ನವದೆಹಲಿ:ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್​ಪ್ರೆಸ್​ಗೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ನವೆಂಬರ್ 11ಕ್ಕೆ ಚಾಲನೆ ನೀಡಲಿದ್ದಾರೆ. ಗಂಟೆಗೆ 77.53 ಕಿ.ಮೀ ವೇಗದಲ್ಲಿ ಸಂಚರಿಸಲಿರುವ ಈ ರೈಲು ಬುಧವಾರ ಹೊರತುಪಡಿಸಿ ವಾರದ ಆರು ದಿನ ಸಂಚರಿಸಲಿದೆ. ಮೈಸೂರು ಮತ್ತು ಚೆನ್ನೈ ನಡುವೆ 504 ಕಿ.ಮೀ ಅಂತರವನ್ನು 6 ಗಂಟೆ 40 ನಿಮಿಷದಲ್ಲಿ ಕ್ರಮಿಸಲಿದೆ. ಇದರೊಂದಿಗೆ ಈಗಾಗಲೇ ಇರುವ ಶತಾಬ್ದಿ ಎಕ್ಸ್​ಪ್ರೆಸ್ ಸೇವೆಯೂ ಯಥಾಸ್ಥಿತಿಯಂತೆ ಮುಂದುವರಿಯಲಿದೆ.
11ಕ್ಕೆ ಚಾಲನೆ | 504 ಕಿ.ಮೀ ದೂರ | 6.40 ತಾಸಿನ ಪಯಣ
ರೈಲಿನ ವಿಶೇಷ: ಹವಾನಿಯಂತ್ರಿತ ಕೋಚ್​ಗಳು ಮತ್ತು ರಿಕ್ಲೈನರ್ ಸೀಟ್​ಗಳನ್ನು ಹೊಂದಿದ್ದು, ಎಕ್ಸಿಕ್ಯುಟಿವ್ ಮತ್ತು ಎಕಾನಮಿ ಕಾರ್ ಎಂಬ ಎರಡು ವಿಭಾಗಗಳನ್ನು ಹೊಂದಿದೆ. ಎಕ್ಸಿಕ್ಯುಟಿವ್ ವರ್ಗವು 180 ಡಿಗ್ರಿ ತಿರುಗಬಹುದಾದ ಆಸನಗಳನ್ನು ಹೊಂದಿದ್ದು, ಎಕಾನಮಿ ಕ್ಲಾಸ್​ನಲ್ಲಿನ ಸೀಟುಗಳು ಸುಲಭವಾಗಿ ಒರಗಿಕೊಳ್ಳಲು ಅನುಕೂಲವಾಗಿದ್ದು, ನಾಲ್ಕು ಚಕ್ರ ವಾಹನಗಳಂತೆ ಮುಂದಕ್ಕೆ ಸ್ಲಿಡ್ ಮಾಡಬಹುದಾಗಿದೆ. 16 ಬೋಗಿಗಳನ್ನು ಹೊಂದಿದ್ದು, 1,128 ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ವಿಮಾನದಲ್ಲಿ ಪ್ರಯಾಣಿಸಿದ ಅನುಭವವನ್ನು ಇದು ನೀಡಲಿದೆ.
ಟಿಕೆಟ್ ದರ: ಮೈಸೂರು ಮತ್ತು ಚೆನ್ನೈ ನಡುವೆ ಎಕಾನಮಿ ಕ್ಲಾಸ್​ನಲ್ಲಿ ಪ್ರಯಾಣಿಸುವವರಿಗೆ ಮೂಲ ಟಿಕೆಟ್ ದರ 921 ರೂ. ಇರಲಿದ್ದು, ಎಕ್ಸಿಕ್ಯುಟಿವ್ ಕ್ಲಾಸ್​ನಲ್ಲಿ ಪ್ರಯಾಣಿಸುವವರಿಗೆ 1,880 ರೂ., ಮೈಸೂರು ಮತ್ತು ಬೆಂಗಳೂರು ನಡುವೆ ಎಕಾನಮಿ ಕ್ಲಾಸ್​ನಲ್ಲಿ 368 ರೂ., ಎಕ್ಸಿಕ್ಯುಟಿವ್ ಕ್ಲಾಸ್​ನಲ್ಲಿ 768 ರೂ. ದರ ನಿಗದಿಪಡಿಸಲಾಗಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 1 =
Remember me
