ಡಿ.ಪಿ.ನಾಗರಾಜ್ ಶ್ರೇಷ್ಠಿ/ಬಸವರಾಜ್ ಹಿರಿಯೂರು, ಚಿತ್ರದುರ್ಗ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸೋಮವಾರ ಬೆಳಗ್ಗೆ ದಕ್ಷಿಣಕಾಶಿ ಹಿರಿಯೂರಿಗೆ ಆಗಮಿಸುವ ಮೂಲಕ ಏಳುಸುತ್ತಿನ ಕೋಟೆಯ ನಾಡು ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿತು.
ಸ್ವಾಗತ ಕೋರಲು ದಾರಿಯುದ್ದಕ್ಕೂ ನೆರೆದಿದ್ದ ಕಾರ್ಯಕರ್ತರು, ಪೂರ್ಣಕುಂಭ ಹೊತ್ತು ನಿಂತಿದ್ದ ಮಹಿಳೆಯರು, ಮಕ್ಕಳು, ಅಭಿಮಾನಿಗಳನ್ನು ಕಂಡು ಪುಳಕಿತರಾದ ರಾಹುಲ್ ಅವರತ್ತ ಕೈ ಬೀಸಿದರು.
ಕಿಕ್ಕಿರಿದು ಸೇರಿದ್ದ ಜನಸಾಗರ ಹಾಗೂ ಅವರಿಂದ ಸಿಕ್ಕ ಅಭೂತಪೂರ್ವ ಸ್ವಾಗತಕ್ಕೆ ಫಿದಾ ಆದ ರಾಗಾ, ಲಂಬಾಣಿ ಮಹಿಳೆಯರ ಜತೆ ಫೋಟೋಗೆ ಫೋಸ್ ನೀಡಿದರು. ಪಾದಯಾತ್ರೆ ವೇಳೆ ಯುವಕನೊಬ್ಬನ ಕೈ ಹಿಡಿದು ತುಸು ದೂರ ಹೆಜ್ಜೆ ಹಾಕಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಸೋತು ಸುಣ್ಣವಾಗಿರುವ ಪಕ್ಷಕ್ಕೆ ಈ ಯಾತ್ರೆಯ ಮೂಲಕ ಹೊಸ ಚೈತನ್ಯ ತುಂಬುವಲ್ಲಿ ಸಫಲರಾದರು. ಹಿಂದಿನ ವೈಭವಕ್ಕೆ ಕಾಂಗ್ರೆಸ್ ಮರಳಲಿದೆ ಎಂಬ ಭರವಸೆ ಬಿತ್ತಿದರು.
ಸಂಜೆ ಪಾದಯಾತ್ರೆ ಹೊರಟು ನಿಂತ ರಾಹುಲ್​ಗೆ ಮಳೆಯ ಸ್ವಾಗತ ಲಭಿಸಿತು. ಧೋ ಎಂದು ಸುರಿವ ಮಳೆಯನ್ನೂ ಲೆಕ್ಕಿಸಿದೆ ಸಾವಿರಾರು ಕಾರ್ಯಕರ್ತರ ಜತೆ ಹೆಜ್ಜೆ ಹಾಕಿದರು. ವರುಣನ ಅಬ್ಬರ ಜೋರಾದಾಗಾ ಡಿ.ಕೆ.ಶಿವಕುಮಾರ್ ದಾರಿ ಮಧ್ಯೆ ಕಾರು ಏರಿದರು. ಗನ್ನಾಯಕನಹಳ್ಳಿ ಬಳಿ ಕಾರ್ಯಕರ್ತರನ್ನು ಉದ್ದೇಶಿಸಿ ರಾಹುಲ್ 6 ನಿಮಿಷ ಮಾತನಾಡಿದರು. ಯಾತ್ರೆ ಉದ್ದಕ್ಕೂ ನಿರೀಕ್ಷೆಗೂ ಮೀರಿದ ಜನಸಾಗರವಿತ್ತು. ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಪರ ಘೊಷಣೆ ಮೊಳಗಿಸಿ ಜನರು ಪ್ರೀತಿ ತೋರಿದರು. ಸಂಜೆ 7 ಗಂಟೆ ವೇಳೆಗೆ ಹರ್ತಿಕೋಟೆ ತಲುಪಿ ಸ್ಥಳೀಯ ವೀರಭದ್ರೇಶ್ವರ ಜಾನುವಾರುಗಳ ಜಾತ್ರಾ ಮೈದಾನದಲ್ಲಿ ವಾಸ್ತವ್ಯ ಹೂಡಿದರು. ಇದುವರೆಗೆ ಸಾಗಿ ಬಂದ ಯಾತ್ರೆ ಕುರಿತು ಹಿರಿಯ ಕಾಂಗ್ರೆಸ್ ನಾಯಕರ ಜತೆ ಅವಲೋಕಿಸಿ ಊಟದ ಬಳಿಕ ನಿದ್ರೆಗೆ ಜಾರಿದರು.
