ಹೊಸಪೇಟೆ/ಕೊಪ್ಪಳ:ಅಖಂಡ ಭಾರತವನ್ನು ವಿಭಜಿಸಿದ್ದ ಕಾಂಗ್ರೆಸ್​ನಿಂದ ಈಗ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಜೋಡಿಸುವುದರಲ್ಲೇ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸುಸ್ತಾಗಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.
ಹೊಸಪೇಟೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ನೀತಿಯಿಂದಾಗಿ ದೇಶದ ಪೂರ್ವದಿಂದ ದಕ್ಷಿಣದವರೆಗಿನ 11 ರಾಜ್ಯಗಳಲ್ಲಿ ನಕ್ಸಲೈಟ್​ಗಳು ಹುಟ್ಟಿಕೊಂಡರು. ಖಲಿಸ್ತಾನ್ ಪರಿಕಲ್ಪನೆ ಜನಿಸಿದ್ದು ಕಾಂಗ್ರೆಸ್ ನೀತಿಯಿಂದಾಗಿ ಎಂದು ಆರೋಪಿಸಿದರು. ಕೊಪ್ಪಳದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್​ಗೆ 50 ವರ್ಷ ದಲಿತರ ಕೂಗುಕೇಳಲಿಲ್ಲ. ಮೀಸಲು ಹೆಚ್ಚಳಕ್ಕಾಗಿ ನಾಗಮೋಹನ್ ದಾಸ್ ಸಮಿತಿ ರಚಿಸಿದ್ದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಅನುಮೋದಿಸಿದ್ದು ಬಿಜೆಪಿ ಸರ್ಕಾರ ಎಂದು ಹೇಳಿದರು. ನಾನು ಕನಕನ ನೆಲದಿಂದ ಬಂದವನು. ಕಾಗಿನೆಲೆ ಕ್ಷೇತ್ರ ಅಭಿವೃದ್ಧಿಗೆ 40 ಕೋಟಿ ರೂ. ಅನುದಾನ ನೀಡಿದ್ದು, ಮಹರ್ಷಿ ವಾಲ್ಮೀಕಿ, ಕನಕದಾಸ ಸರ್ಕಾರಿ ಜಯಂತಿ ಘೊಷಿಸಿದ್ದು ಯಡಿಯೂರಪ್ಪ. ಕಾಂಗ್ರೆಸ್​ನವರು ವಕ್ಪ್ ಆಸ್ತಿ ನುಂಗುವ ಮೂಲಕ ಅಲ್ಪಸಂಖ್ಯಾತರಿಗೂ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಮೋದಿ ಬಗ್ಗೆ ಮಾತಾಡಿದ್ರೆ ಪ್ರತಿಭಟಿಸಿ:ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಲಘುವಾಗಿ ಮಾತನಾಡಿದ ರಾಹುಲ್ ಗಾಂಧಿಯನ್ನು ಬಚ್ಚಾ ಎಂದಿದ್ದೆ ಎಂದು ಸಮರ್ಥಿಸಿಕೊಂಡರು. ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ವಿಶ್ವದ ಶೇ.73 ಮಂದಿ ಮೋದಿ ಅವರನ್ನು ಮೆಚ್ಚುಕೊಂಡಿದ್ದಾರೆ. ಅವರ ಬಗ್ಗೆ ಯಾರೇ ಹಗುರವಾಗಿ ಮಾತನಾಡಿದರೆ ಪಕ್ಷದ ಕಾರ್ಯಕರ್ತರು ಪ್ರತಿಭಟಿಸಬೇಕು. ಅವರಿಗೆ ತಕ್ಕ ಉತ್ತರ ನೀಡಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.
