ಬೀದರ್:ಜೆಡಿಎಸ್ ಪಕ್ಷದ ಮುಖಂಡ ಅಶೋಕ ಪಾಟೀಲ್ ಮನೆಯ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಹುಲಿ ಚರ್ಮ ವಶಕ್ಕೆ ಪಡೆದು, ಪಾಟೀಲ್​ರನ್ನು ಬಂಧಿಸಿದ್ದಾರೆ.
ಬೀದರ್ ತಾಲೂಕಿನ ಸಂಗೋಳಗಿ ಗ್ರಾಮದ ಅಶೋಕ್ ಪಾಟೀಲ್ ಎಂಬುವರ ಮನೆಯಲ್ಲಿ ಹುಲಿ ಚರ್ಮದ ತುಂಡುಗಳಿರುವ ಬಗ್ಗೆ ಖಚಿತ ಮಾಹಿತಿ ಬಂದ ಕೂಡಲೇ ಬೀದರ್ ಮತ್ತು ಕಲಬುರಗಿ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದರು.
ಅಶೋಕ್ ಪಾಟೀಲ್ ಮನೆಯ ಜಗಲಿಯಲ್ಲಿ ಹುಲಿ ಚರ್ಮವನ್ನು ಪೂಜೆಗೆ ಇಟ್ಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಜಗಲಿ ಮೇಲಿದ್ದ 4 ಹುಲಿ ಚರ್ಮದ ತುಂಡುಗಳನ್ನು ಜಪ್ತಿ ಮಾಡಿದ್ದಾರೆ. ಅಶೋಕ್ ಪಾಟೀಲ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೀದರ್ ಅರಣ್ಯ ಇಲಾಖೆ ಅಧಿಕಾರಿ ವಾನತಿ ನೇತೃತ್ವದ ತಂಡದಿಂದ ದಾಳಿ ನಡೆದಿದೆ. ಎಎಸ್ಎಫ್ ಡಾ.ಶಿವಕುಮಾರ್, ವಲಯ ಅರಣ್ಯ ಅಧಿಕಾರಿ ಮಹೇಂದ್ರ ಮೌರ್ಯ ಸೇರಿದಂತೆ ಇತರೆ ಸಿಬ್ಬಂದಿ ಕಾರ್ಯಾಚರಣೆಯ ಭಾಗವಾಗಿದ್ದರು.(ದಿಗ್ವಿಜಯ ನ್ಯೂಸ್​)
ಬೆಳ್ಳಂಬೆಳಗ್ಗೆ ಶಿವಮೊಗ್ಗದಲ್ಲಿ ಲಾರಿ-ಕಾರು ನಡುವೆ ಭೀಕರ ಅಪಘಾತ: ಮೂವರು ಸಾವು, ಓರ್ವನ ಸ್ಥಿತಿ ಗಂಭೀರ

ಇನ್ನು 3 ದಿನ ಮಳೆ ಮುಂದುವರಿಯುವ ಸಾಧ್ಯತೆ: ರಾಜಧಾನಿ ಫುಲ್ ಥಂಡಾ, ಆರೋಗ್ಯದ ಮೇಲಿರಲಿ ಗಮನ

ಮದ್ವೆ ಫೋಟೋಶೂಟ್​ ವೇಳೆ ತನ್ನನ್ನು ಮರೆತ ವಧುವಿನ ಮೇಲೆ ಆಕ್ರೋಶಗೊಂಡ ಆನೆ ಏನು ಮಾಡಿದೆ ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + five =
Remember me
