ಬೀದರ್:ಇಲ್ಲಿನ ವಿದ್ಯಾರ್ಥಿಯೋರ್ವ ಉಕ್ರೇನ್​​ನಲ್ಲಿ ಮೃತಪಟ್ಟಿದ್ದು, ನಾಲ್ಕು ದಿನಗಳಾದರೂ ಸರಿಯಾದ ಮಾಹಿತಿ ಸಿಗದೆ ಪಾಲಕರು ಗೋಳಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಬಳಿ ನೆರವಿಗಾಗಿ ಮೊರೆಯಿಟ್ಟಿದ್ದಾರೆ.
ಭಾಲ್ಕಿಯ ಕದಲಾಬಾದ್​ ಗ್ರಾಮದ ಅಮರ್​​ (20) ಉಕ್ರೇನ್​​​ನಲ್ಲಿ ಎಂಬಿಬಿಎಸ್​ ಓದುತ್ತಿದ್ದ. ಈತ ನಾಲ್ಕು ದಿನಗಳ ಹಿಂದೆಯೇ ಕಟ್ಟಡದ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಸುದ್ದಿ ಬಂದಿದೆ. ಆದರೆ ನಿಖರವಾಗಿ ಮಾಹಿತಿ ಸಿಗುತ್ತಿಲ್ಲ.ಅಮರ್​ ಒಂದು ವರ್ಷದ ಹಿಂದಷ್ಟೇ ಉಕ್ರೇನ್​​ಗೆ ತೆರಳಿದ್ದ. ಅಲ್ಲಿನ ಖಾರಖವಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ. ಅವನ ಸಾವು ಹೇಗಾಯಿತು? ಯಾವ ಕಟ್ಟಡದಿಂದ ಬಿದ್ದಿದ್ದಾನೆ? ಮೃತದೇಹ ಏನಾಯಿತು ಎಂಬಿತ್ಯಾದಿ ವಿಷಯಗಳನ್ನು ತಿಳಿಯಲು ಪಾಲಕರು ಚಡಪಡಿಸುತ್ತಿದ್ದಾರೆ.
ನಮಗೆ ನಮ್ಮ ಪುತ್ರನ ಸಾವಿನ ಬಗ್ಗೆ ತಿಳಿಯಬೇಕು. ಮೃತದೇಹವನ್ನು ಇಲ್ಲಿಗೆ ತರಿಸಿಕೊಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪನವರು ನೆರವಿಗೆ ಬರಬೇಕು ಎಂದು ಕಣ್ಣೀರು ಸುರಿಸುತ್ತಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬಲ್ಲೆ, ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ರೆಡಿನಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
