ಬೆಂಗಳೂರು:ಕಾಂಗ್ರೆಸ್​ ಶಾಸಕರೊಬ್ಬರು ಶರ್ಟ್​ ಬಿಚ್ಚಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆ ವಿಧಾನಸಭೆ ಅಧಿವೇಶನಲ್ಲಿ ಇಂದು ಸಂಭವಿಸಿದೆ.
ಒನ್ ನೇಷನ್ ಒನ್ ಎಲೆಕ್ಷನ್​ ಕುರಿತು ಚರ್ಚೆಗೆ ವಿರೋಧಿಸಿದ ವಿಪಕ್ಷದವರು ಸ್ಪೀಕರ್​ ಮೇಲೆ ಪೇಪರ್​ ಎಸೆದು ಗರಂ ಆದರು. ಅದೇ ವೇಳೆ ತನ್ನ ಮೇಲೆ ದಬ್ಬಾಳಿಕೆ ಆಗ್ತಿದೆ ಎಂದು ಸದನದಲ್ಲೇ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಪ್ರತಿಭಟನೆ ಮಾಡಿದರು. ಗರಂ ಆದ ಸ್ಪೀಕರ್, ಸದನ ಅಂದ್ರೆ ಏನ್​ ಅನ್ಕೊಂಡಿದ್ದೀರಿ? ಸದನ ಅಂದ್ರೆ ತಮಾಷೆ ಮಾಡ್ತೀರಾ? ಈ ಮೂಲಕ ಕ್ಷೇತ್ರದ ಜನತೆಗೆ ಅಗೌರವ ತಂದಿದ್ದೀರಿ. ಈ ರೀತಿ ಮಾಡಿದ್ರೆ ಕ್ರಮ ಕೈಗೊಳ್ತೀವಿ. ಸಭ್ಯತೆ ಮರೆತು ವರ್ತಿಸಿದ್ದೀರಿ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.ಇದನ್ನೂ ಓದಿರಿರಮೇಶಣ್ಣನ ಮರ್ಯಾದೆ ತೆಗೆಯಲು ಕೋಟ್ಯಂತರ ಹಣ ಖರ್ಚು ಮಾಡಿದ್ದಾರೆ, ದಿನೇಶ್ ಕಲ್ಲಹಳ್ಳಿ ಕೇವಲ ದಾಳ…
ಹದಿನೈದು ನಿಮಿಷಗಳ ಕಾಲ ಸದನ ಮುಂದೂಡಿದ ಸ್ಪೀಕರ್​, ಪೀಠದಿಂದ ಎದ್ದು ಹೋದರೂ ಪ್ರತಿಭಟನೆಯ ಸ್ಥಳದಿಂದ ಶಾಸಕ ಸಂಗಮೇಶ್ ತೆರಳಲಿಲ್ಲ. ಕಾಂಗ್ರೆಸ್ ಶಾಸಕರು ಕರೆದ್ರೂ ಸಂಗಮೇಶ್​ ಪಟ್ಟು ಸಡಿಸಲಿಲ್ಲ. ಸ್ವತಃ ಸಿದ್ದರಾಮಯ್ಯ ಮನವೊಲಿಕೆ ಮಾಡಿದ್ರು ಜಗ್ಗಲಿಲ್ಲ. ನಂತರ ಡಿಕೆಶಿ ಅವರು ಶರ್ಟ್ ಹಾಕಿಸಿದರು.
ಶರ್ಟ್​ ಬಿಚ್ಚಿ ಅಶಿಸ್ತು ತೋರಿದ ಸಂಗಮೇಶ್​ ಅವರನ್ನ ಒಂದು ವಾರ ಸದನಕ್ಕೆ ಬಾರದಂತೆ ಅಮಾನತು ಮಾಡಿ ಸ್ಪೀಕರ್​ ಕಾಗೇರಿ ಆದೇಶಿಸಿದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ನನ್ನ ಕ್ಷೇತ್ರದಲ್ಲಿ ಭಾರಿ ಕಿರುಕುಳ ಕೊಡ್ತಿದ್ದಾರೆ, ನನ್ನನ್ನು ನೀವೆ ರಕ್ಷಿಸಿ: ಶಾಸಕನ ಅಳಲು

ಇನ್ನೂ 19 ಜನರ ಸೆಕ್ಸ್​ ಸಿಡಿ ಇದೆ, ಒಬ್ಬ ಮಾಜಿ ಸಿಎಂ ಅದಕ್ಕಾಗಿಯೇ ರೆಸಾರ್ಟ್​ಗೆ ಹೋಗ್ತಾರೆ..!

ರಮೇಶಣ್ಣನ ಮರ್ಯಾದೆ ತೆಗೆಯಲು ಕೋಟ್ಯಂತರ ಹಣ ಖರ್ಚು ಮಾಡಿದ್ದಾರೆ, ದಿನೇಶ್ ಕಲ್ಲಹಳ್ಳಿ ಕೇವಲ ದಾಳ…

ಜೀವಂತ ಯುವಕನನ್ನೇ ಪೋಸ್ಟ್ ಮಾರ್ಟಂಗೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 8 =
Remember me
