| ಶ್ರೀಕಾಂತ್​ ಶೇಷಾದ್ರಿ ಮೈಸೂರು
ತಮಿಳುನಾಡು, ಕೇರಳದಲ್ಲಿ ಸಿಕ್ಕಿದ ಸಿಹಿ ಅನುಭವಗಳ ಮೂಟೆಹೊತ್ತು ಕರುನಾಡಿಗೆ ಪ್ರವೇಶ ಕೊಡುತ್ತಿರುವ ರಾಹುಲ್​ ಗಾಂಧಿ ನೇತೃತ್ವದ ಭಾರತ್​ ಜೋಡೋ ಯಾತ್ರೆ ಮೇಲೆ ರಾಜ್ಯದ ಕೈ ನಾಯಕರು ಅಪಾರ ನಿರೀೆ ಇಟ್ಟುಕೊಂಡಂತೆ ಕಾಣಿಸಿದೆ. ವಿಧಾನಸಭಾ ಚುನಾವಣೆಗೆ ವರ್ಷವೂ ಬಾಕಿ ಇಲ್ಲದಿರುವಾಗ ಪದ ಪರ ಅಲೆ ಎಬ್ಬಿಸಲು ಈ 21 ದಿನಗಳ ಮೆಗಾ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳುವ ಸಕಲ ರೂಪುರೇಷೆ ಸಿದ್ಧವಾಗಿದೆ. ಪಾದಯಾತ್ರೆ ಮಾಡಿದರೆ ಜನಬೆಂಬಲ ಸಿಗಲಿದೆ ಎಂಬ ಖಚಿತ ನಂಬಿಕೆ ರಾಜಕೀಯ ನಾಯಕರಲ್ಲಿದೆ. ಕಾಕತಾಳೀಯ ಎಂಬಂತೆ ಈ ಕೆಲವು ಉದಾಹರಣೆಗಳು ರಾಜ್ಯ ರಾಜಕೀಯದ ಇತಿಹಾಸದ ಪುಟದಲ್ಲಿದೆ. ಇನ್ನು ಸ್ಮೂವಾಗಿ ಅವಲೋಕಿಸಿದರೆ ಮೂರು ಪ್ರಮುಖ ನಿರೀೆಗಳು ಕಾಣಸಿಗುತ್ತಿದೆ.
1. ಪಕ್ಷದ ರಾಜ್ಯ ಟಕದ ವಿಚಾರಕ್ಕೆ ಮೊದಲು ಗೊಂಡರೆ, ಹಳೇ ಮೈಸೂರು ಭಾಗ, ಮಧ್ಯಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್​ ಈ ಹಿಂದೆ ಹಿಡಿತ ಇಟ್ಟುಕೊಂಡಿದ್ದ ಕಡೆ ಈ ರ್ಯಾಲಿ ಹಾದು ಹೋಗಲಿದೆ. ಪಕ್ಷವು ಕಾಲಾನಂತರದಲ್ಲಿ ಸ್ವಯಂಕೃತ ಅಪರಾಧಗಳಿಂದ ಕಳೆದುಕೊಂಡ ಕ್ಷೇತ್ರದಲ್ಲಿ ಪುನಃ ಅಧಿಪತ್ಯ ಸಾಧಿಸಬೇಕೆಂಬ ತವಕದಲ್ಲಿದ್ದು, ಈ ರ್ಯಾಲಿ ಮೂಲಕ ತನ್ನ ಬಲವರ್ಧನೆ ಎದುರು ನೋಡುತ್ತಿದೆ. ಪಕ್ಷ ಸಂಟನೆಯಲ್ಲಿ ಚುರುಕು, ಒಗ್ಗಟ್ಟು ಪ್ರದರ್ಶನ, ಎದುರಾಳಿಗಳ ಎದುರು ಶಕ್ತಿ ಪ್ರದರ್ಶನ ಹಾಗೂ ಮುಖ್ಯವಾಗಿ ರಾಜ್ಯದಲ್ಲಿ ಕಾಂಗ್ರೆಸ್​ ಪರ ಅಲೆ ಇದೆ ಎಂದು ತೋರಿಸಲು ಇದು ಭೂಮಿಕೆಯಾಗಿರಲಿದೆ. 21 ದಿನ ನಿರಂತರವೂ ಸರಾಸರಿ 20 ಸಾವಿರ ಜನ ರಾಹುಲ್​ ಜತೆಗೆ ಹೆಜ್ಜ್ಜೆ ಹಾಕಿದರೆ, ಸಹಜವಾಗಿ ಕಾಂಗ್ರೆಸ್​ ಪರ ವಾತಾವರಣ ಇದೆ ಎಂಬ ಸಂದೇಶ ಜನರಿಗೆ ಹೋಗಲಿದೆ ಎಂಬ ಲೆಕ್ಕಾಚಾರದಲ್ಲೇ ತಯಾರಿ ಮಾಡಿಕೊಳ್ಳಲಿದೆ.
