ಚಿಕ್ಕೋಡಿ:ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ಅನ್ಯಾಯದ ಪ್ರಾಯಶ್ಚಿತ್ತದ ಯಾತ್ರೆ ಎಂದು ಕುಡಚಿ ಶಾಸಕ ಪಿ. ರಾಜೀವ್ ಅಣಕಿಸಿದರು.
ಭಾರತದ ಸಂಸ್ಕೃತಿಯ ಬಗ್ಗೆ ರಾಹುಲ್ ಗಾಂಧಿಯವರಿಗೆ ಏನೂ ತಿಳಿದಿಲ್ಲ. ಹಿಂದಿ ಭಾಷೆಯೂ ಸರಿಯಾಗಿ ಅರ್ಥವಾಗುವುದಿಲ್ಲ. ಭಾರತಕ್ಕೆ ಕಾಂಗ್ರೇಸ್ ಮಾಡಿದ ಅನ್ಯಾಯದ ಪ್ರಾಯಶ್ಚಿತ್ತಕ್ಕಾಗಿ ರಾಹುಲ್ ಗಾಂಧಿ ನಡೆದುಕೊಂಡು ಹೋಗುತ್ತಿದ್ದಾರೆ ಎಂದು ಟೀಕಿಸಿದರು.
ಪ್ರಧಾನ ಮಂತ್ರಿ ಸ್ಥಾನ ಉಳಿಸಿಕೊಳ್ಳಬೇಕು ಎಂದು ಪಾಕಿಸ್ತಾನ ಹುಟ್ಟು ಹಾಕಿದ್ದು ನೆಹರು. ಚೈನಾದ ಜತಗಿನ ಯುದ್ಧದಲ್ಲಿ 40 ಸಾವಿರ ಚದರ ಮೀಟರ್ ಕಳೆದುಕೊಳ್ಳಲು ನೆಹರು ಕಾರಣ. 1947ರಲ್ಲಿ ಕಾಶ್ಮೀರ ಅಧಿಕೃತವಾಗಿ ಭಾರತದ ಭಾಗವಾಗುತ್ತಿತ್ತು. ಆದರೆ ಸಂವಿಧಾನ ಜಮ್ಮು ಕಾಶ್ಮೀರವನ್ನು ಹೊರತುಪಡಿಸಿ ಭಾರತಕ್ಕೆ ಅನ್ವಯವಾಗುತ್ತದೆ ಎಂಬ ಸಾಲು ಸೇರಲಿಕ್ಕೆ ಕಾರಣ ಯಾರು? ಪಾಕ್ ಆಕ್ರಮಿತ ಕಾಶ್ಮೀರ ಸಮಸ್ಯೆಗೆ ಲಕ್ಷಾಂತರ ಜನ ಬಲಿಯಾಗಲು ಕಾರಣ ಯಾರು? ಎಂದು ಪ್ರಶ್ನಿಸಿದರು.
ಒಬ್ಬ ಫಾದರ್ ಜತೆಗೆ ರಾಹುಲ್ ಗಾಂಧಿಗೆ ಆಧ್ಯಾತ್ಮ ಸಂವಾದ ಮಾಡುತ್ತಾರೆ. ನಾನು ಚಪ್ಪಲಿ ಇಲ್ಲದೆ ಭಾರತವನ್ನ ಕಾಲಿಟ್ಟು ಮೆಟ್ಟಲಾರೆ, ಭಾರತ ಅಷ್ಟು ಅಪವಿತ್ರವಾಗಿದೆ ಎಂದವರ ಜತೆಗೆ ಸಂವಾದ ಮಾಡ್ತಾರೆ. ಭಾರತ್ ತೇರೆ ತುಕಡೇ ತುಕಡೇ ಇನ್ಷಾ ಅಲ್ಲಾ ಇನ್ಷಾ ಅಲ್ಲ ಅಂತ ಹೇಳಿದವರನ್ನು ಕರಕೊಂಡು ಜವಾಬ್ದಾರಿ ಹೊತ್ತಿದ್ದಿರಿ. ಯಾವ ದೃಷ್ಟಿಯಲ್ಲಿ ನೀವು ಭಾರತ ಜೋಡೊ ಮಾಡ್ತಿರಿ? ಎಂದು ಪ್ರಶ್ನಿಸಿದರು.ಪಾಕ್ತಿಸ್ಥಾನಕ್ಕೆ ಜಿಂದಾಬಾದ್ ಹೇಳುವ ಮಹಿಳೆ ರಾಹುಲ್ ಗಾಂಧಿಗೆ ಅದರ್ಶವಾಗಿ ಕಾಣ್ತಾಳೆ. ಅಂತಹ ಮಹಿಳೆ ಜತೆಗೆ ರಾಜಕೀಯ ಚಟುವಟಿಕೆ ಮಾಡುತ್ತಾರೆ. ನನ್ನ ಅಜ್ಜ, ಅಜ್ಜಿ, ಅಪ್ಪ ಮಾಡಿದ ಕೆಲಸವನ್ನೇ ನಾನು ಮುಂದುವರೆಸುತ್ತಿದ್ದೇನೆ ಎಂದು ಹೇಳಬೇಕಿದೆ ಎಂದು ರಾಹುಲ್ ವಿರುದ್ಧ ಬಿಜೆಪಿ ವಕ್ತಾರ ಪಿ.ರಾಜೀವ್ ಹರಿಹಾಯ್ದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 1 =
Remember me
