ಮಂಡ್ಯ: ಈ ಶಾಲೆಯಲ್ಲಿ ನ್ಯಾಯಾಲಯ, ಬ್ಯಾಂಕ್, ಪೋಸ್ಟ್ ಆಫೀಸ್, ಷೇರು ಮಾರ್ಕೆಟ್ ಇದೆ. ಮ್ಯಾನೇಜರ್, ಪೋಸ್ ಮಾಸ್ಟರ್, ಪೋಸ್ಟ್ ಮ್ಯಾನ್, ಷೇರು ಮಾರ್ಕೆಟ್‌ನ ಹೂಡಿಕೆದಾರರು ಎಲ್ಲರೂ ವಿದ್ಯಾರ್ಥಿಗಳೇ ಆಗಿದ್ದಾರೆ. ಮಾತ್ರವಲ್ಲ ಬದುಕಿಗೆ ಅವಶ್ಯಕವಿರುವ ಎಲ್ಲವನ್ನೂ ಇಲ್ಲಿನ ಮುಖ್ಯಶಿಕ್ಷಕ ಎಂ.ಎಸ್.ಜಯಚಂದ್ರನ್ ಹೇಳಿಕೊಡುತ್ತಿದ್ದಾರೆ.ಹೌದು, ಒಂದೆಡೆ ಸ್ಮಾಟ್ ಕಲಿಕೆ, ಮತ್ತೊಂದೆಡೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅವಶ್ಯಕವಿರುವ ಸೇವೆಗಳ ಬಗ್ಗೆಯೂ ಕಲಿಸುವ ಮೂಲಕ ವಿಶೇಷ ಎನಿಸಿಕೊಂಡಿರುವ ಪಾಂಡವಪುರ ತಾಲೂಕು ಸಣಬದಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜಿಲ್ಲೆಯ ಮಾದರಿಯಾಗಿದೆ. ಸಾಮಾನ್ಯವಾಗಿ ಒಂದರಿಂದ ಐದನೇ ತರಗತಿವರೆಗೆ ಪಾಠಕ್ಕಿಂತ ಕಲಿಕಾ ಸಾಮಗ್ರಿಗಳ ಮೂಲಕವೇ ಹೆಚ್ಚು ಬೋದನೆ ಮಾಡಲಾಗುತ್ತದೆ. ಈ ವಯಸ್ಸಿನಲ್ಲಿ ಕ್ರಿಯಾತ್ಮಕ ಚಟುವಟಿಕೆಗಳಿದ್ದರೆ ಮಕ್ಕಳನ್ನು ಸೆಳೆಯುವುದು ಸುಲಭ. ಈ ಕಾರಣಕ್ಕಾಗಿ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಆದರೆ ಇದನ್ನು ಬಳಸಿಕೊಂಡವರ ಸಂಖ್ಯೆ ಕಡಿಮೆ. ಈ ನಡುವೆಯೂ ಶಿಕ್ಷಕ ಎಂ.ಎಸ್.ಜಯಚಂದ್ರನ್ ಅವರ ಸೃಜನಾತ್ಮಕತೆಯಿಂದ ಸಣಬದಕೊಪ್ಪಲು ಶಾಲೆ ‘ಹೈ ಡಿಜಿಟಲ್’ ಆಗಿ ಗಮನಸೆಳೆಯುತ್ತಿದೆ.ಬದುಕಿನ ಪಾಠಕ್ಕೆ ಆದ್ಯತೆ: ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ 30 ವಿದ್ಯಾರ್ಥಿಗಳಿದ್ದಾರೆ. ಸುಮಾರು 15 ವರ್ಷದಿಂದ ಜಯಚಂದ್ರನ್ ಈ ಶಾಲೆಯಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿದ್ದಾರೆ. ಆದರೆ ಇವರು ಕೇವಲ ಪಾಠಕ್ಕೆ ಸೀಮಿತವಾಗಿಲ್ಲ ಎನ್ನುವುದು ವಿಶೇಷ. ಶಾಲೆಯನ್ನು ಮಾದರಿಯನ್ನಾಗಿಸಬೇಕೆನ್ನುವ ಉದ್ದೇಶದಿಂದ ಸೃಜನಾತ್ಮಕ ಕಲೆಯನ್ನು ಅಳವಡಿಸುತ್ತಾ ಹೋದ ಪರಿಣಾಮ ಇಂದು ಹೈಟೆಕ್ ಶಾಲೆಯಾಗಿದೆ.ಇಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಮಾರ್ಟ್ ಕಲಿಕೆ ನಡೆಯುತ್ತಿದೆ. ಒಂದನೇ ತರಗತಿ ಮಗುವೂ ಕಂಪ್ಯೂಟರ್ ಅನ್ನು ಒಂದಷ್ಟು ನಿರ್ವಹಣೆ ಮಾಡಲಿದೆ. ಸ್ಮಾರ್ಟ್ ಟಿವಿ, ಪ್ರೊಜೆಕ್ಟರ್ ಇದೆ. ಇವುಗಳ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಮತ್ತೊಂದೆಡೆ ಪ್ರತಿ ಹಂತದಲ್ಲಿಯೂ ಜಯಚಂದ್ರನ್ ಅವರು ವಿಭಿನ್ನ ಪ್ರಯೋಗ ಮಾಡುತ್ತಿದ್ದು, ಬದುಕಿನ ಪಾಠವಾಗಿ ಮಕ್ಕಳಿಂದಲೇ ಗೋಧಿ, ಭತ್ತ, ರಾಗಿ ಬಿತ್ತನೆ ಮಾಡಿಸಿ ನಿರ್ವಹಣೆ ಮಾಡಿಸುತ್ತಾರೆ. ಕೊಠಡಿಗಳಲ್ಲಿ ಟೈಲ್ಸ್ ಅಳವಡಿಸಿದ್ದು, ಶೌಚಗೃಹವೂ ಕೂಡ ಉತ್ತಮವಾಗಿದೆ.ಸ್ಮಾರ್ಟ್ ಬ್ಯಾಂಕ್: ಜಯಚಂದ್ರನ್ ಅವರ ವಿಭಿನ್ನತೆ ಮತ್ತೊಂದು ಸಾಕ್ಷಿಯಾಗಿ ಶಾಲೆಯಲ್ಲಿ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ. ಪ್ರತಿ ವಿದ್ಯಾರ್ಥಿಗೂ ಪಾಸ್‌ಬುಕ್, ಚಲನ್ ಇರಲಿದೆ. ಅವುಗಳನ್ನು ಬಳಸಿಕೊಂಡು ಹಣವನ್ನು ಕೂಡಿಡುವ ಪಾಠವನ್ನು ಕಲಿಸುತ್ತಿದ್ದಾರೆ. ಚಿಲ್ದ್ರನ್ ಬ್ಯಾಂಕ್ ಆ್ ಸಣಬದಕೊಪ್ಪಲು ಎಂದು ಹೆಸರಿಟಿದ್ದು, ಐಎ್ಎಸ್‌ಸಿ ಕೋಡ್ ಕೂಡ ಇದೆ. ವಿದ್ಯಾರ್ಥಿಗಳು ತಮ್ಮ ಬಳಿ ಇರುವ ಹಣವನ್ನು ಭದ್ರವಾಗಿ ಠೇವಣಿ ಇಟ್ಟಿದ್ದಾರೆ.ಇದಲ್ಲದೆ ಶಾಲೆಯ ಮತ್ತೊಂದು ವಿಶೇಷ ಪೋಸ್ಟ್ ಆಫೀಸ್. ಈ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್‌ಗಳಿದ್ದು, ಬಡಾವಣೆವಾರು ವಿಂಗಡನೆ ಮಾಡಲಾಗಿದೆ. ಮಕ್ಕಳು ಅಥವಾ ಶಾಲೆಯಿಂದ ಬರೆಯುವ ಪತ್ರವನ್ನು ಸಂಬಂಧಪಟ್ಟ ಮಕ್ಕಳ ಮನೆಗೆ ತಲುಪಿಸಲಾಗುತ್ತದೆ. ಇಲ್ಲಿಯೂ ಪತ್ರ ಕೊಟ್ಟ ಮೇಲೆ ಸಹಿ ಪಡೆಯುವ ಪ್ರಕಿಯೆಯೂ ನಡೆಯುತ್ತದೆ. ಅಂಚೆ ಕಚೇರಿಗೆ ಪಿನ್‌ಕೋಡ್ ಕೂಡ ಇದೆ. ಇನ್ನು ಷೇರು ಮಾರುಕಟ್ಟೆಯನ್ನು ಮಾಡಲಾಗಿದೆ. ಏಳು ವಿದ್ಯಾರ್ಥಿಗಳು ತಲಾ 50 ರೂನಂತೆ ಹೂಡಿಕೆ ಮಾಡಿದ್ದಾರೆ. ಈ ಪೈಕಿ ಇಬ್ಬರು ಮಾತ್ರ ಶಿಕ್ಷಕರಿಂದ ಪೆನ್ಸಿಲ್, ಬುಕ್ ಸೇರಿದಂತೆ ಕಲಿಕಾ ಸಾಮಗ್ರಿಯನ್ನು ತರಿಸಿ ಮಾರಾಟ ಮಾಡುತ್ತಾರೆ. ಈ ರೀತಿಯಾಗಿ ಹಣವನ್ನು ದ್ವಿಗುಣಗೊಳಿಸುವ ಹಾಗೂ ಷೇರು ಖರೀದಿಸುವ ಪ್ರಕ್ರಿಯೆ ನಡೆಯುತ್ತದೆ.ನ್ಯಾಯಾಧೀಶರಿದ್ದಾರೆ ಎಚ್ಚರಿಕೆ: ವಿಶೇಷವೆಂದರೆ ಜಯಚಂದ್ರನ್ ಅವರ ಹೊಸ ಕಲ್ಪನೆ ನ್ಯಾಯಾಲಯ. ಪರಿಣಾಮ ಶಾಲೆಯಲ್ಲಿ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಮಕ್ಕಳೇ ಸೇರಿ ನ್ಯಾಯಾಧೀಶರನ್ನು ಆಯ್ಕೆ ಮಾಡಿಕೊಂಡಿದ್ದು, ಜಡ್ಜ್‌ಗಳಿಗೆ ಬಟ್ಟೆಯನ್ನು ನೀಡಲಾಗಿದೆ. ಇವರು ಶಾಲೆಯಲ್ಲಿ ಮಕ್ಕಳು ತಪ್ಪು ಮಾಡಿದರೆ ಶಿಕ್ಷೆ ನೀಡುತ್ತಾರೆ. ಅಂದರೆ ತಪ್ಪಿನ ಆಧಾರದಲ್ಲಿ ಮಗ್ಗಿ ಬರೆಯುವುದು, ಲೆಕ್ಕ ಮಾಡಿಕೊಂಡು ಬರುವುದು. ಹೀಗೆ ಕಲಿಕೆಗೆ ಸಂಬಂಧಿಸಿದ ಶಿಕ್ಷೆ ವಿಧಿಸಲಾಗುತ್ತದೆ.ಇದಲ್ಲದೆ ಪ್ರತಿ ಶನಿವಾರ ಬ್ಯಾಗ್ ಇಲ್ಲದೆ ಮಕ್ಕಳು ಶಾಲೆಗೆ ಬರುತ್ತಾರೆ. ಪ್ರತಿವಾರವೂ ಒಂದೊಂದು ವಿಶೇಷತೆ ಇರುತ್ತದೆ. ಅಂತೆಯೇ ಮಕ್ಕಳಿಂದ ಪಾಲಕರಿಗೆ ಪೂಜೆ ಮಾಡಿಸಲಾಗುತ್ತದೆ. ಅಂತೆಯೇ ಮಕ್ಕಳು ಹಾಗೂ ಪಾಲಕರನ್ನು ಸೇರಿಸಿ ಕ್ವಿಜ್, ರ‌್ಯಾಂಪ್ ವಾಕ್ ಸೇರಿದಂತೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಜಯಚಂದ್ರನ್ ಅವರ ಹೊಸ ಪ್ರಯೋಗಕ್ಕೆ ಹಿಂದಿನ ಹಾಗೂ ಹಾಲಿ ಎಸ್‌ಡಿಎಂಸಿ ಅಧ್ಯಕ್ಷ ಯೋಗನರಸಿಂಹ ಸೇರಿದಂತೆ ಸದಸ್ಯರು, ಪಾಲಕರಿಂದ ಉತ್ತಮ ಸಾಥ್ ಸಿಕ್ಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + six =
Remember me