2. ಪಕ್ಷದ ರಾಷ್ಟ್ರೀಯ ಟಕದ ವಿಚಾರದಲ್ಲಿ ಗಮನಿಸುವುದಾದರೆ, ಮುಂದಿನ ವರ್ಷ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್​ ಪಾಲಿಗೆ ಕರ್ನಾಟಕ ನೆಚ್ಚಿನ ರಾಜ್ಯ. ಅಧಿಕಾರ ಅನುಭವಿಸಿದ, ಮುಂದೆ ಹೆಚ್ಚಿನ ಅವಕಾಶ ಇರುವ ರಾಜ್ಯ ಎಂಬುದನ್ನು ಅರಿತಿದೆ. ಅದರಲ್ಲೂ ದಣ ರಾಜ್ಯಗಳ ಪೈಕಿ ಪೂರ್ಣ ಬಹುಮತದೊಂದಿಗೆ ಪುನ@ ಅಧಿಕಾರಕ್ಕೆ ಬರಬಹುದಾದ ರಾಜ್ಯವಿದ್ದರೆ ಅದು ಕರ್ನಾಟಕ ಮಾತ್ರ. ಇದೇ ಕಾರಣಕ್ಕೆ ಭಾರತ್​ ಜೋಡೋ ಯಾತ್ರೆಯನ್ನು ಗಂಭೀರವಾಗಿ ಪರಿಗಣಿಸಿದೆ. 3,570 ಕಿಮೀ. ಸಾಗುವ ಇಡೀ ಯಾತ್ರೆಯಲ್ಲಿ ಹೆಚ್ಚು ಸಮಯ ಸಾಗುವುದು ಮೂರು ರಾಜ್ಯಗಳಲ್ಲಿ. ಅದರಲ್ಲಿ ಕರ್ನಾಟಕವೂ ಒಂದು. ಇಷ್ಟೊಂದು ಅವಕಾಶ ಕೊಟ್ಟಿದ್ದಕ್ಕೆ ಕಾರಣವೂ ಇದೆ. ಕರ್ನಾಟಕದ ಚುನಾವಣೆ ಮೇಲೆ ಎಐಸಿಸಿ ಹೆಚ್ಚಿನ ನಿರೀೆ ಇಟ್ಟುಕೊಂಡಿದ್ದು, ಪೂರ್ಣ ಹಿಡಿತ ತೆಗೆದುಕೊಳ್ಳುತ್ತಿದೆ. ಇನ್ನು ಯಾತ್ರೆ ವೇಳೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಕೂಡ ರಾಜ್ಯಕ್ಕೆ ಭೇಟಿ ಕೊಟ್ಟು ಜನರ ನಡುವೆ ಕಾಣಿಸಿಕೊಳ್ಳುವ ಮೂಲಕ ಯಾತ್ರೆಯ ಹವಾ ಹೆಚ್ಚಿಸುವವರಿದ್ದಾರೆ.
