ಬೆಂಗಳೂರು:ಹೆಣ್ಣೂರಿನಲ್ಲಿ ಕುಡಿದ ಮತ್ತಿನಲ್ಲಿ ದಂಪತಿ ನಡುವೆ ಜಗಳ ನಡೆದು ಪತ್ನಿಯ ಕತ್ತು ಹಿಸುಕಿ ಪತಿ ಹತ್ಯೆ ಮಾಡಿದ್ದಾನೆ.
ತಮಿಳುನಾಡು ಮೂಲದ ಹೆಣ್ಣೂರು ನಿವಾಸಿ ದಾನಮ್ಮ (45) ಕೊಲೆಯಾದ ಮಹಿಳೆ. ಈಕೆಯ ಪತಿ ವೇಲು (46) ಕೊಲೆ ಮಾಡಿ ಪರಾರಿಯಾಗಿದ್ದಾನೆ.
ದಂಪತಿ ನಗರದಲ್ಲಿ ಕೆಲ ವರ್ಷಗಳಿಂದ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ನಿರ್ಮಾಣ ಹಂತದ ಕಟ್ಟಡದ ಬಳಿ ಶೆಡ್‌ನಲ್ಲಿ ಪುತ್ರನೊಂದಿಗೆ ವಾಸಿಸುತ್ತಿದ್ದರು.
ಶನಿವಾರ ತಡರಾತ್ರಿ ದಂಪತಿಗಳಿಬ್ಬರು ಮದ್ಯ ಸೇವಿಸಿ ಯಾವುದೋ ಸಣ್ಣ-ಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು. ಜಗಳ ಬಿಡಿಸಲು ಹೋದ ಪುತ್ರನಿಗೆ ವೇಲು ಬೆದರಿಸಿದ್ದ. ಹೀಗಾಗಿ ಪುತ್ರ ಸ್ನೇಹಿತರ ಮನೆಗೆ ಮಲಗಲು ತೆರಳಿದ್ದ. ದಂಪತಿಗಳ ನಡುವಿನ ಜಗಳ ತಾರಕಕ್ಕೇರಿ ವೇಲು ಪತ್ನಿ ದಾನಮ್ಮನ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ. ಭಾನುವಾರ ಬೆಳಗ್ಗೆ ಪುತ್ರ ಶೆಡ್‌ಗೆ ಬಂದಾಗ ಕೊಲೆಯಾದ ಪ್ರಕರಣ ಬೆಳಕಿಗೆ ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹೆಣ್ಣೂರು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿ ವೇಲುಗೆ ಹುಡುಕಾಟ ನಡೆಸುತ್ತಿದ್ದಾರೆ.
ಸೋಷಿಯಲಿಸಂ ಕೈಹಿಡಿದ ಮಮತಾ ಬ್ಯಾನರ್ಜಿ! ಬಂಗಾಳದಲ್ಲಲ್ಲ, ತಮಿಳುನಾಡಲ್ಲಿ!

ಆದಿತ್ಯ ಠಾಕ್ರೆ ಬರ್ತ್​ ಡೇ ಸ್ಪೆಷಲ್​: ಒಂದು ರೂಪಾಯಿಗೆ ಒಂದು ಲೀಟರ್​ ಪೆಟ್ರೋಲ್​ ಮಾರಾಟ!

ಪ್ರೀತಿಸಿ ಮದುವೆಯಾದ ಯುವತಿಯ ಆಧಾರ್​ ಕಾರ್ಡ್​ ಮಾಹಿತಿ ನೋಡಿ ಶಾಕ್​ ಆದ ಯುವಕ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + three =
Remember me
