ಬೆಂಗಳೂರು:ಕರ್ನಾಟಕ ನಾಮಕರಣದ 50ನೇ ಸಂಭ್ರಮಾಚರಣೆಯನ್ನು ಸ್ಮರಣೀಯವಾಗಿಸಲು ರಾಜಧಾನಿಯಲ್ಲಿ ತಾಯಿ ಭುವನೇಶ್ವರಿ ಹೆಸರಿನಲ್ಲಿ ಬೃಹತ್ ಕನ್ನಡ ಭವನ ನಿರ್ವಿುಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 68 ಸಾಧಕರು ಹಾಗೂ 10 ಸಂಘ-ಸಂಸ್ಥೆಗಳಿಗೆ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದರು. ರಾಜ್ಯ ಸರ್ಕಾರ ನ.2ರಿಂದ ‘ಕನ್ನಡ ಸಂಭ್ರಮ-50’ ಕಾರ್ಯಕ್ರಮವನ್ನು ಒಂದು ವರ್ಷ ನಿರಂತರವಾಗಿ ಹಮ್ಮಿಕೊಳ್ಳಲಿದೆ. ಹಂಪಿಯ ವಿರೂಪಾಕ್ಷ ದೇವಾಲಯದಿಂದ ಕನ್ನಡ ರಥ ಹೊರಡಲಿದ್ದು, ವಿವಿಧ ಜಿಲ್ಲೆಗಳಲ್ಲಿ ಸಂಚರಿಸಲಿದೆ. ‘ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ’ ಘೋಷವಾಕ್ಯದೊಂದಿಗೆ ಕನ್ನಡ ಸಂಭ್ರಮವನ್ನು ಮನೆ ಮನೆಗೆ ತಲುಪಿಸಲಾಗುವುದು. ಈ ಸ್ಮರಣೆಗಾಗಿ ಕನ್ನಡ ಹಾಗೂ ಕನ್ನಡ ಪರ ಚಟುವಟಿಕೆಗಳಿಗೆ ಇನ್ನಷ್ಟು ವಿಸ್ತಾರವಾದ ಭವನವನ್ನು ನಿರ್ವಿುಸಲು ಮುಂದಿನ ದಿನಗಳಲ್ಲಿ ರೂಪುರೇಶೆ ಸಿದ್ಧಪಡಿಸುವುದಾಗಿ ಸಿಎಂ ಸ್ಪಷ್ಟಪಡಿಸಿದರು.
ಸಮಾಜ ಋಣ ತೀರಿಸಿ:ಪ್ರಶಸ್ತಿ ಪಡೆದ ಗಣ್ಯರು ದೊಡ್ಡ ಸಾಧನೆ ಮಾಡಿದ್ದಾರೆ. ಅವರಂತೆ ಇತರರು ಕೂಡ ಸಾಧನೆ ಮಾಡಿದ್ದು, ಸಮಾಜದ ಋಣ ಹಿರಿದಾದುದು. ನಾವು ಸಮಾಜದ ಋಣ ತೀರಿಸಿದಾಗ ಮಾತ್ರ ಹುಟ್ಟಿದ್ದಕ್ಕೆ ಸಾರ್ಥಕತೆ ಸಿಗುತ್ತದೆ. ಸಮಾಜಸೇವೆ ಕೂಡ ಋಣ ತೀರಿಸುವ ಕೆಲಸವೇ ಆಗಿದ್ದು, ಎಲ್ಲರೂ ತಮ್ಮ ಮೇಲಿನ ಋಣವನ್ನು ತೀರಿಸುವ ಪಣ ತೊಡಬೇಕು ಎಂದು ಸಿದ್ದರಾಮಯ್ಯ ವಿನಂತಿಸಿದರು.
ಸರ್ಕಾರ ಸಂವಿಧಾನದ ಆಶಯಗಳನ್ನು ಈಡೇರಿಸಲು ಪ್ರಥಮ ಆದ್ಯತೆ ನೀಡಿದೆ. ಸಾಮಾಜಿಕ ನ್ಯಾಯ ಒದಗಿಸಲೂ ಕಟಿಬದ್ಧವಾಗಿದೆ. ಶೋಷಿತರು ಸೇರಿ ಎಲ್ಲ ವರ್ಗದ ಮಹಿಳಾ ಸಬಲೀಕರಣ ಮಾಡುವ ಜತೆಗೆ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಅಸಮಾನತೆ ನಿವಾರಿಸಲು ಕಂಕಣ ತೊಟ್ಟಿದ್ದೇವೆ. ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯದ ಶಕ್ತಿ ಯೋಜನೆ ಮೂಲಕ ಈವರೆಗೆ 86 ಕೋಟಿ ಮಂದಿ ಪ್ರಯಾಣಿಸಿದ್ದಾರೆ. ಇದು ಮಹಿಳಾ ವರ್ಗಕ್ಕೆ ಸರ್ಕಾರ ನೀಡಿರುವ ದೊಡ್ಡ ಕೊಡುಗೆ ಎಂದು ಸಿಎಂ ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ. ಜಿ.ಪರಮೇಶ್ವರ, ಬೈರತಿ ಸುರೇಶ್, ಡಾ. ಸುಧಾಕರ್, ಮೇಲ್ಮನೆ ಸದಸ್ಯರಾದ ಕೆ.ಗೋವಿಂದರಾಜು, ನಜೀರ್ ಅಹಮದ್, ಮಂಜುನಾಥ್ ಭಂಡಾರಿ, ಕನ್ನಡ-ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳ ಹಾಗೂ ಇನ್ನಿತರರಿದ್ದರು.
ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡುತ್ತಿರುವ ಮಾಸಿಕ 2 ಸಾವಿರ ರೂ. ಗ್ಯಾರಂಟಿ ಕಾರ್ಯಕ್ರಮ ಮಹಿಳಾ ಸಬಲೀಕರಣದ ಪ್ರತೀಕವಾಗಿದೆ. ಇದು ಇಡೀ ದೇಶದ ಗಮನ ಸೆಳೆದಿದೆ. ನಿರುದ್ಯೋಗ ಸಮಸ್ಯೆ ನಿವಾರಿ ಸುವ ಜತೆಗೆ ಎಲ್ಲರಿಗೂ ದುಡಿಯುವ ಹಕ್ಕು ನೀಡಬೇಕು.
| ನ್ಯಾ. ಗೋಪಾಲಗೌಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಕರ್ನಾಟಕ ಸಂಭ್ರಮ ಹಿನ್ನೆಲೆಯಲ್ಲಿ ಸರ್ಕಾರ 1 ವರ್ಷ ಶಾಲಾ-ಕಾಲೇಜುಗಳಲ್ಲಿ ವಚನ ಸಂಸ್ಕೃತಿ ಅಭಿಯಾನ ಕೈಗೊಳ್ಳಬೇಕು. ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಬೇಕು.
| ನಿಜಗುಣಾನಂದ ಸ್ವಾಮೀಜಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಈ ಸಿಮ್ ದೇಶದಲ್ಲೇ ಮೊದಲು, ಏಕೆಂದರೆ ಇದು ಇ-ಸಿಮ್!; ಇದಿದ್ರೆ ವಿದೇಶ ಪ್ರಯಾಣದಲ್ಲಿ ರೋಮಿಂಗ್ ಸಮಸ್ಯೆಯೇ ಇಲ್ಲ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 3 =
Remember me
