ಕಾರವಾರ: ಒಂದೇ ದಿನ 12 ಕರೊನಾ ಪ್ರಕರಣಗಳು ಖಚಿತವಾಗಿದ್ದರಿಂದ ಭಟ್ಕಳ ತಲ್ಲಣಗೊಂಡಿದೆ.  ಸೋಂಕಿತ ಯುವತಿಯ ಸಂಪರ್ಕಕ್ಕೆ ಬಂದ ಆಕೆಯ ಮನೆಯ 10 ಜನರಲ್ಲಿಯೂ ಕರೊನಾ ಸೋಂಕು ಇರುವುದು ಖಚಿತವಾಗಿದೆ. ಅದಲ್ಲದೆ ಪಕ್ಕದ ಮನೆಯ ಒಬ್ಬ ವ್ಯಕ್ತಿ ಹಾಗೂ ಆಕೆಯ ಆಪ್ತ ಸ್ನೇಹಿತೆಗೂ ಕರೊನಾ ಹಬ್ಬಿದೆ.
ಇದನ್ನೂ ಓದಿ:ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!
ಐದು ತಿಂಗಳ ಮಗು ಸೇರಿ ಮೂವರು ಮಕ್ಕಳು, ಮೂವರು ವೃದ್ಧರು ಹಾಗೂ ಮಹಿಳೆಯರು ಈ 12 ಸೋಂಕಿತರ ಪಟ್ಟಿಯಲ್ಲಿದ್ದಾರೆ. ಎಲ್ಲರಿಗೂ ಕಾರವಾರ ಕ್ರಿಮ್ಸ್ ಆಸ್ಪತ್ರೆಯ ಕರೊನಾ ವಾರ್ಡ್‌ಗೆ ದಾಖಲು ಮಾಡಲಾಗಿದೆ.  ಈ 12 ಜನರ ಸಂಪರ್ಕಕ್ಕೆ ಬಂದ 52 ಜನರ ಗಂಟಲ ದ್ರವದ ಮಾದರಿ ಸಂಗ್ರಹಿಸಿ, ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಒಂದೆರಡು ದಿನದಲ್ಲಿ ವರದಿ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.
ಇದನ್ನೂ ಓದಿ:ಒಂದು ಹಾವು ಕಚ್ಚಿದ್ರೂ ಬಚಾವ್​, ಆದ್ರೆ ಮತ್ತೊಂದು ಬೆಡ್​ರೂಮ್​ಗೇ ನುಗ್ಗಿತ್ತು..
ಮೇ 5ರಂದು ಕರೊನಾ ಸೋಂಕು ಖಚಿತವಾದ ಯುವತಿಯ ಅಕ್ಕ ಹಾಗೂ ಭಾವ ಅವರ 5 ತಿಂಗಳ ಮಗುವಿನೊಂದಿಗೆ ಅಪಸ್ಮಾರ ಚಿಕಿತ್ಸೆಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿಂದ ಸೋಂಕು ಹಬ್ಬಿದ್ದು, ಅವರಲ್ಲಿ ರೋಗ ಲಕ್ಷಣ ಕಾಣಿಸಿರಲಿಲ್ಲ.  ಅವರ ಸಂಪರ್ಕಕ್ಕೆ ಬಂದ ಯುವತಿಯಲ್ಲಿ ಮೊದಲು ರೋಗ ಲಕ್ಷಣ ಕಾಣಿಸಿದ್ದರಿಂದ ಅವರನ್ನು ಪರೀಕ್ಷೆ ಮಾಡಿಸಲಾಯಿತು. ಇದೇ ಅವಧಿಯಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಇನ್ನೆರಡು ಕುಟುಂಬಗಳು ಭಟ್ಕಳದಲ್ಲಿದ್ದು, ಅವರ ಗಂಟಲ ದ್ರವವನ್ನೂ ತೆಗೆದು ಪರೀಕ್ಷೆಗೆ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಸೈಬರ್ ಖದೀಮರಿಂದ ಲೆಕ್ಕ ಪರಿಶೋಧಕನ ಕಂಪ್ಯೂಟರ್ ಹ್ಯಾಕ್: ಐನೂರು ಗ್ರಾಹಕರ ಡೇಟಾ ಕಳವು!
ಭಟ್ಕಳವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗುತ್ತಿದೆ. ಪೊಲೀಸ್ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗಿದೆ. ಭಟ್ಕಳ ಕಂಟೇನ್ಮೆಂಟ್ ವಲಯದಲ್ಲಿ ತೀರ ತೊಂದರೆ ಇರುವ ಪ್ರದೇಶ ನೋಡಿ ಅಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಎಲ್​ಒಸಿಯಲ್ಲಿ ಅಪ್ರಚೋದಿತ ದಾಳಿ ನಡೆಸಿದ ಪಾಕ್​ ಸೇನೆ ಮೇಲೆ ಪ್ರತಿದಾಳಿ: ಕನಿಷ್ಠ ಮೂರು ಪಾಕ್ ಸೈನಿಕರ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
