ಬೆಂಗಳೂರು: ರಿಪಬ್ಲಿಕ್ ಆಫ್ ಭಾರತ್ ಮರುನಾಮಕರಣ ವಿಷಯ ರಾಜಕೀಯ ಚಾವಡಿಯಲ್ಲಿ ಬಹು ಚರ್ಚಿತ ವಿಷಯ. ಹಲವು ನಾಯಕರು ತಮ್ಮ ಮೂಗಿನ ನೇರಕ್ಕೆ ಅಭಿಪ್ರಾಯ ನೀಡುತ್ತಿದ್ದಾರೆ. ಬುಧವಾರ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ಬಿಜೆಪಿಯವರಿಂದ ಅನಾವಶ್ಯಕ ಚರ್ಚೆಗಳು ನಡೆಯುತ್ತಿವೆ. ಭಾರತವನ್ನು ಉರ್ದುವಿನಲ್ಲಿ ಹಿಂದೂಸ್ಥಾನ ಎಂದು ಕರೆಯುತ್ತಾರೆ. ಇಂಗ್ಲಿಷ್‌ನಲ್ಲಿ ಇಂಡಿಯಾ ಅನ್ನುತ್ತೇವೆ. ಹಿಂದಿಯಲ್ಲಿ ಭಾರತ್ ಎಂದೂ ಕರೆಯುತ್ತೇವೆ. ಆದರೂ ಬಿಜೆಪಿಯವರು ಚರ್ಚೆಗಳಲ್ಲಿ ತಲ್ಲೀನ ಆಗಿರಬೇಕು ಎಂದು ಹೀಗೆ ಮಾಡುತ್ತಿದ್ದಾರೆ ಎಂದರು.ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಮಾಡಿದ್ದೇವೆ ಇದರ ವಿರುದ್ಧ ದ್ವೇಷ ಸಾಧಿಸಲು ಹೊರಟಿದ್ದಾರೆ ಎಂದ ಅವರು ಕ್ಷುಲ್ಲಕವಾಗಿ ನಡೆದುಕೊಳ್ಳುವುದು ಸರಿಯಲ್ಲ. ದೇಶದಲ್ಲಿ ನೂರೆಂಟು ಸಮಸ್ಯೆಗಳಿವೆ. ಅನೇಕ ರಾಜ್ಯಗಳಲ್ಲಿ ಬರಗಾಲ ಇದೆ. ಬೆಲೆ ಏರಿಕೆ, ನಿರುದ್ಯೋಗ ಇದೆ. ಇದು ಬೇಜವಾಬ್ದಾರಿ, ನಿರರ್ಥಕ ವಿಚಾರ. ಭಾರತ್, ಇಂಡಿಯಾ ಎಲ್ಲಾ ಒಂದೇ ಅಂತಾ ಸಂವಿಧಾನದಲ್ಲೇ ಹೇಳಿದ್ದಾರೆ ಎಂದರು.ಬಿಜೆಪಿಯವರು ಇಂಡಿಯಾ ವರ್ಸಸ್ ಭಾರತ್ ಎಂದು ಮಾಡುತ್ತಿದ್ದಾರೆ. ಈ ಮೂಲಕ ದೇಶ ವಿಭಜಿಸುವುದೇ ಇವರ ಕೆಲಸವಾಗಿದೆ. ದ್ವೇಷ ಬೆಳೆಸುವುದು, ಸುಳ್ಳು ಸುದ್ದಿಗಳನ್ನ ಪ್ರಚಾರ ಮಾಡುವುದೇ ಕೆಲಸವಾಗಿದೆ. ಕರ್ನಾಟಕ ವಿಧಾನಸಭೆಯ ಫಲಿತಾಂಶ ನೋಡಿದ್ದಾರೆ, ದೇಶದ ವಿಪಕ್ಷಗಳೆಲ್ಲಾ ಒಂದಾಗಿ ನಿಂತರೆ ಎನ್‌ಡಿಎಗೆ ಸೋಲು ಖಚಿತ. ಅದಕ್ಕೆ ಭಯ ಬಂದಿದೆ ಎಂದು ಹೇಳಿದರು.