ಬೀದರ್​:ಇದೀಗ, ರಾಜ್ಯದ ಗಡಿ ಭಾಗಗಳಲ್ಲಿ ಕಾರ್ಯನಿರತರಾಗಿದ್ದ ಗಾಂಜಾ ಗ್ಯಾಂಗ್​ಗಳಿಗೆ ಬೀದರ್​ನನ ಪೊಲೀಸರು ಈಗ ಈ ಕಿರಾತಕರ ನಿದ್ದೆ ಹಾಳು ಮಾಡಿದ್ದಾರೆ.
ಇತ್ತೀಚಿಗೆ ಗಾಂಜಾ ಗ್ಯಾಂಗ್ ಬೆನ್ನತ್ತಿದ ಕಲಬುರ್ಗಿ ಸಿಪಿಐ ಶ್ರೀಮಂತ ಇಲಾಳ್ ಮೇಲೆ ದುರುಳರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದಾದ ಬಳಿಕ ಅಲರ್ಟ್​ ಆದ ಪೊಲೀಸರು ಗಾಂಜಾ ಸಾಗಣೆ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅದರ ಫಲವಾಗಿ ಹುಮನಾಬಾದ ಪೊಲೀಸರು ಈಗ 42 ಲಕ್ಷ ಮೌಲ್ಯದ 358 ಕೆಜಿ ಗಾಂಜಾ ಜಪ್ತಿ‌ ಮಾಡಿದ್ದಾರೆ. 358 ಕೆ ಜಿ ಗಾಂಜಾದೊಂದಿಗೆ ಒಂದು ಲಾರಿ, ಕಾರು ಹಾಗೂ ಏಳು ಜನ ಆರೋಪಿಗಳನ್ನು ಬೀದರ್​ ಪೊಲೀಸರು ಕಂಬಿ ಎಣಿಸಲು ಕಳಿಸಿದ್ದಾರೆ.
ಈ ಗಾಂಜಾ ಗ್ಯಾಂಗ್​ಗಳು, ಆಂಧ್ರಪ್ರದೇಶದ ಕಡೆಯಿಂದ ಮಹಾರಾಷ್ಟ್ರದ ಪುಣೆ ಕಡೆಗೆ ಗಾಂಜಾ ಸಾಗಿಸುತ್ತಿದ್ದರು. ಪಕ್ಕಾ ಮಾಹಿತಿ ಆಧರಿಸಿ ಗ್ಯಾಂಗ್ ಮೇಲೆ ದಾಳಿ ನಡೆಸಿದ ಪೊಲೀಸರು ಏಳು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಗಾಂಜಾ ಗ್ಯಾಂಗ್, ಸಿಪಿಐ ಮತ್ತು ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಈ ಖತರ್ನಾಕ್​ ಗ್ಯಾಂಗ್​ಅನ್ನು ಹಿಡಿಯಲೇ ಬೇಕು ಎಂದಯ ಎಸ್ಪಿ ಡೇಕಾ ಕಿಶೋರ್ ಬಾಬು, ದಂಧೆಖೋರರ ಬೆನ್ನು ಬಿದ್ದಿದ್ದರು.
ಬಂಧಿತ ಆರೋಪಿಗಳಾದ ದಾಡಗಿಯ ವಿಜಯಕುಮಾರ್, ಎಂಡಿ ವಾಜೀದ್, ಲಕ್ಷ್ಮಿಣ, ಸಂತೋಷ, ಇಮ್ರಾನ್ ಅಹ್ಮದ್, ಗೌರವ ದೋಷಿ, ಗಗನ್ ಸಹಾರೆ ಸೇರಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಗಾಂಜಾ ಸಾಗಾಟಕ್ಕೆ ಬ್ರೇಕ್ ಹಾಕಿರುವ ಹುಮನಾಬಾದ ಪೊಲೀಸರಿಗೆ ಎಸ್ಪಿ ಡೇಕಾ ಕಿಶೋರ್ ಬಾಬು ೧ಲಕ್ಷ ಬಹುಮಾನ ವಿತರಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + nine =
Remember me
