ಚಿಕ್ಕಬಳ್ಳಾಪುರ: ಮನೆಗೆ ಲಾಟರಿ ಬಹುಮಾನದ ಕೂಪನ್​ ಒಳಗೊಂಡ ಅಂಚೆ ಪತ್ರವನ್ನು ಕಳುಹಿಸುವ ಮೂಲಕ ವಂಚಿಸುವ ಹೊಸ ತಂತ್ರಗಾರಿಕೆಯನ್ನು ದಂಧೆಕೋರರು ಅನುಸರಿಸುತ್ತಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಪೊಲೀಸ್​ ಇಲಾಖೆಯು ಸಲಹೆ ನೀಡಿದೆ.ಹಿಂದೆ ಇ ಮೇಲ್​ ಇಲ್ಲವೇ ಮೊಬೈಲ್​ ಸಂಖ್ಯೆಗೆ ಕಳುಹಿಸಿದ ಲಿಂಕ್​ ಮೂಲಕ ಹಣವನ್ನು ಎಗರಿಸುತ್ತಿದ್ದ ವಂಚನೆಗೆ ಈಗ ಹೊಸ ಸ್ಪರ್ಶ ನೀಡಲಾಗಿದೆ. ಅನಧಿಕೃತ ಕಂಪನಿಗಳ ಹೆಸರಿನಲ್ಲಿ ಲಾಟರಿ ಬಹುಮಾನದ ಕೂಪನ್​ ಅಂಚೆ ಪತ್ರಗಳನ್ನು ನೇರವಾಗಿ ಮನೆಗಳಿಗೆ ಕಳುಹಿಸಲಾಗುತ್ತಿದೆ. ಇದನ್ನು ನಂಬಿ, ಅದರಲ್ಲಿನ ಸಲಹೆ ಸೂಚನೆಗಳಂತೆ ನಡೆದುಕೊಂಡಲ್ಲಿ ಬ್ಯಾಂಕ್​ ಖಾತೆಯಲ್ಲಿನ ಹಣವು ಖಾಲಿಯಾಗಿರುತ್ತದೆ. ಈಗಾಗಲೇ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆ ವಂಚನೆಯ ಪ್ರಕರಣಗಳು ವರದಿಯಾಗಿವೆ.
*ಪತ್ರದಲ್ಲಿ ಹೇಗೆ ವಂಚನೆ?ಹೇಗೋ ಜನರ ವಿಳಾಸವನ್ನು ಪಡೆದುಕೊಂಡು ಮನೆಗಳಿಗೆ ನೋಂದಾಯಿತ ಅಂಚೆ ಪತ್ರವನ್ನು ಕಳುಹಿಸಲಾಗುತ್ತಿದೆ. ಇದನ್ನು ತೆರೆದು ನೋಡಿದಾಗ ಅರ್ಜಿ ನಮೂನೆ, ಕಂಪನಿ ಸವಲತ್ತುಗಳ ಮಾಹಿತಿ ಪುಸ್ತಕ, ಕೂಪನ್​ ಇರುತ್ತದೆ. ಇದರಲ್ಲಿ ಪ್ರಮುಖವಾಗಿ ಲಾಟರಿ ಅದೃಷ್ಟವನ್ನು ಪರಿಶೀಲಿಸಿಕೊಳ್ಳಲು ರಹಸ್ಯವಾಗಿ ಮುದ್ರಿತ ಭಾಗದಲ್ಲಿ ಮೊದಲು ಸ್ಕ್ರಆಚ್​ ಮಾಡಲು, ಬಳಿಕ ಅಲ್ಲಿ ಕಾಣುವ ಬಹುಮಾನದ ಹಣವನ್ನು ಪಡೆಯಲು ಕ್ಯೂರ್​ ಕೋಡ್​ ಸ್ಕಾ$ನ್​ ಮಾಡಲು ಹೇಳಲಾಗಿರುತ್ತದೆ.
*ನಂಬಿ ಮೋಸ ಹೋಗದಿರಿಆಸೆ ಆಮಿಷಗಳನ್ನೊಡ್ಡಿ ನಾನಾ ತಂತ್ರಗಾರಿಕೆಯಲ್ಲಿ ಹಣವನ್ನು ಕದಿಯುವ ವಂಚನೆಯ ಪ್ರಕರಣಗಳು ವ್ಯಾಪಕ ನಡೆಯುತ್ತಿವೆ. ಇದನ್ನು ನಂಬಿ ಅಮಾಯಕ ಜನರು ಮೋಸ ಹೋಗುತ್ತಿದ್ದಾರೆ. ಕೊನೆಗೆ ಪೊಲೀಸ್​ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಜಾಣ ಕುರುಡರಂತೆ ಅಪರಿಚಿತರ ಸಲಹೆ ಸೂಚನೆಗಳನ್ನು ಪಾಲಿಸುವುದು ಇಲ್ಲವೇ ಅನಧಿಕೃತ ವ್ಯಕ್ತಿ ಇಲ್ಲವೇ ಕಂಪನಿಗಳೊಂದಿಗೆ ವ್ಯವಹರಿಸುವುದನ್ನು ಬಿಡಬೇಕು ಎಂದು ಪೊಲೀಸ್​ ಇಲಾಖೆ ಸಲಹೆ ನೀಡಿದೆ.ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುವ ವಿಡಿಯೋವನ್ನು ಬಿಡುಗಡೆಗೊಳಿಸಿ, ಜಾಗೃತಿ ಮೂಡಿಸುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 5 =
Remember me
