ಬೆಂಗಳೂರು:ಶುಭಾಶಯ ಕೋರುವ ಧಾವಂತದಲ್ಲಿ ಎಡಿಜಿಪಿ ಭಾಸ್ಕರ್ ರಾವ್ ಅವರು ಯಡವಟ್ಟು ಮಾಡಿಕೊಂಡಿದ್ದಾರೆ. ವಿಶ್ವ ಕುಸ್ತಿ ಚಾಂಪಿಯನ್​​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಪ್ರಿಯಾ ಮಲಿಕ್ ಒಲಿಂಪಿಕ್ಸ್​ನಲ್ಲೇ ಚಿನ್ನ ಗೆದ್ದಿದ್ದಾರೆಂದು ಶುಭಾಶಯ ತಿಳಿಸಿದ್ದಾರೆ.
ಸದ್ಯ ಒಲಿಪಿಂಕ್ಸ್​ ಕಡೆ ಎಲ್ಲರ ಗಮನವಿದೆ. ಅದರಲ್ಲೂ ಭಾನುವಾರದಂದು ಮಣಿಪುರ ಮೀರಾಬಾಯಿ ವೇಟ್​ ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೇಲಂತೂ ಒಲಿಂಪಿಕ್ಸ್ ಕ್ರೇಜ್ ಇನ್ನೂ ಹೆಚ್ಚಾಗಿದೆ ಎಂದೇ ಹೇಳಬಹುದು. ಇದೇ ಸಮಯದಲ್ಲಿ ವಿಶ್ವ ಕುಸ್ತಿ ಚಾಂಪಿಯನ್​ಶಿಪ್ ಕೂಡ ನಡೆದಿದ್ದು, ಅದರಲ್ಲಿ ಭಾರತದ ಪ್ರಿಯಾ ಮಲಿಕ್ ಜಯಭೇರಿ ಬಾರಿಸಿದ್ದಾರೆ.
ಸೋಮವಾರದಂದು ಪ್ರಿಯಾ ಮಲಿಕ್ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಜಯ ಸಾಧಿಸಿದ ನಂತರ ಅನೇಕರು ಅವರಿಗೆ ವಿಶ್ ಮಾಡಿದ್ದಾರೆ. ಆಕೆ ಒಲಿಂಪಿಕ್ಸ್​ನಲ್ಲೇ ಗೆದ್ದಿದ್ದಾರೆಂದು ತಪ್ಪು ತಿಳಿದು ಶುಭಾಶಯ ತಿಳಿಸಿದವರೂ ಇದ್ದಾರೆ. ಅದೇ ರೀತಿ ಎಡಿಜಿಪಿ ಭಾಸ್ಕರ್ ರಾವ್​ ಕೂಡ ತಪ್ಪು ತಿಳಿದು ಟ್ವೀಟ್ ಮಾಡಿದ್ದರು. ಪ್ರಿಯಾ ಒಲಿಂಪಿಕ್ಸ್​ನಲ್ಲಿ ಗೆದ್ದಿದ್ದಾರೆ ಎನ್ನುವ ಬರಹವಿದ್ದ ಫೋಟೋವೊಂದನ್ನು ಹಂಚಿಕೊಂಡು ಅವರಿಗೆ ಶುಭಾಶಯ ತಿಳಿಸಿದ್ದರು.

My profuse apologies for posting this picture and caption, I should have verified and I blame none except myself for the indiscretion, however my best wishes to our Olympics Team..🙏🏽🙏🏽🙏🏽
— Bhaskar Rao (@Nimmabhaskar22)July 25, 2021

ಆದರೆ ಅದು ತಪ್ಪು ಎಂದು ತಿಳಿಯುತ್ತಿದ್ದಂತೆ ಭಾಸ್ಕರ್ ರಾವ್ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ. ನಾನು ಟ್ವೀಟ್ ಮಾಡುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಬೇಕಿತ್ತು. ಅದೇನೇ ಇರಲಿ, ಒಲಿಂಪಿಕ್ಸ್​ನಲ್ಲಿರುವ ನಮ್​ ಟೀಂಗೆ ಶುಭವಾಗಲಿ ಎಂದು ಅವರು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.
ಜಪಾನ್​ ಯುವತಿಯ ಭಾರತ ಪ್ರೀತಿ: ಹಿಂದಿಯಲ್ಲೇ ಮಾತನಾಡೋ ಬೆಡಗಿಗೆ ಪಾನಿಪುರಿ ಇಷ್ಟವಂತೆ

#BBK8: ಬಿಗ್​ಬಾಸ್ ಮನೆಯಲ್ಲಿ ಇಂದು ಎಲಿಮಿನೇಟ್ ಆದವರು ಇವರೇ.. ಮನೆ ಮಂದಿಗೆ ಶಾಕ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
