ಬೆಂಗಳೂರು:ಹೊಂಗಸಂದ್ರದ ವಿದ್ಯಾಜ್ಯೋತಿನಗರದಲ್ಲಿ ವಾಸಿಸುತ್ತಿದ್ದ 54 ವರ್ಷದ ಬಿಹಾರ ಮೂಲದ ಕಾರ್ವಿುಕರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಲ್ಲಿದ್ದ 300ಕ್ಕೂ ಹೆಚ್ಚು ಮನೆಗಳಿಗೆ ಬೀಗ ಹಾಕಿ, ಅಲ್ಲಿ ವಾಸವಿದ್ದವರನ್ನೆಲ್ಲ ಬೇರೆಡೆ ಸ್ಥಳಾಂತರ ಮಾಡಲಾಗಿದೆ.
ಹೊಂಗಸಂದ್ರ 189ನೇ ವಾರ್ಡ್​ನಲ್ಲಿ ಸುಮಾರು 70 ಸಾವಿರಕ್ಕೂ ಅಧಿಕ ಜನರಿದ್ದು, ಎಲ್ಲರಿಗೂ ಸೋಂಕಿನ ಭಯ ಆವರಿಸಿದೆ. ಹೀಗಾಗಿ ತಮ್ಮ ರಸ್ತೆಗಳಿಗೆ ಸ್ವಯಂಪ್ರೇರಿತರಾಗಿ ಬಂದ್ ಮಾಡಿ ದಿಗ್ಬಂಧನ ವಿಧಿಸಿಕೊಂಡಿದ್ದಾರೆ.
ತೀರಾ ಇಕ್ಕಟ್ಟಿನ ವಾಸಸ್ಥಳ:ಹೊಂಗಸಂದ್ರ ವಾರ್ಡ್​ನ ವಿದ್ಯಾಜ್ಯೋತಿನಗರದಲ್ಲಿ 2 ವರ್ಷಗಳಿಂದ ಬಿಹಾರ ಮೂಲದ ಕಾರ್ವಿುಕರು ವಾಸವಾಗಿದ್ದಾರೆ. ಈ ಜಾಗದ ಮಾಲೀಕರು ಒಂದಕ್ಕೊಂದು ಅಂಟಿಕೊಂಡಂತೆ 200ಕ್ಕೂ ಹೆಚ್ಚು ತಗಡು ಶೀಟ್ ಮನೆಗಳನ್ನು ನಿರ್ವಿುಸಿಕೊಟ್ಟಿದ್ದರು. ಈ ವಾಸ ಪ್ರದೇಶ ತೀರಾ ಇಕ್ಕಟ್ಟಿನಿಂದ ಕೂಡಿದ್ದು, ಬಹುತೇಕ ಯುವಕರು ಹಾಗೂ ಕೆಲವು ಕುಟುಂಬಗಳು ವಾಸವಾಗಿವೆ.
ಒಬ್ಬನಿಂದ ಎಲ್ಲರಿಗೂ ಸೋಂಕು:ಬಿಹಾರ ಮೂಲದ ಕಾರ್ವಿುಕರಾದ ಇವರು, ಕಡಿಮೆ ಬಾಡಿಗೆ ಕಾರಣಕ್ಕೆ ಪ್ರದೇಶದಲ್ಲಿ ವಾಸವಿದ್ದರು. ಲಾಕ್​ಡೌನ್ ಕಾರಣದಿಂದ ಎಲ್ಲರೂ ಮನೆಯಲ್ಲಿದ್ದು, ಪರಸ್ಪರ ಸಂಪರ್ಕದಲ್ಲಿದ್ದಾರೆ. ಆದರೆ ಪ್ಯಾಕರ್ಸ್ ಆಂಡ್ ಮೂವರ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಸೋಂಕಿತ ವ್ಯಕ್ತಿ ಎಲ್ಲರಿಗೂ ಸೋಂಕು ಹರಡಲು ಕಾರಣವಾಗಿದ್ದಾನೆ. ಈಗ 132 ಪ್ರಾಥಮಿಕ ಸೋಂಕಿತರು ಹಾಗೂ 24 ದ್ವಿತೀಯ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಲಾಗಿದೆ. ಸಂಪರ್ಕಕ್ಕೆ ಬಾರದವರನ್ನೂ ತಪಾಸಣೆ ಮಾಡಲಾಗಿದ್ದು, ಸೋಂಕಿತರು ಬಳಸಿದ ವಸ್ತುಗಳ ಉಪಯೋಗದಿಂದಲೂ ಕರೊನಾ ಬರುವ ಸಾಧ್ಯತೆಗಳಿವೆ.
