ವಿಜಯಪುರ:ಯಮಪಾಶ ಯಾವ ರೂಪದಲ್ಲಿ ಬರುತ್ತೋ ಆ ದೇವರೇ ಬಲ್ಲ. ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆಂದು ಹೋಗಿದ್ದ ತಂದೆ-ಮಗ ಇಬ್ಬರು ಊರಿಗೆ ವಾಪಸ್​ ಆಗುತ್ತಿದ್ದರು. ಮಾರ್ಗಮಧ್ಯೆ ನೀರಿನ ರೂಪದಲ್ಲಿ ಕಾಯುತ್ತಿದ್ದ ಜವರಾಯ ತಂದೆಯ ಕಣ್ಣೆದುರಲ್ಲೇ ಮಗನನ್ನು ಬಾರದ ಲೋಕಕ್ಕೆ ಕರೆದೊಯ್ದ ಹೃದಯವಿದ್ರಾವಕ ಘಟನೆ ಚಡಚಣ ತಾಲೂಕಿನಲ್ಲಿ ಸಂಭವಿಸಿದೆ.
ಹತ್ತಳ್ಳಿ ಗ್ರಾಮದ ರಮೇಶ ಬಸರಗಿ(25) ಮೃತ ದುರ್ದೈವಿ. ಸೆ.9ರಂದು ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆಂದು ಸೊಲ್ಲಾಪುರಕ್ಕೆ ರಮೇಶ ಬಸರಗಿ ಮತ್ತು ಅವರ ತಂದೆ ದುಂಡಪ್ಪ ಇಬ್ಬರೂ ಬೈಕ್​ನಲ್ಲಿ ಹೋಗಿದ್ದರು. ಮೃತರ ಅಂತಿಮ ದರ್ಶನ ಪಡೆದು ಸ್ವಗ್ರಾಮಕ್ಕೆ ವಾಪಸ್​ ಆಗುತ್ತಿದ್ದರು. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಿದ್ದು, ಭೀಮಾನದಿ ಉಕ್ಕಿ ಹರಿಯುತ್ತಿದೆ. ಭೀಮಾನದಿಗೆ ಅಡ್ಡಲಾಗಿರುವ ಉಮರಾಣಿ ಬ್ರಿಜ್ ಕಂ ಬ್ಯಾರೇಜ್(ಬಾಂದಾರ್) ಮೇಲೂ ನೀರು ಹರಿಯುತ್ತಿತ್ತು. ಬಾಂದಾರ್ ಬಳಿ ಬಂದಾಗ ಬೈಕ್​ನಿಂದ ಇಳಿದ ತಂದೆ ದುಂಡಪ್ಪ, ನಡೆದುಕೊಂಡೇ ಸಾಗುತ್ತಿದ್ದರು. ಈ ವೇಳೆ ಮಗ ರಮೇಶ ಬೈಕ್ ದಾಟಿಸುವಾಗ ನೋಡನೋಡುತ್ತಿದ್ದಂತೆಯೇ ಬೈಕ್​ ಸಮೇತ ಕೊಚ್ಚಿಹೋದ.
ಇದನ್ನೂ ಓದಿರಿ‘ನಂಗೆ ಸಂಜನಾನೂ ಗೊತ್ತಿಲ್ಲ, ರಾಗಿಣಿನೂ ಗೊತ್ತಿಲ್ಲ… ಗೊತ್ತಿರೋದು ನನ್ನ ಹೆಂಡ್ತಿ ಮಾತ್ರ’
ನಿರಲ್ಲಿ ಕೊಚ್ಚಿಹೋದ ಮಗನಿಗಾಗಿ ಎರಡು ದಿನ ಹುಡುಕಾಡಿದ ತಂದೆ ಬಳಿಕ ಚಡಚಣ ಠಾಣೆಗೆ ದೂರು ನೀಡಿದ್ದಾರೆ. ಬೈಕ್ ಸಮೇತ ಭಿಮಾನದಿಯಲ್ಲಿ ರಮೇಶ ಕೊಚ್ಚಿಹೋಗುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆಂದು ಹೋದ ಮಗ ವಾಪಸ್​ ಮನೆಗೆ ಬರುವ ದಾರಿಯಲ್ಲೇ ನದಿಪಾಲಾದ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…

ಹಳ್ಳಿಯಲ್ಲಿ ಒಂಟಿಮನೆ ಬಾಡಿಗೆ ಪಡೆದ ಯುವಕ ರಾತ್ರಿಯಾಗುತ್ತಿದ್ದಂತೆ ತನ್ನ ವರಸೆ ಬದಲಿಸುತ್ತಿದ್ದ!

ವಿಜ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
