ಬೆಂಗಳೂರು:‘ಪ್ರಜ್ವಲ್ ಎಲ್ಲಿದ್ದಿಯಪ್ಪಾ’ ಎಂಬ ಕೂಗುಗಳು ಕಳೆದ ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಕೇಳಿಬಂದಿತ್ತು. ಇನ್ನು ಪ್ರಜ್ವಲ್​ ರೇವಣ್ಣ ಯಾವಾಗ ತಮ್ಮ ಮೇಲಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡುತ್ತಾರೆ? ವಿದೇಶಕ್ಕೆ ಹೋದವರು, ಇಂದಿಗೂ ಪತ್ತೆಯಾಗಿಲ್ಲ ಏನು ಕತೆ? ಎಂಬ ಹೇಳಿಕೆಗಳ ಬೆನ್ನಲ್ಲೇ ನಿನ್ನೆ(ಮೇ.27) ಕಡೆಗೂ ವಿಡಿಯೋ ಸಂದೇಶದ ಮೂಲಕ ಪ್ರತ್ಯಕ್ಷವಾದ ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ, ಇದೇ ಮೇ.31ಕ್ಕೆ ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದೇನೆ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಕೆಲಸ ಅರಸಿ ಬರುವಂತೆ ಕಲೆ ಪ್ರದರ್ಶಿಸಿ   ಭಿತ್ತಿಚಿತ್ರ ಶಿಬಿರದಲ್ಲಿ   ದಾವಿವಿ ಕುಲಪತಿ ಕುಂಬಾರ ಹೇಳಿಕೆ
ವಿದೇಶದಲ್ಲಿಯೇ ಕುಳಿತು ವಿಡಿಯೋ ಮಾಡಿರುವ ಹಾಲಿ ಸಂಸದ, ನನ್ನ ತಾಯಿ, ಜನರು ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆ ಕೇಳುತ್ತೇನೆ. ಮೇ. 31ರಂದು ಭಾರತಕ್ಕೆ ಬರುತ್ತೇನೆ, ಎಸ್​ಐಟಿ ಮುಂದೆ ಹಾಜರಾಗಿ, ತನಿಖೆಯನ್ನು ಎದುರಿಸುತ್ತೇನೆ ಎಂದಿದ್ದಾರೆ. ಇನ್ನು ಪುತ್ರ ಪ್ರಜ್ವಲ್ ರೇವಣ್ಣ ದಿಢೀರ್ ಪ್ರತ್ಯಕ್ಷವಾದ ಬೆನ್ನಲ್ಲೇ ಇದೀಗ ಭವಾನಿ ರೇವಣ್ಣ ಮಧ್ಯಂತರ ಜಾಮೀನು ಕೋರಿ ರಾಜ್ಯ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.
ಇನ್ನು ಈ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವುದು ತಮ್ಮ ಪುತ್ರ ಪ್ರಜ್ವಲ್ ಪರವಲ್ಲ ಎಂಬುದು ಇಲ್ಲಿ ಗಮನಾರ್ಹ. ತಮ್ಮ ಪರವೇ ಬ್ಯಾಟ್​ ಬೀಸಿಕೊಂಡಿರುವ ಭವಾನಿ ರೇವಣ್ಣಗೆ, ಕೆ.ಆರ್. ಪೇಟೆ ಮಹಿಳೆಯೊಬ್ಬರ ಅಪಹರಣ ಪ್ರಕರಣವನ್ನೂ ತನಿಖೆ ಮಾಡಿದ ಎಸ್ ಐಟಿಯು ಜಾರಿಗೊಳಿಸಿದ ನೋಟಿಸ್ ಹಿನ್ನಲೆ ಬಂಧನದ ಭೀತಿ ಎದುರಾಗಿದೆ. ಈ ಕುರಿತಂತೆ ಭವಾನಿ ರೇವಣ್ಣ ಹೈಕೋರ್ಟ್​ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಅರ್ಜೆಂಟೀನಾ ಸ್ಟೈಲ್​ನಲ್ಲಿ ಕೆಕೆಆರ್​ ಪ್ರಶಸ್ತಿ ಸಂಭ್ರಮ; ಲಿಯೋನೆಲ್​ ಮೆಸ್ಸಿಯನ್ನು ಅನುಕರಿಸಿದ ಶ್ರೇಯಸ್​ ಅಯ್ಯರ್​!
ಹಾಸನ ಪೆನ್​ಡ್ರೈವ್ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಎಸ್ಐಟಿ ತಂಡ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಮತ್ತೊಂದು ಪ್ರಕರಣವಾದ ಕೆ.ಆರ್. ಪೇಟೆ ಮಹಿಳೆಯೊಬ್ಬರ ಅಪಹರಣ ಕೇಸ್​ನ ತನಿಖೆ ಕೂಡ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಭವಾನಿ ರೇವಣ್ಣಗೆ ಎಸ್ಐಟಿಯು ನೋಟಿಸ್ ಜಾರಿಗೊಳಿಸಿತ್ತು. ಬಂಧನದ ಭೀತಿ ಎದುರಾಗುತ್ತಿದ್ದಂತೆ ಇದೀಗ ಭವಾನಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ,(ಏಜೆನ್ಸೀಸ್).
ನೀವೆಂದಿಗೂ ಈ ತಪ್ಪು ಮಾಡೋದಿಲ್ಲ ಅಂದುಕೊಂಡಿದ್ದೀನಿ; ‘ಕ್ಯಾಪ್ಟನ್ ಕೂಲ್’​ಗೆ ಬಹುಮುಖ್ಯ​ ಸಲಹೆ ಕೊಟ್ಟ ಸುನಿಲ್ ಗವಾಸ್ಕರ್!

ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
