ಬೀದರ್:ವಿವಿಧ ವಸತಿ ಯೋಜನೆಯಡಿ ಅಕ್ರಮದಲ್ಲಿ ಭಾಗಿಯಾಗಿದ್ದ 7 ಪಿಡಿಒ ಅಮಾನತು ಸೇರಿದಂತೆ ಒಟ್ಟು 40 ಪಿಡಿಒಗಳಿಗೆ ಸರ್ಕಾರ 72 ಕೋಟಿ ರೂಪಾಯಿ ದಂಡ ವಿಧಿಸಿದೆ.
ವಿವಿಧ ವಸತಿ ಯೋಜನೆಯಡಿ ಅಕ್ರಮದಲ್ಲಿ ಭಾಲ್ಕಿ ತಾಲೂಕಿನ 40 ಗ್ರಾಮ ಪಂಚಾಯತಿ ಪಿಡಿಓಗಳು ಭಾಗಿಯಾಗಿದ್ದು, 07 ಜನ ಪಿಡಒಗಳನ್ನು ಜಿಲ್ಲಾ ಪಂಚಾಯತ್​ ಸಿಇಒ ಅಮಾನತು ಮಾಡಿದ್ದಾರೆ.
ವಿವಿಧ ವಸತಿ ಯೋಜನೆಗಳಡಿಯಲ್ಲಿ ಅರ್ಹ ಫಲಾನುಭಾವಿಗಳಿಗೆ ಮನೆ ಹಂಚಿಕೆಯಲ್ಲಿ ಭಾರಿ ಅಕ್ರಮ ಹಿನ್ನೆಲೆಯಲ್ಲಿ ಭಾಲ್ಕಿಯ 40 ಗ್ರಾಮ ಪಂಚಾಯತಿ ಪಿಡಿಒಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. 8 ಸಾವಿರ ಫಲಾನುಭಾವಿಗಳಿಗೆ ಅಕ್ರಮ ಮನೆ ಮಂಜೂರಾತಿ ಮಾಡಿದ ಆರೋಪ ಹೊತ್ತ ಬೀದರ್​ನ ಭಾಲ್ಕಿ ತಾಲೂಕಿನ 40 ಗ್ರಾಮ ಪಂಚಾಯತಿಗಳ ಪಿಡಿಒಗಳಿಗೆ 72 ಕೋಟಿ ರೂ. ದಂಡ ವಿಧಿಸಲಾಗಿದೆ.
ಇದನ್ನೂ ಓದಿರಿ:ಟ್ರಸ್ಟ್​ಗಾಗಿ ಸಂಗ್ರಹಿಸಿದ ಹಳೇ ಶರ್ಟ್​ನಲ್ಲಿದ್ದ ಪಾಕೆಟ್ ನೋಡಿದ ಕೂಡಲೇ ಮೈಸೂರಿನಿಂದ ಕೇರಳಕ್ಕೆ ದೌಡು!
ಭಾಲ್ಕಿಯ ಬಾಳೂರ್ ಪಿಡಿಒ ಸಂಗಮೇಶ, ಬಿರಿ(ಬಿ) ಪಿಡಿಓ ಮಲ್ಲೇಶ ಮಾರುತಿ, ರೇವಣಪ್ಪ ರೇಖಾ, ಚಂದ್ರಶೇಖರ, ಸಂತೋಷ ಹಾಗೂ ಪ್ರವೀಣಕುಮಾರ ಮಹಾತ್ಮಕರ ಸೇರಿದಂತೆ 7 ಜನ ಪಿಡಿಒಗಳಿಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ. ಉಳಿದ 33 ಪಿಡಿಒಗಳಿಗೂ ಅಮಾನತು ಶಿಕ್ಷೆ ಗ್ಯಾರಂಟಿ ಎನ್ನಲಾಗಿದೆ.
ಅಮಾನತು ಮಾಡಿ ಜಿಲ್ಲಾ ಪಂಚಾಯತ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ ಆದೇಶ ಹೊರಡಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
VIDEO| ಸ್ವಚ್ಛಂದವಾಗಿ ಹಾರಾಡ್ತಿದ್ದ ಪಕ್ಷಿಗೆ ಶೂಟ್​ ಮಾಡಿದ ಬೆನ್ನಲ್ಲೇ ಕರ್ಮದ ಫಲ ಅನುಭವಿಸಿದ ವ್ಯಕ್ತಿ!

8 ತಿಂಗಳ ಮಗುವಿನೊಂದಿಗೆ ಕಟ್ಟಡದಿಂದ ಜಿಗಿದು ಮಹಿಳೆ ಆತ್ಮಹತ್ಯೆಗೆ ಶರಣು: ಮಗುವಿನ ಜೀವ ಉಳಿದಿದ್ಹೇಗೆ?

ಯುವಜನತೆ ಹತಾಶೆ ಬಿಟ್ಟು ಜೀವನೋತ್ಸಾಹಕ್ಕೆ ಮರಳಲಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − four =
Remember me