ಸತತ ಮೂರು ದಿನ ಕಲ್ಪತರು ನಾಡು ತುಮಕೂರಿನಲ್ಲಿ ಮುನ್ನಡೆದ ‘ಭಾರತ್ ಜೋಡೋ ಯಾತ್ರೆ’ ಸೋಮವಾರ ಕೋಟೆ ನಾಡು ಚಿತ್ರದುರ್ಗಕ್ಕೆ ತೆರಳಿತು. ಬೆಳಗ್ಗೆ 6.30ಕ್ಕೆ ಸರಿಯಾಗಿ ಪೋಚಕಟ್ಟೆಯಿಂದ ಯಾತ್ರೆ ಆರಂಭವಾಯಿತು. ಹುಳಿಯಾರು ಕೆರೆಯ ಹಿಂಭಾಗದಲ್ಲಿ ನಡೆಯುವಾಗ ಭದ್ರತೆಯ ಕೋಟೆಯನ್ನು ದಾಟಿ ಕೆರೆ ಏರಿ ಮೇಲೆ ಜನರೊಂದಿಗೆ ಸೇರಿದ್ದು ನೆರೆದಿದ್ದವರಿಗೆ ರೋಮಾಂಚನ ಮೂಡಿಸಿತು. 13 ಕಿ.ಮೀ. ಕ್ರಮಿಸಿದ ನಂತರ ಜಿಲ್ಲೆಯ ಗಡಿಗ್ರಾಮ ಬಸವನಗುಡಿಯಲ್ಲಿ ಬೆಳಗ್ಗೆಯ ಪಾದಯಾತ್ರೆಗೆ ವಿಶ್ರಾಂತಿ ನೀಡಿ ಅಲ್ಲಿಂದ ಮುಂದಕ್ಕೆ ಕಾರಿನಲ್ಲಿ ರಾಹುಲ್​ಗಾಂಧಿ ಪ್ರಯಾಣ ಬೆಳೆಸಿದರು. ಹಿರಿಯೂರಿಗೆ ತೆರಳುವ ಮಾರ್ಗಮಧ್ಯೆ ಅರಣ್ಯ ಪ್ರದೇಶ ಇರುವುದರಿಂದ ರಾಗಾ ಕಾರಿನಲ್ಲಿ ಹಿರಿಯೂರಿಗೆ ತೆರಳಿದರು.
ನಾಗಮೋಹನ್ ದಾಸ್ ಸಮಿತಿ ನೇಮಕ ಮಾಡಿದ್ದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಚುನಾವಣೆ ಹೊತ್ತಲ್ಲಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲು ನೀಡಿ ಅದರ ಲಾಭ ಪಡೆಯಲು ರಾಜ್ಯ ಸರ್ಕಾರ ಹವಣಿಸುತ್ತಿದೆ.
ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + one =
Remember me