ರಾತ್ರೋರಾತ್ರಿ ಕ್ವಾರಂಟೈನ್
ಸೋಂಕಿತ ವ್ಯಕ್ತಿಗೆ ಜ್ವರ ಕಾಣಿಸಿಕೊಂಡ ಕಾರಣ ಬೊಮ್ಮನಹಳ್ಳಿಯ ಡಾ. ವೇಣು ಹೆಲ್ತ್ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ಪಡೆದಿದ್ದರು. ಗುಣವಾಗದ ಕಾರಣ ರಾಜೀವ್ ಗಾಂಧಿ ಆಸ್ಪತ್ರೆಗೆ ಹೋಗಿದ್ದಾಗ ಕರೊನಾ ಇರುವುದು ದೃಢಪಟ್ಟಿದೆ. ಬಿಬಿಎಂಪಿ ಆರೋಗ್ಯಾಧಿಕಾರಿಗಳು ಕೂಡಲೇ ಮಂಗಳವಾರ ರಾತ್ರಿ ವೇಳೆ ಸುಮಾರು 24 ಜನರನ್ನು ವಶಕ್ಕೆ ಪಡೆದುಕೊಂಡು ತಪಾಸಣೆ ನಡೆಸಿದ್ದಾರೆ. ಅವರಲ್ಲಿ 9 ಜನರಿಗೆ ಗುರುವಾರ ಸೋಂಕು ದೃಢಪಟ್ಟಿದೆ. ಈಗ 156 ಜನ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಅವರಲ್ಲಿ ಸೋಂಕಿತರು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
ಸಡಿಲಿಕೆ ಅಗತ್ಯವಿತ್ತೇ?
ಲಾಕ್​ಡೌನ್ ಸಡಿಲ ಮಾಡಿದ್ದರಿಂದಲೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೆಟ್ರೋ ಕೆಲಸಕ್ಕೆ ಬಂದವರು ಈಗ ಸೋಂಕಿನಿಂದ ಬಳಲು ವಂತಾಗಿದೆ ಎಂದು ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶಾಸಕರನ್ನೂ ಕ್ವಾರಂಟೈನ್ ಮಾಡಿ
ಹೊಂಗಸಂದ್ರ ವಾರ್ಡ್​ನ ಸೋಂಕಿತರ ಮನೆಗಳ ಆಸುಪಾಸಿನಲ್ಲಿ ಶಾಸಕ ಸತೀಶ್ ರೆಡ್ಡಿ ಮನೆಯಿದೆ. ಹೀಗಾಗಿ ಅವರನ್ನೂ ದ್ವಿತೀಯ ಸಂಪರ್ಕದ ಆಧಾರದಲ್ಲಿ ಕ್ವಾರಂಟೈನ್ ಮಾಡ ಬೇಕು. ಶಾಸಕ ಜಮೀರ್ ಅಹಮದ್ ಖಾನ್ ಅವರನ್ನು ಕ್ವಾರಂಟೈನ್ ಮಾಡುವಂತೆ ಒತ್ತಾಯಿಸಿದವರು ಈಗ ಎಲ್ಲಿ ಹೋಗಿದ್ದಾರೆ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಪ್ರಶ್ನಿಸಿದ್ದಾರೆ.
ತಮಿಳುನಾಡಲ್ಲೂ ದೆಹಲಿ ವೈರಸ್: ದೇಶದಲ್ಲಿ ಹೆಚ್ಚು ಕರೊನಾ ಹಾಟ್​ಸ್ಪಾಟ್​ಗಳಿರುವ ರಾಜ್ಯ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:six + 16 =
Remember me
