ಬೆಂಗಳೂರು:ಸ್ಯಾಂಡಲ್​ವುಡ್​​ ನಟಿ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ದಾಂಪತ್ಯ ಜೀವನಕ್ಕೆ ಕಾಲುಡಲು ಸಜ್ಜಾಗಿದ್ದಾರೆ. ಮದುವೆ ಇನ್ನೇನು ಕೆಲವು ದಿನ ಬಾಕಿ ಇರುವಾಗಲೇ ಭಾವಿ ಪತಿಯ ಹೊಸ ಮನೆ ಗೃಹ ಪ್ರವೇಶ ಮಾಡಿದ್ದಾರೆ ಹರ್ಷಿಕಾ ಪೂಣಚ್ಚ. ಈ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಹರ್ಷಿಕಾ ಮತ್ತು ಭುವನ್ ವಿವಾಹವಾಗುತ್ತಿದ್ದು, ಇದೇ ತಿಂಗಳ 24 ಹಾಗೂ 25ರಂದು ಈ ಯುವಜೋಡಿಯ ವಿವಾಹ ಸಮಾರಂಭ ಕೊಡಗಿನಲ್ಲಿ ಅದ್ಧೂರಿಯಾಗಿ ಕೊಡವ ಸಂಪ್ರದಾಯದಂತೆ ನಡೆಯಲಿದೆ.

ಹರ್ಷಿಕಾ ಪೂಣಚ್ಚ ಮದುವೆಗೂ ಮುನ್ನವೇ ಭುವನ್ ಅವರ ಹೊಸ ಮನೆ ಗೃಹ ಪ್ರವೇಶ ಮಾಡಿದ್ದಾರೆ. ಭುವನ್ ಹರ್ಷಿಕಾಗಾಗಿಯೇ ತೋಟದ ಮನೆ ಕಟ್ಟಿಸಿದ್ದಾರೆ. ಈ ಮನೆಯ ಗೃಹ ಪ್ರವೇಶ ಸಂಪ್ರದಾಯದಂತೆ ದೀಪ ಹಿಡಿದು ಹೊಸ ಮನೆಗೆ ಬಾವಿ ಪತ್ನಿ ಹರ್ಷಿಕಾ ಪೂಣಚ್ಚ ಎಂಟ್ರಿಕೊಟ್ಟಿದ್ದಾರೆ. ಭುವನ್ ಕೊಡವ ಶೈಲಿಯಲ್ಲಿ ಗನ್ ಹಿಡಿದು ಗುಂಡು ಹಾರಿಸಿ ಶುಭಕಾರ್ಯ ಶುರು ಮಾಡಿದ್ದಾರೆ. ಈ ಸಂಭ್ರಮದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗುತ್ತಿವೆ.

ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ಅವರುಗಳು ತಮ್ಮ ಮದುವೆಯ ಆಹ್ವಾನ ಪತ್ರಿಕೆ ವಿತರಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಚಿತ್ರರಂಗದ ಹಲವು ಗಣ್ಯರನ್ನು ತಮ್ಮ ವಿವಾಹಕ್ಕೆ ಹರ್ಷಿಕಾ ಹಾಗೂ ಭುವನ್ ಆಹ್ವಾನಿಸಿದ್ದಾರೆ, ಆಹ್ವಾನಿಸುತ್ತಿದ್ದಾರೆ. ಹಿರಿಯ, ಕಿರಿಯ ಹೀಗೆ ಎಲ್ಲ ನಟ-ನಟಿಯರನ್ನು ತಮ್ಮ ಮದುವೆಗೆ ಈ ಜೋಡಿ ಆಹ್ವಾನಿಸುತ್ತಿದ್ದಾರೆ.
ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದಾರೆ. ತಮ್ಮ ಪ್ರೀತಿಯನ್ನು ಬಹುತೇಕ ಗುಟ್ಟಾಗಿಯೇ ಇರಿಸಿದ್ದ ಈ ಜೋಡಿ ಇದೀಗ ಮದುವೆ ಆಗುತ್ತಿದ್ದಾರೆ. ಆಗಸ್ಟ್ 24 ಹಾಗೂ 25ರಂದು ಕೊಡಗಿನಲ್ಲಿ ಅದ್ಧೂರಿಯಾಗಿ ಇವರ ಮದುವೆ ನಡೆಯಲಿದೆ. ಇಬ್ಬರೂ ಕೊಡವರಾಗಿದ್ದು, ಕೊಡವ ಸಂಪ್ರದಾಯದಂತೆಯೇ ಈ ಇಬ್ಬರ ಮದುವೆ ನಡೆಯಲಿದೆ.
ಹೃದಯಾಘಾತದಿಂದ ಬೆಂಗಳೂರಿನ ಆಟೋ ಚಾಲಕ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 15 =
Remember me
