ಬೀದರ್:ಇಬ್ಬರು ಮುದ್ದಾದ ಮಕ್ಕಳೊಂದಿಗೆ ಕಳೆದ 4 ತಿಂಗಳಿಂದ ಹೆಂಡತಿ ಕಾಣೆಯಾಗಿದ್ದು, ಹುಡುಕಾಡುವ ತನ್ನ ಪ್ರಯತ್ನ ಫಲ ನೀಡದಿದ್ದಾಗ ಪೊಲೀಸರ ಮೊರೆಹೋದ ವ್ಯಕ್ತಿಯ ನೋವಿಗೆ ಸ್ಪಂದನೆ ದೊರೆಯದ ಆರೋಪ ಬೀದರ್​ ಪೊಲೀಸರ ವಿರುದ್ಧ ಕೇಳಿಬಂದಿದೆ.
ಇದನ್ನೂ ಓದಿ:ಸಹೋದರನ ಹತ್ಯೆಗೆ ಸುಪಾರಿ ಕೊಟ್ಟ ಅಕ್ಕ
ಬೀದರ್​ನ ಚಿಟ್ಟವಾಡಿಯ ಖರ್ಗೆ ಕಾಲೋನಿಯ ನಿವಾಸಿ ಸತೀಶ ಮಾರುತಿ ದೇಸಾಯಿ ಪತ್ನಿ ಪ್ರಿಯಾಂಕ ಮತ್ತು ಇಬ್ಬರು ಮಕ್ಕಳು ಕಾಣೆಯಾಗಿದ್ದಾರೆ. ಕಳೆದ ಫೆಬ್ರವರಿ 21ರ ಮಧ್ಯಾಹ್ನದ ಸಮಯದಲ್ಲಿ ಮಗುವಿನ ಜತೆಯಲ್ಲಿ ಮತ್ತೊಂದು ಮಗುವನ್ನು ಶಾಲೆಯಿಂದ ಕರೆತರಲು ಪ್ರಿಯಾಂಕ ಹೋಗಿದ್ದರು. ಆದರೆ, ಮರಳಿ ಬರಲೇ ಇಲ್ಲ.
ಅಂದಿನಿಂದ ಇಂದಿನವರೆಗೂ ಪ್ರಿಯಾಂಕ ಮಕ್ಕಳೊಂದಿಗೆ ಕಾಣೆಯಾಗಿದ್ದು, ಸತೀಶ್​ ಅವರಿಗಾಗಿ ಊರೂರು ಅಲೆದಾಡಿ ಪತ್ತೆ ಮಾಡಲು ಸಾಧ್ಯವಾಗದೇ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ಆದರೆ, ಕರೊನಾ ನೆಪ ಹೇಳಿ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ತತ್ತರಿಸಿದ ಹೋಟೆಲೋದ್ಯಮ: 6000 ಕೋಟಿ ರೂ. ವಹಿವಾಟಿಗೆ ಕುತ್ತು
ನಗರದ ಗಾಂಧಿ ಗಂಜ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸತೀಶ್​, ಹೆಂಡತಿ ಮಕ್ಕಳನ್ನು ಹುಡುಕುವ ಪ್ರಯತ್ನ ಮುಂದುವರಿಸಿದ್ದಾರೆ. ಈಗಲಾದರೂ ನೊಂದ ವ್ಯಕ್ತಿಗೆ ಖಾಕಿ ನ್ಯಾಯಾಕೊಡಿಸಬೇಕಿದೆ.(ದಿಗ್ವಿಜಯ ನ್ಯೂಸ್​)
ಎಳನೀರು ಕುಡಿಯಿರಿ ಆದ್ರೆ ಗಂಜಿ ಮಾತ್ರ ಕೇಳ್ಬೇಡಿ ಎನ್ನುತ್ತಿರುವ ವ್ಯಾಪಾರಿಗಳ ಉದ್ದೇಶವೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + eight =
Remember me
