ಹಳೇಬೀಡು: ವಿಪ್ರರ ಸಮಸ್ಯೆ ಆಲಿಸಲು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ತಂತ್ರಜ್ಞಾನದ ಮೊರೆ ಹೋಗಿದ್ದು ಸಲಹೆ ಸೂಚನೆಗಳನ್ನು ನೀಡಲು ಗೂಗಲ್ ಡಾಕ್ಸ್ ನಲ್ಲಿ ಸಿದ್ಧಪಡಿಸಿರುವ ನಮೂನೆಯನ್ನು ಬಿಡುಗಡೆ ಮಾಡಿದೆ.
ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಗೂಗಲ್ ಡಾಕ್ಸ್ ನಲ್ಲಿ ವಿವರಣೆ ನೀಡಿದ್ದು, ರಾಜ್ಯಾದ್ಯಂತ ಇರುವ ಎಲ್ಲ ಪಂಗಡ ಮತ್ತು ಉಪಪಂಗಡದ ಬ್ರಾಹ್ಮಣರು ಬೋರ್ಡ್‍ನ ಕಾರ್ಯಗಳು ಹೇಗಿರಬೇಕು ಮತ್ತು ಯಾವ ರೀತಿಯ ಸೌಲಭ್ಯಗಳನ್ನು ಬಯಸುತ್ತೀರಿ ಎಂಬ ಬಗ್ಗೆ ಸಲಹೆ ನೀಡುವ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಅದಕ್ಕಾಗಿ ನಮೂನೆಯೊಂದನ್ನು ಬಿಡುಗಡೆ ಮಾಡಿದ್ದು ಗೂಗಲ್ ಡಾಕ್ಸ್ ನಲ್ಲಿ https://docs.google.com/forms ಎಂಬ ಯುಆರ್​ಎಲ್​ ಲಿಂಕ್ ಮೂಲಕ ಫಾರಂ ತೆರೆಯಬಹುದಾಗಿದೆ.
ನಮೂನೆಯಲ್ಲಿ ಹೆಸರು, ವಿಳಾಸ , ದೂರವಾಣಿ ಸಂಖ್ಯೆ ದಾಖಲಿಸಿದ ಬಳಿಕ ಸಲಹೆ ನೀಡುವ ಬಗ್ಗೆ ಸಿದ್ಧಪಡಿಸಿರುವ ವಿಷಯಗಳನ್ನು ಪಟ್ಟಿ ಮಾಡಲಾಗಿದ್ದು, ಸಂಬಂಧಿಸಿದ ಚೆಕ್‍ಬಾಕ್ಸ್ ಅನ್ನು ಸೆಲೆಕ್ಟ್ ಮಾಡಿ ಕೊನೆಯಲ್ಲಿ ಸಬ್‍ಮಿಟ್ ಗುಂಡಿ ಒತ್ತಿದರೆ ನಿಮ್ಮ ಸಲಹೆ ಗೂಗಲ್ ಕಡತದ ಮಾದರಿಯಲ್ಲಿ ಅಪ್‍ಲೋಡ್ ಆಗುತ್ತದೆ.
ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಅನುದಾನ, ವೇದ ಪಾಠಶಾಲೆಗಳ ಪುನರುಜ್ಜೀವನ, ಸಮುದಾಯ ಭವನ ನಿರ್ಮಾಣ, ಪೌರೋಹಿತ್ಯ ನಡೆಸುವವರಿಗೆ ಭದ್ರತಾ ವಿಮೆ ಅಥವಾ ಗೌರವಧನ ನೀಡುವಿಕೆ, ಬ್ರಾಹ್ಮಣ ಕೇರಿಗಳ ಅಭಿವೃದ್ಧಿ, ಮೀಸಲಾತಿ ಪಡೆದುಕೊಳ್ಳುವ ವಿಷಯದಲ್ಲಿ ತರಬೇತಿ ಮತ್ತು ಮಾಹಿತಿ ನೀಡುವಿಕೆ , ಉದ್ಯೋಗ ಅವಕಾಶ ಸೃಷ್ಟಿ ಮುಂತಾದ ಉಪಯುಕ್ತ ಆಯ್ಕೆಗಳನ್ನು ನೀಡಲಾಗಿದೆ.
