ಬೆಂಗಳೂರು:ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಖಂಡಿಸಿ ದೇಶವ್ಯಾಪಿ ವಿವಿಧ ಕಾರ್ಮಿಕ ಸಂಘಟನೆಗಳು ಇಂದು ಭಾರತ್​ ಬಂದ್​ಗೆ ಕರೆ ಕೊಟ್ಟಿವೆಯಾದರೂ ರಾಜ್ಯ ರಾಜಧಾನಿಯಲ್ಲಿ ಮಾಮೂಲಿ ದಿನಗಳಂತೆ ಬಸ್​ ಸಂಚಾರ ಆರಂಭವಾಗಿದ್ದು, ಜನರು ತಮ್ಮ ಪ್ರತಿನಿತ್ಯದ ಚಟುವಟಿಕೆಗಳ ಕಡೆ ಗಮನಹರಿಸಿದ್ದಾರೆ.
ಭಾರತ್ ಬಂದ್​ಗೆ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ ಬೆಂಬಲ ನೀಡಿದಿರುವುದರಿಂದ ನಗರದ ಕೇಂದ್ರ ಭಾಗವಾದ ಮೆಜೆಸ್ಟಿಕ್ ಬಸ್ ನಿಲ್ದಾಣ ಎಂದಿನಂತಿದೆ. ಈಗಾಗಲೇ ರಸ್ತೆಗೆ ಇಳಿದಿರುವ ಬಸ್​ಗಳಲ್ಲಿ ಎಂದಿನಂತೆಯೇ ಪ್ರಯಾಣಿಕರ ಸಂಖ್ಯೆ ಕಾಣುತ್ತಿದೆ.
ಇನ್ನು ಬಸ್ ನಿಲ್ದಾಣದ ಆಸು-ಪಾಸಿನ ಎಲ್ಲಾ ಅಂಗಡಿ-ಮುಂಗಟ್ಟುಗಳು ಕೂಡ ತೆರೆದಿವೆ. ದಿನನಿತ್ಯ ಕಾರ್ಯ ನಿರ್ವಹಿಸುವ ಆಟೋ ಮತ್ತು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಕೂಡ ಲಭ್ಯವಿದೆ.
ಪರಿಸ್ಥಿತಿ ಆರಂಭದಲ್ಲಿ ಸಹಜವಾಗಿದ್ದರೂ ಮುಂಜಾಗ್ರತ ಕ್ರಮವಾಗಿ ಮೆಜೆಸ್ಟಿಕ್ ಸುತ್ತ-ಮುತ್ತ ಬಿಗಿ ಪೊಲೀಸ್​ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು, ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಯತ್ನಿಸಿದ್ರೆ ಕ್ರಮಕೈಗೊಳ್ಳಾಗುತ್ತದೆ.
ಕೆ.ಆರ್​. ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಆರಂಭಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿಯೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೂತ್ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ. ಇನ್ನು ಕೆ.ಆರ್​. ಮಾರ್ಕೆಟ್​ ಬಳಿಯು ಎಂದಿನಂತೆ ಬಸ್ ಸಂಚಾರವಿದೆ. ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ. ಆಟೋಗಳು ಕೂಡ ಎಂದಿನಂತೆ ಕಾರ್ಯನಿರ್ವಹಣೆ ಮಾಡುತ್ತಿವೆ. ವ್ಯಾಪಾರ-ವಹಿವಾಟು ಆರಂಭವಾಗಿದ್ದು, ಬೆಳಿಗ್ಗೆ 3 ಗಂಟೆಯಿಂದ ವ್ಯಾಪಾರ ಸರಾಗವಾಗಿ ಸಾಗಿದೆ. ಬೆಳಿಗ್ಗೆಯಿಂದಲೇ ತರಕಾರಿ, ಹೂ-ಹಣ್ಣು ಖರೀದಿಯಲ್ಲಿ ಜನ ತೊಡಗಿದ್ದಾರೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 20 =
Remember me
