ಕರೊನಾ ವೈರಸ್​ನ ಗಂಭೀರ ಪರಿಣಾಮದ ಬಗ್ಗೆ ಬೆಂಗಳೂರು ಸಿಟಿ ಪೊಲೀಸರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ನಿರಂತರವಾಗಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಲಾಕ್​ಡೌನ್ ಇದೆ, ಹೊರಗೆ ಓಡಾಡಬೇಡಿ..ಹಾಗೆ ಹೊರಗೆ ಓಡಾಡುವುದರಿಂದ ಅಪಾಯವನ್ನು ನೀವೇ ತಂದುಕೊಳ್ಳುತ್ತೀರಿ ಎಂಬರ್ಥದ ಪೋಸ್ಟ್​ಗಳನ್ನು ಬಹುದಿನಗಳಿಂದಲೂ ಹಾಕುತ್ತ ಬರುತ್ತಿದ್ದಾರೆ.
ಆದರೆ ಬೆಂಗಳೂರಿನಲ್ಲಿ ಜನರ ಓಡಾಟ ನಿಯಂತ್ರಣಕ್ಕೆ ಬರುತ್ತಿಲ್ಲ. ಒಂದಲ್ಲ ಒಂದು ನೆಪವನ್ನೊಡ್ಡಿ ಜನರು ಸಂಚರಿಸುತ್ತಲೇ ಇದ್ದಾರೆ. ಮೇ 3ರ ಬಳಿಕ ಲಾಕ್​ಡೌನ್​ನಲ್ಲಿ ಸಡಿಲಿಕೆ ಇದ್ದರೂ ಬೆಂಗಳೂರಿನಲ್ಲಿ ಯಥಾ ಸ್ಥಿತಿಯಲ್ಲೇ ಮುಂದುವರಿಯಲಿದೆ ಎಂದು ಸರ್ಕಾರ ತಿಳಿಸಿದೆ.
ಇಷ್ಟಾದರೂ ಈಗ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಸಂಚಾರ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಈ ಮಧ್ಯೆ ಬೆಂಗಳೂರು ಸಿಟಿ ಪೋಲೀಸರು ಒಂದು ವಿಭಿನ್ನ ಟ್ವೀಟ್ ಮಾಡಿದ್ದಾರೆ.
‘ನಿಮಗೆ ಫೋನ್​ ಮಾಡುವ ಅಪರಿಚಿತರೆಲ್ಲ ಬೆಳದಿಂಗಳ ಬಾಲೆ ಆಗಿರೋದಿಲ್ಲ..ಎಚ್ಚರ’ ಎಂದು ಅನಂತ್ ನಾಗ್​ ಅವರು ಫೋನ್ ಹಿಡಿದುಕೊಂಡಿರುವ ಫೋಟೋದ ಮೇಲೆ ಬರೆದು, ಅದನ್ನು ಪೋಸ್ಟ್​ ಮಾಡಿದ್ದಾರೆ. ಹಾಗೇ ಹೌದು..ಸ್ವಾಮಿ ! ಎಂದು ಕ್ಯಾಪ್ಷನ್​ ಕೂಡ ಬರೆದು, #StayHomeStaySafe ಎಂಬ ಹ್ಯಾಷ್​ಟ್ಯಾಗ್​ ಕೊಟ್ಟಿದ್ದಾರೆ.
ಸೋಂಕಿತ ಗ್ರಾಮಗಳಿಗೆ ಪಿ.ಹೇಮಲತಾ ಭೇಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಿಂದ ಪರಿಶೀಲನೆ, ಸೀಲ್‌ಡೌನ್ ಕಟ್ಟುನಿಟ್ಟಿನ ಪಾಲನೆಗೆ ತಾಕೀತು
ಅರೆ, ಇದೆಂಥಾ ಟ್ವಿಟರ್​ ಪೋಸ್ಟ್​ ಎಂದು ಗೊಂದಲ ಬೇಡ. ಕರೊನಾ ಸೋಂಕು ಇರುವವರಿಗೆ ಆರೋಗ್ಯ ಇಲಾಖೆಯಿಂದ ಅಪರಿಚಿತ ನಂಬರ್​ನಲ್ಲಿ ಫೋನ್ ಮಾಡಲಾಗುತ್ತದೆ. ಹಾಗೇ ನೀವು ಬೇಕಾಬಿಟ್ಟಿ ಓಡಾಡುತ್ತಿದ್ದರೆ ನಿಮಗೂ ಅಪರಿಚಿತ ನಂಬರ್​ನಿಂದ ಕರೆ ಬರುತ್ತದೆ. ಅದು ಬೆಳದಿಂಗಳ ಬಾಲೆ ಆಗಿರುವುದಿಲ್ಲ. ಕರೊನಾ ಸೋಂಕಿಗೆ ಸಂಬಂಧಿಸಿದ ಕರೆ ಆಗಿರುತ್ತದೆ ಎಂದು ಸೂಕ್ಷ್ಮವಾಗಿ ಸಿಟಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ !
ಹೌದು ಸ್ವಾಮಿ..!!#StayHomeStaySafepic.twitter.com/DNPUYbkA6D
— ಬೆಂಗಳೂರು ನಗರ ಪೊಲೀಸ್‌ BengaluruCityPolice (@BlrCityPolice)May 1, 2020

ಅಮ್ಮ ನನ್ನ ಕರೀತಿದ್ದಾಳೆ … ಇರ್ಫಾನ್​ ಖಾನ್ ಕೊನೆಯ ಮಾತುಗಳು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × three =
Remember me
