| ಕೆ.ಎನ್.ರಾಘವೇಂದ್ರ ಮಂಡ್ಯ
ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಮುಗಿದಿದ್ದು, ಮತ ಎಣಿಕೆ ಕಾರ್ಯಕ್ಕೆ ದಿನಗಣನೆ ಆರಂಭಗೊಂಡಿದೆ. ಈ ನಡುವೆ ಬಹುತೇಕ ಕಡೆ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಡಿ.30ರಂದು ಮತ ಎಣಿಕೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕೆಲವೆಡೆ ಅಭ್ಯರ್ಥಿಗಳ ಬೆಂಬಲಿಗರು, ಕೆಲವೆಡೆ ಅಭ್ಯರ್ಥಿಗಳೇ ಬೆಟ್ಟಿಂಗ್​ನಲ್ಲಿ ತೊಡಗಿದ್ದಾರೆ.
ಚುನಾವಣಾ ಫಲಿತಾಂಶದ ಮೇಲೆ ಲಕ್ಷಾಂತರ ರೂ. ಬೆಟ್ಟಿಂಗ್ ನಡೆಯುತ್ತಿದೆ. ಸಂಜೆಯಾಗುತ್ತಿದ್ದಂತೆ ಹೋಟೆಲ್, ಅಂಗಡಿಗಳು ಬೆಟ್ಟಿಂಗ್ ವ್ಯವಹಾರಗಳ ಕೇಂದ್ರಗಳಾಗಿ ಬದಲಾಗುತ್ತಿವೆ.
ತೆರೆ ಹಿಂದೆ ಹೂಡಿಕೆ: ಇನ್ನು ಗ್ರಾಮಗಳ ಪ್ರಮುಖ ನಾಯಕರು ನೇರವಾಗಿ ಬೆಟ್ಟಿಂಗ್ ಅಖಾಡಕ್ಕೆ ಧುಮುಕ್ಕಿಲ್ಲವಾದರೂ ತಮ್ಮ ಆಪ್ತರ ಮೂಲಕ ಹಣವನ್ನು ಹೂಡಿಕೆ ಮಾಡುತ್ತಿರುವ ಸಂಗತಿ ಈಗ ಗುಟ್ಟಿನ ವಿಚಾರವಾಗಿ ಉಳಿದಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಅಭ್ಯರ್ಥಿಗೆ ಎಷ್ಟು ಲೀಡ್ ಬರುತ್ತವೆ, ಯಾವ ಬೂತ್​ನಲ್ಲಿ ಯಾರಿಗೆ ಲಾಭ, ಯಾರಿಗೆ ನಷ್ಟ ಎನ್ನುವ ಮೇಲೆಯೂ ಬೆಟ್ಟಿಂಗ್ ನಡೆಯುತ್ತಿದೆ. ಬೆಟ್ಟಿಂಗ್ ವ್ಯವಹಾರ ಒಂದೇ ಗ್ರಾಪಂಗೆ ಸೀಮಿತವಾಗಿಲ್ಲ. ಬದಲಿಗೆ ಅಕ್ಕ ಪಕ್ಕದ ಗ್ರಾಪಂಗಳಲ್ಲಿಯೂ ಯಾರು ಗೆಲ್ಲುತ್ತಾರೆಂಬುದರ ಮೇಲೆಯೂ ಹಣ ಹೂಡಲಾಗುತ್ತಿದೆ. ಒಟ್ಟಾರೆ ಗ್ರಾಪಂ ಚುನಾವಣೆ ಕಾವು ಮತದಾನದ ಬಳಿಕವೂ ರಂಗೇರಿದ್ದು, ಯಾರ ಹಣ ಯಾರ ಪಾಲಾಗಲಿದೆ ಎನ್ನುವುದು ಡಿ.30ರಂದು ಬಹಿರಂಗಗೊಳ್ಳಲಿದೆ.
ಕೆಣಕಿ ಅಖಾಡಕ್ಕೆ ಕರೆಸುವ ತಂತ್ರ: ಪ್ರಮುಖವಾಗಿ ಎರಡು ಗುಂಪಿನವರು ವಾಗ್ವಾದಕ್ಕಿಳಿದಾಗ ಬೆಟ್ಟಿಂಗ್ ಅಖಾಡ ರಂಗೇರುತ್ತಿದೆ. ತಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆಂದು ಹೇಳುವ ಮೂಲಕ ಪ್ರಾರಂಭವಾಗುವ ಮಾತು ಕೊನೆಗೆ ಬೆಟ್ಟಿಂಗ್ ಹಂತಕ್ಕೆ ಹೋಗುತ್ತಿದೆ. ಇದು ಮುಂದುವರಿಯುತ್ತಾ ಹಣ, ಜಮೀನು, ಬೈಕ್ ಸೇರಿ ಇತರ ವಸ್ತು ಗಳನ್ನು ಬಾಜಿ ಕಟ್ಟುವ ಹಂತಕ್ಕೂ ಹೋಗುತ್ತಿದೆ. ಇನ್ನು ಈ ವೇಳೆಯೂ ಪ್ರತಿಷ್ಠೆ ಮುಖ್ಯವಾಗಿರುವುದರಿಂದ ಅಖಾಡ ಜೋರಾಗುತ್ತಿದೆ.
2ನೇ ಹಂತಕ್ಕೆ ಬಹಿರಂಗ ಪ್ರಚಾರ ಇಂದು ಅಂತ್ಯ
ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಮೊದಲನೇ ಹಂತದ ಚುನಾವಣೆ ಮುಗಿದಿದ್ದು, ಎರಡನೇ ಹಂತದ ಬಹಿರಂಗ ಪ್ರಚಾರಕ್ಕೆ ಶುಕ್ರವಾರ ತೆರೆ ಬೀಳಲಿದೆ. ಈ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತಗಳು ಸಕಲ ಸಿದ್ಧತೆ ಕೈಗೊಂಡಿವೆ. 2ನೇ ಹಂತದಲ್ಲಿ ರಾಜ್ಯದ 109 ತಾಲೂಕುಗಳ 2,709 ಗ್ರಾಪಂಗಳಿಗೆ ಡಿ.27ರಂದು ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಈ ಹಂತದಲ್ಲಿ 3,697 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 216 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + two =
Remember me