ಮಾಧ್ಯಮ, ಇಡಿ, ಐಟಿ, ಎಲೆಕ್ಷನ್ ಕಮಿಷನ್ ಎಲ್ಲಾ ಬಿಜೆಪಿ ಕೈಯಲ್ಲೇ ಇದೆ. ಎಲ್ಲವೂ ಏಕಚಕ್ರಾಧಿಪತ್ಯ ಆಗಿಬಿಟ್ಟಿದೆ. ಏನು ಬೇಕಾದರೂ ಮಾಡುತ್ತೇವೆ ಅನ್ನುತ್ತಾರೆ. ಎಷ್ಟು ಹಿಂಸಾಚಾರ ನಡೆದರೂ ಪರವಾಗಿಲ್ಲ ಅನ್ನುತ್ತಾರೆ. ಚುನಾವಣೆಯಲ್ಲಿ ಸೋಲುವ ಭಯಬಂದಿದ್ದು, ಹೀಗಾಗಿವ್ಯರ್ಥ ಚರ್ಚೆ ಮಾಡುತ್ತಿದ್ದಾರೆ ಎಂದರು.ಉದಯ್ ನಿಧಿ ಸ್ಟಾಲಿನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅಸ್ಪೃಶ್ಯತೆ ವಿರುದ್ಧ ಹೋರಾಡಿದವರೆಲ್ಲಾ ಸನಾತನ ಧರ್ಮದ ವಿರೋಧಿಗಳೇ. ಜಾತಿ ವ್ಯವಸ್ಥೆ ಸನಾತನ ಧರ್ಮದಿಂದ ಬಂದಿದ್ದು ಎನ್ನುತ್ತಾರೆ. ಅವರವರ ಅಭಿಪ್ರಾಯಗಳಿಗೆ ಗೌರವ ಕೊಡಬೇಕು.ಹಿಂದೂ ಧರ್ಮದಲ್ಲಿ ಬೇಕಾದಷ್ಟು ವಿಚಾರಗಳಿವೆ. ಬ್ರಹ್ಮ ಧರ್ಮ ಇದೆ, ಆರ್ಯ ಸಮಾಜ ಇದೆ, ಲಿಂಗಾಯತ ಧರ್ಮ ಇದೆ. ಎಲ್ಲರ ಅಭಿಪ್ರಾಯ ಸ್ವೀಕಾರ ಮಾಡಿ ಮುಂದೆ ಹೋಗಬೇಕು. ಅದು ಬಿಟ್ಟು ಭಾವನೆಗಳಿಗೆ ಗೌರವ ಕೊಡದೆ ಮನಸ್ಸು ಒಡೆಯುವ ಕೆಲಸ ಮಾಡಬಾರದು ಎಂದರು.ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ಭಾರತ, ಇಂಡಿಯಾ, ಹಿಂದೂಸ್ತಾನ್ ಎಲ್ಲವೂ ಒಂದೇ. ಇಂಡಿಯಾನೂ ಭಾರತಾನೇ ಭಾರತವೂ ಇಂಡಿಯಾನೇ. ಹೆಸರು ಬದಲಿಸುವುದರಿಂದ ಅವರಿಗೇ ಅಪಮಾನ ಆಗುತ್ತದೆ ಎಂದರು.ಇನ್ನು ಉದಯ್ ನಿಧಿ ಸ್ಟಾಲಿನ್ ಹೇಳಿಕೆಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ಲ. ನಮ್ಮ ಪಕ್ಷ ಧರ್ಮಗಳನ್ನ ಗೌರವಿಸುತ್ತದೆ. ಹಿಂದೂ, ಬೌದ್ಧ , ಜೈನ್, ಇಸ್ಲಾಂ ಧರ್ಮ ಗೌರವಿಸುತ್ತದೆ ಎಂದು ಸ್ಪಷ್ಟಪಡಿಸಿದರು
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × five =
Remember me
