ಹಾಸನ:ಏ ಸ್ವರೂಪ್… ಬಾರಪ್ಪ ಇಲ್ಲಿ… ಎಂದು ಹತ್ತಿರಕ್ಕೆ ಕರೆದ ಭವಾನಿ ರೇವಣ್ಣ, ನೀನು ನನ್ನ ಮಗನಿದ್ದಂತೆ ಎಂದು ಹೇಳಿದ್ದಾರೆ. ಕೂಡಲೇ ಹತ್ತಿರಕ್ಕೆ ಬಂದ ಸ್ವರೂಪ್ ಭವಾನಿ ರೇವಣ್ಣ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.
ಈ ದೃಶ್ಯ ನಡೆದಿರುವ ಸ್ವರೂಪ್ ನಡುವಿನ ಸಂಧಾನಕ್ಕಾಗಿ ಎಚ್​​.ಡಿ.ರೇವಣ್ಣ ಕುಟುಂಬ ಕರೆದಿದ್ದ ಸಾರ್ವಜನಿಕ ಸಭೆಯಲ್ಲಿ. ಕಾರ್ಯಕ್ರಮದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಆಕಾಂಕ್ಷಿಯಾಗಿದ್ದ ಭವಾನಿ ರೇವಣ್ಣ ಮಾತನಾಡುತ್ತಾ, ಸ್ವರೂಪ್ ನನ್ನ ಮಗ ಇದ್ದಂತೆ. ನಾನು ಅಂದಿನಿಂದ ನನ್ನ ಮಗನಂತೆ ಕಂಡಿರುವುದು ಎಲ್ಲರಿಗೂ ಗೊತ್ತಿದೆ ಎನ್ನುತ್ತಾ ಚುನಾವಣೆಯಲ್ಲಿ ಗೆಲುವು ಸಾಧಿಸುವಂತೆ ಆಶೀರ್ವಾದ ಮಾಡಿದರು.
ಇದನ್ನೂ ಓದಿ:ಸಿಲಿಕಾನ್ ಸಿಟಿಯ ಚುನಾವಣಾ ಕಣದಲ್ಲಿ ಕೋಟ್ಯಧಿಪತಿಗಳು; ಇಲ್ಲಿದೆ ಅಭ್ಯರ್ಥಿಗಳ ಕೋಟಿ ರೂ. ಆಸ್ತಿ ವಿವರ…
ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ಪರ ಭವಾನಿ ರೇವಣ್ಣ ಭರ್ಜರಿಯಾಗಿ ಪ್ರಚಾರ ನಡೆಸಿದ್ದಾರೆ. ನನ್ನ ಮನೆ ಮಗನಂತಿರುವ ಸ್ವರೂಪ್​ನನ್ನು ಗೆಲ್ಲಿಸಿ ಎಂದು ಹಾಸನ ಜನತೆಯಲ್ಲಿ ಭವಾನಿ ರೇವಣ್ಣ ಕೇಳಿಕೊಂಡಿದ್ದಾರೆ. ಇದೇ ವೇಳೆ ಮಾತನಾಡುತ್ತಾ, ಬಿಜೆಪಿ ಅಭ್ಯರ್ಥಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಸವಾಲು ಹಾಕಿದಾಗ, ಅವರನ್ನು ಸೋಲಿಸಬೇಕು ಎಂದು ನಿರ್ಧರಿಸಿದ್ದು ನಿಜ ಎಂದರು.
ಇಂದು ಜೆಡಿಎಸ್ ಪಕ್ಷಕ್ಕಿಂತ, ಹಿರಿಯರ ಮಾತಿಗಿಂತ ಯಾವುದು ದೊಡ್ಡದಿದೆ. ನನಗೆ ಟಿಕೆಟ್ ಸಿಕ್ಕಿಲ್ಲ ಎಂದು ಹಾಸನ ಜನತೆಯನ್ನು ಎಂದಿಗೂ ಕಡೆ ಗಣಿಸುವುದಿಲ್ಲ. ನೀವು ಯಾವ ಹೊತ್ತಿಗೆ ಕರೆ ಮಾಡಿದರೂ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಭವಾನಿ ರೇವಣ್ಣ ಭರವಸೆ ನೀಡಿದರು.
ಇದನ್ನೂ ಓದಿ:ಕದನ ಕಣದಲ್ಲಿ ತೊಡೆತಟ್ಟಿದ ಕೋಟಿವೀರರು; ಇಲ್ಲಿದೆ ಶತಕೋಟ್ಯಧೀಶ ರಾಜಕಾರಣಿಗಳ ಒಟ್ಟು ಆಸ್ತಿ ವಿವರ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 7 =
Remember me
