ಬೀದರ್:ದಿನೇ ದಿನೇ ಬೀದರ್​ನಲ್ಲಿ ಕರೊನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರೆಸುತ್ತಿದ್ದು, ನಗರದ ಓಲ್ಡ್ ಸಿಟಿ ಒಂದೇ ಪ್ರದೇಶದಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣಗಳಿವೆ. ಪರಿಸ್ಥಿತಿ ಹೀಗಿದ್ದರೂ ಖುದ್ದು ಶಾಸಕರೇ ಮುಂದೆ ನಿಂತು ಸೀಲ್​ಡೌನ್ ಪ್ರದೇಶವನ್ನು ಓಪನ್ ಮಾಡಿಸಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ:ಪುರುಷರ ವಾರ್ಡ್​ನಲ್ಲಿ ಒಳ ಉಡುಪು ಕಾಣುವಂತೆ ಪಿಪಿಇ ಗೌನ್ ತೊಟ್ಟಿದ್ದ ನರ್ಸ್​ಗೆ ಒಲಿಯಿತು ಬಂಪರ್​ ಆಫರ್​!
ದೆಹಲಿಗೆ ಹೋಗಿ ಬಂದ ಓಲ್ಡ್ ಸಿಟಿಯ ಜನರಿಂದಲೇ ಬೀದರ್​ಗೆ ಕರೊನಾ ಸೊಂಕು ಬಂದಿದ್ದು, 67 ಸೊಂಕಿತರ ಪೈಕಿ ಸುಮಾರು 50ಕ್ಕೂ ಹೆಚ್ಚು ಓಲ್ಡ್ ಸಿಟಿಯ ನಿವಾಸಿಗಳಾಗಿದ್ದಾರೆ.
ಬೀದರ್ ಜನರಲ್ಲಿ ಕೋವಿಡ್-19 ಕುರಿತು ದಿನೇ ದಿನೇ ಆತಂಕ ಹೆಚ್ಚಾಗುವ ಸಂದರ್ಭದಲ್ಲಿ ಶಾಸಕ ರಹೀಮ್ ಖಾನ್ ಜಿಲ್ಲಾಡಳಿತದ ಮೇಲೆ ರಂಜಾನ್ ಹಬ್ಬ ಇದೆ ಎಂದು ನಾನಾ ಒತ್ತಡ ಹೇರುವ ಮೂಲಕ ಸೀಲ್​ಡೌನ್ ಏರಿಯಾವನ್ನು ತೆರೆಸಿರುವುದು ಬೀದರ್ ಜನರಲ್ಲಿ ಭಯ ಉಂಟಾಗಲು ಕಾರಣವಾಗಿದೆ.
ಇದನ್ನೂ ಓದಿ:ಹೀಗೂ ಆಗುವುದುಂಟು: ವಾಯುವಿಹಾರಕ್ಕೆ ಹೋದಾಗ ಲಕ್ಷಾಧಿಪತಿ, ಕಸದೊಂದಿಗೆ ಬಂದಾಗ ಕೋಟ್ಯಧಿಪತಿ..!
ಜಮಾತ್​ಗೆ ಹೋಗಿ ಬಂದವರಿಗೆ ಸೊಂಕು ತಗುಲಿದ ಹಿನ್ನಲೆಯಲ್ಲಿ ಇಡೀ‌ ಓಲ್ಡ್ ಸಿಟಿಯನ್ನು ಶಾಸಕರೇ ಮುಂದೆ ನಿಂತು ಸೀಲ್ ಡೌನ್ ಮಾಡಿಸಿದ್ದರು. ಇದೀಗ ಓಪನ್​ ಮಾಡಿಸಿರುವುದು ಭೀತಿಗೆ ಎಡೆಮಾಡಿಕೊಟ್ಟಿದ್ದು, ಇನ್ನೂ ಜಿಲ್ಲಾಡಳಿತ ಓಲ್ಡ್ ಸಿಟಿಯ ಸಾಕಷ್ಟು ಮನೆಯ ಸದಸ್ಯೆರಿಗೆ ಟೆಸ್ಟ್ ಮಾಡಿಸಿದ್ದು. 2293 ಜನರ ವರದಿ ಬರಬೇಕಿದೆ.(ದಿಗ್ವಿಜಯ ನ್ಯೂಸ್​)
https://www.facebook.com/VVani4U/videos/674000946504347/
ಕರೊನಾಕ್ಕೆ ರುಬೊಲಾ ಚುಚ್ಚುಮದ್ದು, ಮನೆಯವರ ಮೇಲೆ ಪ್ರಯೋಗಿಸಿದ ವೈದ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
