ಬೀದರ್:ಮಹಾರಾಷ್ಟ್ರದ ಸಾರಿಗೆ ಅಧಿಕಾರಿ ಪತ್ನಿಯೊಬ್ಬರು ತಮ್ಮ ಫಾರ್ಚೂನರ್ ಕಾರಿಗೆ ಪೊಲೀಸ್ ಲೇಬಲ್ ಅಂಟಿಸಿ ಓಡಾಡುವ ಮುಖಾಂತರ ಪೊಲೀಸ್​ ಪದ ದುರ್ಬಳಕೆ ಮಾಡಿಕೊಂಡ ಆರೋಪ ಎದುರಾಗಿದೆ.
ಬಸವಕಲ್ಯಾಣ ತಾಲೂಕಿನವರಾದ ಸಂಜಯ ವಾಡಿಕರ್ ಮಹಾರಾಷ್ಟ್ರದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಯಾಗಿದ್ದಾರೆ. ಅವರ ಪತ್ನಿ ಶಾಲಿನಿ ವಾಡಿಕರ್ ತಮ್ಮ ಫಾರ್ಚೂನರ್ ಕಾರಿನ‌ ಮೇಲೆ ಪೊಲೀಸ್​ ಎಂಬ ನಾಮಫಲಕ ಹಾಕಿ ಬೀದರ್​ ನಗರಕ್ಕೆ ಬರುವಾಗ ಸಿಕ್ಕಿಬಿದ್ದಿದ್ದಾರೆ.
ಲಾಕ್​ಡೌನ್ ಹಿನ್ನೆಲೆಯಲ್ಲಿ ‌ಪಿಎಸ್​ಐ ಸುನೀಲ್​ಕುಮಾರ್​ ಹಾಗೂ ಪೊಲೀಸ್​ ಸಿಬ್ಬಂದಿಗಳು ನಗರದ ಹರಳಯ್ಯಾ ಚೆಕ್​ಪೋಸ್ಟ್​ ಬಳಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪರಿಶೀಲನೆ ವೇಳೆ ಶಾಲಿನಿ ವಾಡಿಕರ್ ಮತ್ತು ಪೊಲೀಸರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಪೊಲೀಸ್​ ಪದ ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ‌ಕಾರು‌ ವಶಕ್ಕೆ ಪಡೆದು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.(ದಿಗ್ವಿಜಯ ನ್ಯೂಸ್​)
ಗುಣಮುಖರಾದವರಲ್ಲಿ ಮತ್ತೆ ಸೋಂಕು: ತಲೆನೋವು ತಂದ ಕರೊನಾ ವೈರಸ್​ ಹೊಸ ವರಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − four =
Remember me
