಆಗುತ್ತಿಲ್ಲ ಎಂದು ಹೇಳಿದರು.
ನೀರಿನ ದರ ಏರಿಕೆ ಪ್ರಮಾಣ ಇನ್ನೂ ನಿರ್ಧರಿಸಿಲ್ಲ, ಎಲ್ಲರಿಗೂ ಹೆಚ್ಚಿಸುವುದಿಲ್ಲ. ದರ ಪರಿಷ್ಕರಣೆ ಮಾಡುವುದಂತೂ ನಿಶ್ಚಿತ. ಈ ವಿಚಾರದಲ್ಲಿ ಚರ್ಚೆ, ವಿರೋಧ, ಧರಣಿ ಮಾಡಿದರೂ ದರ ಏರಿಕೆ ಮಾಡಲು ಬದ್ಧವಾಗಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಪುನರುಚ್ಚರಿಸಿದರು.
ವಿದ್ಯುತ್ ದರ 14 ವರ್ಷಗಳಲ್ಲಿ ಸಾಕಷ್ಟು ಬಾರಿ ಹೆಚ್ಚಳವಾಗಿದೆ. ಇದಕ್ಕಾಗಿ ಇಲಾಖೆಯದೇ ಪ್ರತ್ಯೇಕ ವಿದ್ಯುತ್ ಕಂಪನಿ ಸ್ಥಾಪಿಸುವುದು ಸೂಕ್ತ. ಸೋಲಾರ್ ಸೇರಿ ಇತರೆ ಮೂಲಗಳಿಂದ ವಿದ್ಯುತ್ ಉತ್ಪಾದಿಸಿದರೆ ವೆಚ್ಚ ತಗ್ಗುತ್ತದೆ, ಹಣ ಉಳಿತಾಯವಾಗುತ್ತದೆ ಎಂದು ಸಲಹೆ ನೀಡಿದರು.
ಬೆಂಗಳೂರಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳು ಜಂಟಿಯಾಗಿ ಈ ಕಾರ್ಯಕ್ರಮ ರೂಪಿಸಬಹುದು. ದೂರಾಲೋಚನೆ ಇಟ್ಟುಕೊಂಡು ಈಗಾಗಲೇ ಕಂಪನಿ ಸಿದ್ಧಪಡಿಸಲಾಗಿದೆ. ಪಾವಗಡದಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸಿದ್ದರಿಂದ ಯೂನಿಟ್‌ಗೆ 3.50 ರೂ.ನಂತೆ ವಿದ್ಯುತ್ ಲಭಿಸುತ್ತಿದೆ. ಈ ಪಾರ್ಕ್ ಸ್ಥಾಪಿಸಲು ಮುಂದಾದಾಗ ಹಲವರು ಆಡಿಕೊಂಡಿದ್ದರು ಎಂದು ಡಿ.ಕೆ.ಶಿವಕುಮಾರ್ ಮೆಲುಕು ಹಾಕಿದರು.ಬೆಂಗಳೂರು ನಗರ ಜಲ ಮಂಡಳಿ ನನ್ನ ಬಳಿಯೇ ಇರುವ ಕಾರಣ ನೂತನ ಯೋಜನೆಯೊಂದಿಗೆ ಅನೇಕರು ಚರ್ಚೆಗೆ ಬಂದಿದ್ದರು. ಈ ಹಿಂದೆ ಇಂಧನ ಇಲಾಖೆಯಲ್ಲಿದ್ದಾಗಲೂ ಖಾಸಗೀಕರಣ ಪ್ರಸ್ತಾವನೆ ಬಂದಿತ್ತು. ಮುಂಬೈ ಸೇರಿ ಇತರೆಡೆ ಅದಾನಿ ಹಾಗೂ ಇತರೇ ಕಂಪನಿಗಳು ವಿದ್ಯುತ್ ಸರಬರಾಜು ಮಾಡುತ್ತಿವೆ.ಇದೇ ಮಾದರಿ ಬೆಂಗಳೂರಿಗೆ ಅನ್ವಯಿಸುವುದಿಲ್ಲ. ನಾನಿರುವ ತನಕ ಖಾಸಗೀಕರಣ ಸಾಧ್ಯವಿಲ್ಲ. ಇದರ ಸುದ್ದಿಗೆ ಬರಬೇಡಿ ಎಂದು ಹೇಳಿ ವಾಪಸ್ ಕಳುಹಿಸಿರುವೆ. ಜಲ ಮತ್ತು ಇಂಧನ ಎರಡೂ ಮುಖ್ಯವಾದವು ಎಂದು ಹೇಳಿದರು.
ಮೇಕೆದಾಟು ಯೋಜನೆಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ಕೆಆರ್‌ಎಸ್‌ನಿಂದ ನೇರವಾಗಿ ಬೆಂಗಳೂರು ನಗರಕ್ಕೆ ನಿಗದಿಯಾದ ನೀರು ತರಬಹುದು ಎಂದು ಒಂದಷ್ಟು ಜನರು ವರದಿ ಕೊಟ್ಟಿದ್ದಾರೆ.
ಶರಾವತಿಯಿಂದ ನೀರು ಆಲೋಚನೆಗೆ ಅಲ್ಲಿನ ಸ್ಥಳೀಯರ ವಿರೋಧವಿದೆ. ಎತ್ತಿನಹೊಳೆ ಯೋಜನೆ ರಾಜಕಾರಣದಿಂದ ಅಲ್ಲಲ್ಲಿ ಬೇರೆ ತಿರುವು ಪಡೆದಿದ್ದರೂ ಒಂದು ಹಂತಕ್ಕೆ ತಲುಪಿಸಿದ್ದೇವೆ. ಕಾವೇರಿ ಐದನೇ ಹಂತದ ಕಾಮಗಾರಿಗೆ ಮತ್ತೆ ಚಾಲನೆ ನೀಡಲಾಗುವುದು. ಕಾಲುವೆ ಕೊನೆ ಭಾಗಕ್ಕೆ ನೀರು ತಲುಪಿಸಲೆಂದು ಕಾಲುವೆ ಅಕ್ಕಪಕ್ಕ ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಲಾಗಿದೆ.
ಅಂತರ್ಜಲ ಹೆಚ್ಚಿಸಲು ಕೆರೆ ಅಭಿವೃದ್ಧಿ ಸಮಿತಿ ಜತೆಗೆ ಕೆಲಸ ಮಾಡಬೇಕಾಗಿದೆ. ಬೆಂಗಳೂರಿಗೆ ಹೊಸ ರೂಪ ಬರಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿಯೇ ಕೆಲಸ ಮಾಡಬೇಕಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