3. ರಾಹುಲ್​ ಗಾಂಧಿ ಬಗೆಗಿನ ನಕಾರಾತ್ಮಕ ಅಭಿಪ್ರಾಯ ಗಟ್ಟಿಯಾಗಿ ಕುಳಿತಿರುವುದೇ ಪಕ್ಷಕ್ಕಾಗಿರುವ ಈವರೆಗಿನ ದೊಡ್ಡ ಹಿನ್ನೆಡೆ. ಮುಂಬರುವ ಚುನಾವಣೆಯೊಳಗಾದರೂ ವರ್ಚಸ್ಸು ಹೆಚ್ಚಿಸಿಕೊಳ್ಳಲು, ಜನರ ಅಭಿಪ್ರಾಯ ಬದಲಿಸಬೇಕೆಂಬ ತೆರೆಮರೆಯ ಉದ್ದೇಶದಲ್ಲೇ ರಾಹುಲ್​ ರಸ್ತೆಗಿಳಿದು ದೊಡ್ಡ ಯಾತ್ರೆ ಕೈಗೊಂಡಿದ್ದಾರೆ. ಹಿಂದೆಲ್ಲ ಅವರ ವಿರೋಧಿಗಳಿಂದ ಅರೆಕಾಲಿಕ ರಾಜಕಾರಣಿ ಎಂದು ಬಿಂಬಿತವಾಗಿರುವುದು, ಭಾಷಣದಲ್ಲಿನ ದೋಷ& ಹಾವ ಭಾವದ ಟ್ರೋಲ್​ನಿಂದ ಮುಜುಗರವಾಗಿತ್ತು. ಆದರೆ ಈ ಪಾದಯಾತ್ರೆ ಅವರಿಗೆ ಹೊಸ ಇಮೇಜ್​ ತಂದುಕೊಡುತ್ತಿದೆ. ಜನರ ನಡುವೆ ಯಾವುದೇ ಬೇಧಭಾವ ಇಲ್ಲದೆ ಎಲ್ಲರನ್ನು ಅಪ್ಪಿಕೊಳ್ಳುತ್ತ ಹೆಜ್ಜೆ ಹಾಕುತ್ತಿದ್ದು, ಜನರ ಅಭಿಪ್ರಾಯ ಬದಲಿಸುವವ ಎಂಬ ಭಾವನೆ ಜನರಲ್ಲಿ ಮೂಡುವಂತೆ ರಾಹುಲ್​ ನೋಡಿಕೊಳ್ಳುತ್ತಿದ್ದಾರೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ರಾಹುಲ್​ ಈ ಹಿಂದೆ ಚುನಾವಣೆ ಪ್ರಚಾರಕ್ಕೆ ಸಾಕಷ್ಟು ಬಾರಿ ಬಂದು ಹೋಗಿದ್ದಾರೆ. ದೊಡ್ಡ ದೊಡ್ಡ ರ್ಯಾಲಿಗಳಲ್ಲಿ ಬಂದು ಹೋಗಿದ್ದು ಅವರ ದನಿ ಚಿರಪರಿಚಿತ. ಆದರೆ, ಅವರು ವೇದಿಕೆಗೆ ಸೀಮಿತರಾಗಿದ್ದರು. ಈ ಬಾರಿ ರಸ್ತೆಗಿಳಿದು 21 ದಿನ ಹೆಜ್ಜೆ ಹಾಕುವುದರಿಂದ ರಾಜ್ಯದ ಜನರ ಮತ್ತು ತಮ್ಮದೇಪಕ್ಷದ ಕಾರ್ಯಕರ್ತರ ಮನಸ್ಸಿನಲ್ಲಿ ಛಾಪು ಮೂಡಿಸುವ ಇಚ್ಛೆ ಹೊಂದಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಪೂರ್ವ ಪೀಠಿಕೆಯೂ ಆಗಬಲ್ಲ “ಭಾರತ್​ ಜೋಡೋ ಯಾತ್ರೆ’ ಇನ್ನು 21 ದಿನ ರಾಜ್ಯದಲ್ಲಿ ಸಂಚರಿಸಲಿದ್ದು, ಶುಕ್ರವಾರ ಬೆಳಗ್ಗೆ ರಾಹುಲ್​ ಗಾಂಧಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸುವರು.ನೆಹರೂ ಕುಟುಂಬದ ವಾರಸುದಾರನನ್ನು ಸ್ವಾಗತಿಸಿ, ಅವರ ನಿರೀೆಗೆ ಹುಸಿಯಾಗದಂತೆ ನೋಡಿಕೊಳ್ಳಲು ಕೆಪಿಸಿಸಿ ರಚಿಸಿರುವ ಹತ್ತಾರು ತಂಡಗಳು ವ್ಯವಸ್ಥಿತವಾಗಿ ಸಿದ್ಧತೆ ನಡೆಸಿವೆ. ಇದಲ್ಲದೆ, ಒಟ್ಟಾರೆ ಈ ಕಾರ್ಯಕ್ರಮದ ಮೇಲೆ ಪಕ್ಷ ಹಾಗೂ ಪಕ್ಷದ ನಾಯಕರು ಬಹಳ ನಿರೀೆ ಇಟ್ಟುಕೊಂಡಿದ್ದಾರೆ.* ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತರಾದ ಕುಟುಂಬದವರ ಜತೆ ಚರ್ಚೆ, ಸೋಲಿಗರ ಜತೆ ಸಂವಾದ* ಪಾದಯಾತ್ರೆಯು ಭ್ರಷ್ಟಾಚಾರ, ಜಿಎಸ್​ಟಿ, ನಿರುದ್ಯೋಗ, ಬಡತನ ಮೊದಲಾದ ವಿಚಾರಗಳನ್ನು ಕೇಂದ್ರೀಕರಿಸಿ ಚಟುವಟಿಕೆ ನಡೆಸಲಿದೆ.* ಬೆಳಗ್ಗೆ 6.30ಕ್ಕೆ ಕಾಲ್ನಡಿಗೆ ಆರಂಭವಾಗಿ ಬಿಸಿಲು ಏರುವುದರೊಳಗೆ ನಿಗದಿತ ಸ್ಥಳ ತಲುಪಲಿದೆ. 3.30ಕ್ಕೆ ದಿನದ 2ನೇ ಚರಣದ ಯಾತ್ರೆ ಶುರುವಾಗಲಿದೆ.* ಮಧ್ಯಾಹ್ನ ಸಂವಾದ ನಡೆಯಲಿದ್ದು, ಸಮಾಜದ ವಿವಿಧ ವರ್ಗದವರೊಂದಿಗೆ ರಾಹುಲ್​ ಸಂವಾದ ನಡೆಸುವರು. ಮುಖ್ಯವಾಗಿ ಕೇಂದ್ರದ ವೈಲ್ಯಗಳ ಬಗ್ಗೆ ಚರ್ಚೆ ನಡೆಸುವರು.* ಪ್ರತಿದಿನ 20 ಸಾವಿರ ಜನರು ಇರುವಂತೆ ನೋಡಿಕೊಳ್ಳಲಾಗುತ್ತದೆ. 224 ಕ್ಷೇತ್ರಕ್ಕೂ ದಿನಗಳನ್ನು ಹಂಚಿಕೆ ಮಾಡಲಾಗಿದೆ. ನಿತ್ಯ 3 ಶಾಸಕರಿಗೆ ರಾಹುಲ್​ ಜತೆ ಹೆಜ್ಜೆ ಹಾಕಲು ಅವಕಾಶ ನೀಡಲಾಗುತ್ತದೆ.* ಬಳ್ಳಾರಿ ಸಮಾವೇಶ ಮತ್ತು ಗಾಂಧಿ ಜಯಂತಿ ಯಾತ್ರೆ ಸಂದರ್ಭದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳು. ಇದಕ್ಕಾಗಿ ಪ್ರತ್ಯೇಕ ತಯಾರಿ ನಡೆದಿದೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಪೂರ್ವ ಪೀಠಿಕೆಯೂ ಆಗಬಲ್ಲ “ಭಾರತ್​ ಜೋಡೋ ಯಾತ್ರೆ’ ಇನ್ನು 21 ದಿನ ರಾಜ್ಯದಲ್ಲಿ ಸಂಚರಿಸಲಿದ್ದು, ಶುಕ್ರವಾರ ಬೆಳಗ್ಗೆ ರಾಹುಲ್​ ಗಾಂಧಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸುವರು.
