ಬೆಂಗಳೂರು:ವಸತಿ ಸಮುಚ್ಛಯದ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಮಂಜೂರು ಮಾಡಲು 2 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಅಧೀಕ್ಷಕ ಇಂಜಿನಿಯರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬೆಂಗಳೂರು ಗ್ರಾಮಾಂತರ ವೃತ್ತದಲ್ಲಿರುವ ಬೆಸ್ಕಾಂ ಕಚೇರಿಯ ಅಧೀಕ್ಷಕ ಇಂಜಿನಿಯರ್ (ವಿದ್ಯುತ್) ಎಚ್.ವಿ. ಕೃಷ್ಣಪ್ರಸಾದ್ ಬಂಧಿತ.
ಧೀರಾನ್ ಇಸ್ಪಾಸ್ಟ್ರಕ್ಟರ್ ಪ್ರೈ.ಲಿ ಕಂಪನಿಯವರು ನಿರ್ಮಿಸಿದ್ದ ಧೀರಾನ್ ವಸತಿ ಸಮುಚ್ಛಯದ ಕಟ್ಟಡಕ್ಕೆ 419 ಕಿಲೋ ವ್ಯಾಟ್ ವಿದ್ಯುತ್ ಸಂಪರ್ಕದ ಮಂಜೂರಾತಿ ಪಡೆಯಲು ವಿದ್ಯುತ್ ಗುತ್ತಿಗೆದಾರ ಶರಣಪ್ಪ ಅವರು ಎಚ್.ವಿ. ಕೃಷ್ಣಪ್ರಸಾದ್‌ನನ್ನು ಭೇಟಿಯಾಗಿದ್ದರು. ಆ ವೇಳೆ ವಿದ್ಯುತ್ ಸಂಪರ್ಕದ ಮಂಜೂರಾತಿಗಾಗಿ ಎಚ್.ವಿ. ಕೃಷ್ಣಪ್ರಸಾದ್ 2 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಲಂಚ ನೀಡಲು ಇಚ್ಛಿಸದ ಶರಣಪ್ಪ ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜ.19ರಂದು ಶರಣಪ್ಪ ಅವರಿಂದ ಆರೋಪಿ ಕೃಷ್ಣಪ್ರಸಾದ್ 1.50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕಬಾಬ್ ವಿಚಾರಕ್ಕೆ ಹಲ್ಲೆ: ಕೋಣನಕುಂಟೆಯ ಮಾಂಸಾಹಾರಿ ಹೋಟೆಲ್ ಮಾಲೀಕನಿಗೆ ಗಂಭೀರ ಗಾಯ

ಕಲಬುರಗಿಯಿಂದ ಕಾಲ್ನಡಿಗೆಯಲ್ಲಿ ಬಂದ ಅಭಿಮಾನಿಗೆ ಸನ್ಮಾನ ಮಾಡಿ ಕಾಲಿಗೆ ಬಿದ್ದ ನಟ ದುನಿಯಾ ವಿಜಯ್​!

ಕೊಳ್ಳೇಗಾಲದಲ್ಲಿ ಅಡುಗೆ ಮನೆಯ ಕಿಟಕಿ ಸರಳು ಕತ್ತರಿಸಿ 14.85 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 1 =
Remember me
