ನವದೆಹಲಿ:ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಒಳಗಾಗಿದ್ದೇನೆ ಎಂದು ಭೋಜ್​ಪುರಿ ನಟಿಯೊಬ್ಬಳು ದೂರು ದಾಖಲಿಸಿದ್ದಾರೆ.
ಸಂದರ್ಶನದ ಹೆರಿನಲ್ಲಿ ಗುರುಗ್ರಾಮದ ಹೋಟೆಲ್​ ಒಂದಕ್ಕೆ ಕರೆಯಿಸಿಕೊಂಡು ಈ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆ ನಟಿ ಉಲ್ಲೇಖಿಸಿದ್ದಾರೆ. ನಟಿಯು ದೆಹಲಿ ನಿವಾಸಿಯಾಗಿದ್ದು, ಇನ್​ಸ್ಟಾಗ್ರಾಂನಲ್ಲಿ ಅತ್ಯಧಿಕ ಫಾಲೋವರ್ಸ್​ ಹೊಂದಿದ್ದಾರೆ.
ಪೊಲೀಸರ ಪ್ರಕಾರ ಸಂತ್ರಸ್ತೆಗೆ ಇನ್​ಸ್ಟಾಗ್ರಾಂ ಮೂಲಕ ಆರೋಪಿ ಮಹೇಶ್​ ಪಾಂಡೆ ಎಂಬಾತನ ಪರಿಚಯವಾಗಿತ್ತು. ಭೋಜ್​ಪುರಿ ಸಿನಿಮಾದಲ್ಲಿ ಅವಕಾಶವಿದೆ ಎಂದು ಆಫರ್​ ನೀಡಿದ್ದ. ಆದರೆ, ಕೆಲವು ಪ್ರಕ್ರಿಯೆಗಳಿವೆ ಎಂದು ಜೂನ್​ 29ರಂದು ಸಂದರ್ಶನ ಇದೆ ಎಂದು ಗುರುಗ್ರಾಮದ ಹೋಟೆಲ್​ ಒಂದಕ್ಕೆ ಕರೆಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಕೂಗಾಡಿದ್ದಕ್ಕೆ ಅರೆಸ್ಟ್!; ಸೋಶಿಯಲ್​​ ಮೀಡಿಯಾ ಸ್ಟಾರ್​ಗೆ​​ 2 ತಿಂಗಳು ಜೈಲು
ಈ ಬಗ್ಗೆ ಹೇಳಿಕೆ ನೀಡಿರುವ ಸಂತ್ರಸ್ತೆ, ನಾನು ಹೋಟೆಲ್​ಗೆ ತಲುಪಿದೆ. ಅದಕ್ಕೂ ಮುನ್ನ ಮಹೇಶ್​, ಸುಭಾಶ್​ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ನೀಡಿದ ರೂಮ್​ ಬುಕ್​ ಮಾಡಿದ್ದ. ಕೊಠಡಿಗೆ ತೆರಳಿದಾಗ ಕೆಲವೊಂದಿಷ್ಟು ಪ್ರಶ್ನೆಗಳು ಕೇಳುತ್ತಾ ಮದ್ಯ ಸೇವನೆ ಮಾಡಲು ಆರಂಭಿಸಿದ. ನಾನು ಹೊರಡುತ್ತೇನೆ ಎಂದು ಹೇಳಿದಾಗ ನನ್ನನ್ನು ಹೋಗಲು ಬಿಡದೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪ ಮಾಡಿದ್ದಾರೆ.
ಅತ್ಯಾಚಾರದ ಬಗ್ಗೆ ಎಲ್ಲಾದರೂ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಎಂದು ಸಂತ್ರಸ್ತೆ ದೂರಿದ್ದಾಳೆ. ಆರೋಪಿ ಮಹೇಶ್​, ಗುರುಗ್ರಾಮದ ಛಕ್ಕಪುರ್​ ಏರಿಯಾದ ನಿವಾಸಿ. ಆತನ ವಿರುದ್ಧ ಉದ್ಯೋಗ ವಿಹಾರ ಪೊಲೀಸ್​ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಕೆ: ಧ್ರುವನಾರಾಯಣ ಹೆಸರು ಸೇರಿಸಲು ಸ್ಪೀಕರ್​ಗೆ ಪ್ರತಾಪ್​ ಸಿಂಹ ಮನವಿ

ಮಿಸ್ಟರ್ ಮೋದಿಯವರೇ ಈ ರೀತಿ ಮಾಡಿದ್ರೆ ಬಡವರು ಏನು ಮಾಡ್ಬೇಕು? ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