ನೆಹರೂ ಕುಟುಂಬದ ವಾರಸುದಾರನನ್ನು ಸ್ವಾಗತಿಸಿ, ಅವರ ನಿರೀೆಗೆ ಹುಸಿಯಾಗದಂತೆ ನೋಡಿಕೊಳ್ಳಲು ಕೆಪಿಸಿಸಿ ರಚಿಸಿರುವ ಹತ್ತಾರು ತಂಡಗಳು ವ್ಯವಸ್ಥಿತವಾಗಿ ಸಿದ್ಧತೆ ನಡೆಸಿವೆ. ಇದಲ್ಲದೆ, ಒಟ್ಟಾರೆ ಈ ಕಾರ್ಯಕ್ರಮದ ಮೇಲೆ ಪಕ್ಷ ಹಾಗೂ ಪಕ್ಷದ ನಾಯಕರು ಬಹಳ ನಿರೀೆ ಇಟ್ಟುಕೊಂಡಿದ್ದಾರೆ.
* ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಮೃತರಾದ ಕುಟುಂಬದವರ ಜತೆ ಚರ್ಚೆ, ಸೋಲಿಗರ ಜತೆ ಸಂವಾದ* ಪಾದಯಾತ್ರೆಯು ಭ್ರಷ್ಟಾಚಾರ, ಜಿಎಸ್​ಟಿ, ನಿರುದ್ಯೋಗ, ಬಡತನ ಮೊದಲಾದ ವಿಚಾರಗಳನ್ನು ಕೇಂದ್ರೀಕರಿಸಿ ಚಟುವಟಿಕೆ ನಡೆಸಲಿದೆ.* ಬೆಳಗ್ಗೆ 6.30ಕ್ಕೆ ಕಾಲ್ನಡಿಗೆ ಆರಂಭವಾಗಿ ಬಿಸಿಲು ಏರುವುದರೊಳಗೆ ನಿಗದಿತ ಸ್ಥಳ ತಲುಪಲಿದೆ. 3.30ಕ್ಕೆ ದಿನದ 2ನೇ ಚರಣದ ಯಾತ್ರೆ ಶುರುವಾಗಲಿದೆ.
* ಮಧ್ಯಾಹ್ನ ಸಂವಾದ ನಡೆಯಲಿದ್ದು, ಸಮಾಜದ ವಿವಿಧ ವರ್ಗದವರೊಂದಿಗೆ ರಾಹುಲ್​ ಸಂವಾದ ನಡೆಸುವರು. ಮುಖ್ಯವಾಗಿ ಕೇಂದ್ರದ ವೈಲ್ಯಗಳ ಬಗ್ಗೆ ಚರ್ಚೆ ನಡೆಸುವರು.* ಪ್ರತಿದಿನ 20 ಸಾವಿರ ಜನರು ಇರುವಂತೆ ನೋಡಿಕೊಳ್ಳಲಾಗುತ್ತದೆ. 224 ಕ್ಷೇತ್ರಕ್ಕೂ ದಿನಗಳನ್ನು ಹಂಚಿಕೆ ಮಾಡಲಾಗಿದೆ. ನಿತ್ಯ 3 ಶಾಸಕರಿಗೆ ರಾಹುಲ್​ ಜತೆ ಹೆಜ್ಜೆ ಹಾಕಲು ಅವಕಾಶ ನೀಡಲಾಗುತ್ತದೆ.* ಬಳ್ಳಾರಿ ಸಮಾವೇಶ ಮತ್ತು ಗಾಂಧಿ ಜಯಂತಿ ಯಾತ್ರೆ ಸಂದರ್ಭದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳು. ಇದಕ್ಕಾಗಿ ಪ್ರತ್ಯೇಕ ತಯಾರಿ ನಡೆದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
