ಬೆಂಗಳೂರು:ಖಾಸಗಿ ಕಂಪನಿ ಉದ್ಯೋಗಿಯನ್ನು ರಾತ್ರಿಪಾಳಿ ಪೊಲೀಸ್ ಸಿಬ್ಬಂದಿ ತಡೆಗಟ್ಟಿ ಗಾಂಜಾ ಕೇಸ್ ದಾಖಲಿಸುವುದಾಗಿ ಬೆದರಿಸಿ 2,500 ರೂ. ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ.
ಟ್ವಿಟರ್‌ನಲ್ಲಿ ವೈಭವ್ ಪಾಟೀಲ್ ಎಂಬಾತ ಟ್ವೀಟ್ ಮಾಡಿದ್ದಾನೆ. ರಾತ್ರಿ ಎಚ್‌ಎಸ್‌ಆರ್ ಲೇಔಟ್ 10ನೇ ಮುಖ್ಯ ರಸ್ತೆಯಲ್ಲಿ ರ್ಯಾಪಿಡೋ ಬುಕ್ ಮಾಡಿಕೊಂಡು ಹೋಗುತ್ತಿದೆ. ಅಲ್ಲಿಗೆ ಚೀತಾ ವಾಹನದಲ್ಲಿ ಬಂದ ಸಮವಸ್ತ್ರಧಾರಿ ಪೊಲೀಸರು, ನನ್ನ ತಡೆದು ಬ್ಯಾಗ್ ಪರಿಶೀಲನೆ ನಡೆಸಿದರು. ಅದರಲ್ಲಿ ಗಾಂಜಾ ಪೊಟ್ಟಣ ಪತ್ತೆ ಆಯಿತು. ಆದರೆ, ಅದು ನನ್ನದಲ್ಲ ಎಂದು ಹೇಳಿದೆ. ಅದಕ್ಕೆ ಪೊಲೀಸರು, ಗಾಂಜಾ ಕೇಸ್ ಪತ್ತೆ ಮಾಡಿದರೇ 15 ಸಾವಿರ ರೂ. ಸಿಗುತ್ತದೆ ಎಂದು ಹೇಳಿದರು. ಬೈಕ್ ಕಳುಹಿಸಿ ನನ್ನ ಅವರ ಬೈಕ್‌ನಲ್ಲಿ ಕೂರಿಸಿಕೊಂಡು ಠಾಣೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಮತ್ತೆ ಮೆಡಿಕಲ್ ಮಾಡಿಸುತ್ತೇವೆ ಎಂದು ಆಸ್ಪತ್ರೆ ಬಳಿಗೆ ಕರೆದುಕೊಂಡು ಹೋದರು. ಒಳಗೆ ಕರೆದುಕೊಂಡು ಬಲವಂತವಾಗಿ ನನ್ನ ಬಳಿಯಿಂದ 2,500 ರೂ. ತೆಗೆದುಕೊಂಡರು. ಮತ್ತೆ ಎಟಿಎಂನಲ್ಲಿ ಡ್ರಾ ಮಾಡಿ ಹಣ ಕೊಡುವಂತೆ ಕೇಳಿದರು. ಎಟಿಎಂ ಕಾರ್ಡ್ ಇಲ್ಲ ಎಂದಾಗ ಅಲ್ಲೇ ಬಿಟ್ಟು ಹೋದರು. ನಾನು ಮತ್ತೆ ರ್ಯಾಪಿಡೋ ಬುಕ್ ಮಾಡಿಕೊಂಡು ಮನೆಗೆ ಬಂದೇ ಎಂದು ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದಾನೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ತನಿಖೆಗೆ ಸೂಚನೆ ನೀಡಿದ್ದಾರೆ. ಇದರ ಮೇರೆಗೆ ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ. ಬಾಬಾ, ತನಿಖೆ ಭರವಸೆ ನೀಡಿದ್ದಾರೆ. ಮತ್ತೊಂದೆಡೆ ಎಚ್‌ಎಸ್‌ಆರ್ ಲೇಔಟ್ ಪೊಲೀಸರು, ಯುವಕನನ್ನು ಪತ್ತೆ ಮಾಡಿ ಘಟನಾ ಸ್ಥಳ ಪರಿಶೀಲನೆ ನಡೆಸಿದಾಗ ಅದು ಬಂಡೇಪಾಳ್ಯ ಠಾಣೆಗೆ ವ್ಯಾಪ್ತಿಗೆ ಬರಲಿದೆ ಎಂದು ತಿಳಿದುಬಂದಿದೆ. ಇದೀಗ ರಾತ್ರಿ ಗಸ್ತುನಲ್ಲಿ ಇದ್ದವರು ಯಾರೆಂಬುದರ ಬಗ್ಗೆ ತನಿಖೆ ಮುಂದುವರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Dear Vaibhav. We understand that you are worried and scared . Request you to DM your details and meet me at my office ASAP, and be assured that we will initiate action..You can reach me@9480801601 .@CPBlr@BlrCityPolice
— C K Baba, IPS (@DCPSEBCP)January 12, 2023

ಯುವಶಕ್ತಿಗೆ ಮೋದಿ ಮೋಡಿ| ಉತ್ತರ ಕರ್ನಾಟಕದ ಹೆಬ್ಬಾಗಿಲಿನಿಂದ ಮತಯಾತ್ರೆ

ವಿವಿ ವಿದ್ಯಾರ್ಥಿಗಳಿಗೆ ಬಿಸಿಯೂಟ! ಬಡ ವಿದ್ಯಾರ್ಥಿಗಳಿಗೆ ವರದಾನ

ಉತ್ತರ ಭಾರತದಲ್ಲಿ ಮೈನಸ್ 4 ಡಿಗ್ರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 6 =
Remember me
