ಆನೇಕಲ್:ಗಂಡ ತೀರಿಕೊಂಡ ಎರಡು ವರ್ಷಗಳ ಬಳಿಕ ಅದೇ ದಿನದಂದು ಮಹಿಳೆಯೊಬ್ಬಳು ತನ್ನ ಮಗುವಿನೊಂದಿಗೆ ಕರೆಗೆ ಹಾರಿ ಸಾವಿಗೆ ಶರಣಾಗಿರುವ ಕರುಣಾಜನಕ ಘಟನೆ ಬನ್ನೇರುಘಟ್ಟ ಪೋಲೀಸ್ ಠಾಣಾ ವ್ಯಾಪ್ತಿಯ ಸಕಲವಾರ ಕೆರೆಯಲ್ಲಿ ನಡೆದಿದೆ.
ಮೃತರನ್ನು ತಾಯಿ ವಿಜಯಲಕ್ಷ್ಮಿ (35) ಹಾಗೂ ಪುತ್ರ ಹರಿಹರನ್ (7) ಎಂದು ಗುರುತಿಸಲಾಗಿದೆ. ಇವರು ಸಿ.ಕೆ. ಪಾಳ್ಯದ ನಿವಾಸಿಗಳು. ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿ ವಿಜಯಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಸಕಲವಾರ ಕೆರೆಯಲ್ಲಿ ದುರರ್ಘಟನೆ ಸಂಭವಿಸಿದೆ.
ಇದನ್ನೂ ಓದಿ:ಮೋದಿ vs ರಾಹುಲ್​ ಯಾರು ಜನಪ್ರಿಯರು? ಸೋಶಿಯಲ್​ ಮೀಡಿಯಾ ಡೇಟಾ ಹಂಚಿಕೊಂಡ ಕಾಂಗ್ರೆಸ್​, ಬಿಜೆಪಿ

ಆಂಧ್ರ ಪ್ರದೇಶ ಮೂಲದ ಕುಟುಂಬ ಕೆಲ ವರ್ಷಗಳಿಂದ ಸಿ.ಕೆ. ಪಾಳ್ಯದಲ್ಲಿ ವಾಸವಿದ್ದರು. 2 ವರ್ಷದ ಹಿಂದೆ ನಡೆದ ಅಪಘಾತದಲ್ಲಿ ವಿಜಯಲಕ್ಷ್ಮೀ ಅವರ ಪತಿ ತೀರಿಕೊಂಡರು. ಇದಾದ ಬಳಿಕ ವಿಜಯಲಕ್ಷ್ಮೀ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

ಪತಿ ತೀರಿಕೊಂಡು ಇಂದಿಗೆ ಸರಿಯಾಗಿ 2 ವರ್ಷ ಕಳೆದಿವೆ. ಇದೀಗ ಪತಿ ತೀರಿಕೊಂಡ ದಿನವೇ ಮಗುವಿನ ಜತೆಗೆ ವಿಜಯಲಕ್ಷ್ಮೀ ಸಾವಿಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯರ ಸಹಾಯದಿಂದ ಮೃತ ದೇಹವನ್ನು ಹೊರತೆಗೆಯಲಾಗಿದೆ.(ದಿಗ್ವಿಜಯ ನ್ಯೂಸ್​)
ಭಾರತದಲ್ಲೂ UFO ಪತ್ತೆ!? ಮಲಯಾಳಂ ನಟಿ ಹಂಚಿಕೊಂಡ ಇನ್​ಸ್ಟಾಗ್ರಾಂ ಪೋಸ್ಟ್​ ವೈರಲ್​​

ಕೇಳುವವರಿಲ್ಲ ಗೌರಿದುಃಖ!: ಹೆಣ್ಣು ಮಕ್ಕಳ ಕಳ್ಳಸಾಗಣೆ; ಅಪ್ರಾಪ್ತ ಗರ್ಭಿಣಿಯರ ಸಂಖ್ಯೆ ಹೆಚ್ಚಳ, ಆಡುವ ವಯಸ್ಸಲ್ಲಿ ಬಾಲ್ಯ ಕಳೆದುಕೊಂಡ 45 ಸಾವಿರ ಬಾಲಕಿಯರು

ನಮ್ಮ ಆರೋಗ್ಯ ಇರುವುದೇ ನಮ್ಮ ಕೈಯ್ಯಲ್ಲಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − nine =
Remember me