ಸಾಮಾಜಿಕ ನ್ಯಾಯ, ದಲಿತರ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿ ಹೇಗಿತ್ತು. ಮೂರು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ ಎಂದು ಮಾಜಿ ಸ್ಪೀಕರ್ ರಮೇಶ್ಕುಮಾರ್ ಹೇಳಿದ್ದು ಸುಳ್ಳು ಎಂದು ಯಾರೂ ಹೇಳಲಿಲ್ಲ. ಜನರ ಆಸ್ತಿ ಹೊಡೆದ ಇವರಿಗೆ ಮತ್ತೆ ಮತ ಕೇಳಲು ನಾಚಿಕೆ ಆಗುವುದಿಲ್ಲವೇ? ಎಂದು ಕೇಳಿದರು. ‘ದೇಶದಲ್ಲಿ ಎರಡು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಇದೆ. ಪಾದಯಾತ್ರೆಯಿಂದ ನಿಮ್ಮ ಆರೋಗ್ಯ ಸುಧಾರಿಸಬಹುದು. ರಾಜ್ಯದ ಜನರು ಈಗಾಗಲೇ ಬಿಜೆಪಿ ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ’ ಎಂದು ಕೊಪ್ಪಳದಲ್ಲಿ ಬಿಎಸ್​ವೈ ಹೇಳಿದರು.
ಸಿದ್ದರಾಮಯ್ಯ ನನ್ನನ್ನು ತನ್ನ ಗಿರಾಕಿ ಅಂತ ಹೇಳುತ್ತಾರೆ. ಹಾಗಾದರೆ ಅವರು ಯಾರ ಗಿರಾಕಿ? ಅವರು ಜನತಾದಳದಲ್ಲಿದ್ದಾಗ ಸೋನಿಯಾ ಗಾಂಧಿ ಬಗ್ಗೆ ಮಾತನಾಡಿದ ಟೇಪ್ ರೆಕಾರ್ಡರ್ ಹಾಕಿದರೆ ಗೊತ್ತಾಗುತ್ತದೆ. ಸಂಕಲ್ಪಯಾತ್ರೆಗೆ ಹೋಗಲು ಧಮ್ ಇಲ್ಲವೆಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ನಾನೂ ಅವತ್ತೇ ಹೇಳಿದ್ದೆ. ನಮ್ಮ ಯಾತ್ರೆ ಶುರುವಾದಾಗ ಧಮ್ ಇದ್ದರೆ ತಡೆಯಲಿ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಬಸವರಾಜ ಬೊಮ್ಮಾಯಿ ಎಸ್ಸಿ-ಎಸ್ಟಿ ಜನಕ್ಕೆ ಮೀಸಲು ಹೆಚ್ಚಿಸಿ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ಇದು ಸೇರಿದಂತೆ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ. ಆಗ ಸಿದ್ದರಾಮಯ್ಯ, ಶಿವಕುಮಾರ್ ಮನೆಗೆ ಹೋಗುವುದರಲ್ಲಿ ಸಂಶಯವಿಲ್ಲ.
|ಬಿ.ಎಸ್.ಯಡಿಯೂರಪ್ಪಮಾಜಿ ಮುಖ್ಯಮಂತ್ರಿ
ತೆರೆದ ಜೀಪಲ್ಲಿ ಮೆರವಣಿಗೆ:ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿರುವ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಹಾಗೂ ಮತ್ತಿತರ ಸಚಿವರನ್ನು ವಿವಿಧ ಕೇರಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಸ್ಥಳೀಯರು ನಾಯಕರ ಮೇಲೆ ಪುಷ್ಪ ವೃಷ್ಟಿಗರೆದರು.
ದಲಿತರ ಮನೆಯಲ್ಲಿ ಉಪಾಹಾರ ಸೇವನೆ:ಹೊಸಪೇಟೆಯ ದುರ್ಗಮ್ಮ ಗುಡಿ ಪಕ್ಕದ ದಲಿತ ಸಮುದಾಯದ ಹಿರಾಳ ಕೊಲ್ಲಾರಪ್ಪ ಮನೆಯಲ್ಲಿ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳ, ಸಂಸದ ವೈ.ದೇವೇಂದ್ರಪ್ಪ ಇತರರು ಕೇಸರಿಬಾತ್, ಮಂಡಕ್ಕಿ ವಗ್ಗರಣೆ, ಮಿರ್ಚಿ, ಉಪ್ಪಿಟ್ಟು ಸೇವಿಸಿ, ಚಹಾ ಸವಿದರು.
ಅಂದಿನ ಪರಿಸ್ಥಿತಿಯೇ ಬೇರೆ, ಈಗ ಹಾಗಿಲ್ಲ: ಯಕ್ಷಗಾನಕ್ಕೆ ಕಾಲಮಿತಿ ಒಳಿತು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
