ಬೆಂಗಳೂರು:ನಗರದಲ್ಲಿ ಯುವ ದೇಹದಾರ್ಢ್ಯ ಪಟುವಿನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕೆ.ಆರ್.ಪುರಂ ಬಳಿಯ ಹೀರಂಡಹಳ್ಳಿಯಲ್ಲಿ ಘಟನೆ ನಡೆದಿದೆ. ಮೃತ ಯುವ ದೇಹದಾರ್ಢ್ಯ ಪಟುವನ್ನು ಶ್ರೀನಾಥ್ ಎಂದು ಗುರುತಿಸಲಾಗಿದೆ. ಶ್ರೀನಾಥ್​ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಫಾರ್ಮಾ ಡಿ ಓದುತ್ತಿದ್ದರು. ಓದಿನ ಜೊತೆಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲೂ ಭಾಗಿಯಾಗುತ್ತಿದ್ದರು. ಆದರೆ, ನಿನ್ನೆ (ಜ.10) ತಾನು ವಾಸವಿದ್ದ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಮೂಲತಃ ಕೋಲಾರದ ಶ್ರೀನಿವಾಸಪುರ ಮೂಲದ ಶ್ರೀನಾಥ್ ಸಾವು ಇದೀಗ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಸಾವಿನ ಬಗ್ಗೆ ಶ್ರೀನಾಥ್ ಪಾಲಕರು ಸಹ ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ. ತನಿಖೆಯ ನಂತರವಷ್ಟೇ ಸಾವಿಗೆ ನಿಖರ ಕಾರಣ ಏನು ಎಂದು ತಿಳಿದುಬರಲಿದೆ.(ದಿಗ್ವಿಜಯ ನ್ಯೂಸ್​)

RRR​ ಐತಿಹಾಸಿಕ ಸಾಧನೆ: ನಾಟು ನಾಟು ಹಾಡಿಗೆ ಅಂತಾರಾಷ್ಟ್ರೀಯ ಗೋಲ್ಡನ್​ ಗ್ಲೋಬ್ಸ್​-2023 ಗೌರವ

8-9 ಎಕರೆ ಜಮೀನಿದ್ರೂ ಹೆಣ್ಣು ಕೊಡ್ತಿಲ್ಲ! ವಧು ಹುಡುಕಿ ಕೊಡಿ ಎಂದು ಕರೆ ಮಾಡಿದ ಯುವಕನಿಗೆ MLA ಉತ್ತರ ಹೀಗಿತ್ತು…

ಹಳೇ ಗಾಡಿ ಗುಜರಿಗೆ ಬಿಡಿ!; ವಾಹನ ಸ್ಕ್ರ್ಯಾಪಿಂಗ್ ಪ್ರಕ್ರಿಯೆ ಆರಂಭ;15 ವರ್ಷ ಮೀರಿದ 14.3 ಲಕ್ಷ ವಾಹನಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