ರಾಜ್ಯಾದ್ಯಂತ ಅಲ್ಲದೆ ಜಗತ್ತಿನ ಯಾವ ಭಾಗದಿಂದ ಆದರೂ ಗೂಗಲ್ ಡಾಕ್ಯುಮೆಂಟ್ ಮೂಲಕ ಬ್ರಾಹ್ಮಣ ಜನಾಂಗದವರು ಸಲಹೆ ನೀಡಬಹುದಾಗಿದೆ. ಅಲ್ಲದೆ, ಸಮಾಜದ ಆಗುಹೋಗುಗಳನ್ನು ತಿಳಿದಿರುವ ಯಾರು ಬೇಕಾದರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು ಎಂದು ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ತಿಳಿಸಿದ್ದಾರೆ.
ಹಳೇಬೀಡು ಮೂಲದ ಸಚ್ಚಿದಾನಂದ ಮೂರ್ತಿಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಅವರ ಮೂಲ ಗ್ರಾಮ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೇಬೀಡು. ದಿ. ಶಾನುಭೋಗ್ ಶಾಮಣ್ಣ ಮತ್ತು ಸುಂದರಮ್ಮ ದಂಪತಿಯ ಪುತ್ರರಾಗಿದ್ದು ಪ್ರಸ್ತುತ 60 ವಸಂತಗಳನ್ನು ಪೂರೈಸಿದ್ದಾರೆ. ಪದವಿ ಶಿಕ್ಷಣದವರೆಗೂ ಜಿಲ್ಲೆಯಲ್ಲಿ ಓದಿ ಬದುಕು ಕಟ್ಟಿಕೊಳ್ಳುವ ಸಲುವಾಗಿ ಬೆಂಗಳೂರು ಸೇರಿದ್ದು ಅವರ ಇತಿಹಾಸ. ರಾಜಕೀಯಕ್ಕೆ ಕಾಲಿಟ್ಟ ದಿನದಿಂದಲೂ ಬಿಜೆಪಿಯೋದಿಗೆ ಗುರುತಿಸಿಕೊಂಡಿದ್ದು ಸಾಮಾನ್ಯ ಕಾರ್ಯಕರ್ತನಿಂದ ಬೆಂಗಳೂರು ನಗರದ ಪಕ್ಷ ಸಂಘಟನೆ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ..
“ಬ್ರಾಹಣ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಬೇಕು ಎನ್ನುವುದು ಯಡಿಯೂರಪ್ಪನವರ ಬಹುದಿನದ ಕನಸಾಗಿತ್ತು. ಸಿಎಂ ಕುರ್ಚಿಯ ಹಗ್ಗಜಗ್ಗಾಟದಲ್ಲಿ ಅವರಿಗೆ ಸಾಧ್ಯವಾಗಿರಲಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಳಿಯನ್ನು ಸ್ಥಾಪಿಸಿದರು, ಬಳಿಕ ಬಿಎಸ್‍ವೈ ಅದಕ್ಕೆ ಜೀವ ತುಂಬಿದ್ದಾರೆ. ಜನಾಂಗದ ಸಮಗ್ರ ಅಭಿವೃದ್ಧಿಗೆ ನಾನು ಮತ್ತು ಮಂಡಳಿಯ ಸದಸ್ಯರು ಶ್ರಮಿಸುತ್ತೇವೆ “
–ಎಚ್.ಎಸ್. ಸಚ್ಚಿದಾನಂದ ಮೂರ್ತಿ.ಅಧ್ಯಕ್ಷ. ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × 2 =
Remember me
