ಚಿಕ್ಕಮಗಳೂರು:ಮಳೆಗಾಲದಲ್ಲಿ ಮನೆಯಿಂದ ಹೊರಗೆ ಹೋದರೆ ಯಾವಾಗ ಹೇಗೆ ಅಪಾಯ ಎದುರಾಗುತ್ತದೋ ಎಂದು ಹೇಳುವುದು ಕಷ್ಟ. ಈ ಮಾತಿಗೆ ಪೂರಕ ಎಂಬಂತೆ ಇಲ್ಲೊಂದು ಕಡೆ ಚಲಿಸುತ್ತಿದ್ದ ಕಾರಿನ ಮೇಲೇ ಸರಿಯಾಗಿ ಮರದ ಬೃಹತ್ ಕೊಂಬೆ ಮುರಿದು ಬಿದ್ದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳೇ ಮೂಡಿಗೆರೆಯ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಒಮ್ಮೆ ಬೆಚ್ಚಿಬೀಳಿಸುವಂತೆ ಮಾಡುವ ಈ ದೃಶ್ಯ ರಸ್ತೆ ಬದಿಯ ಮನೆಯೊಂದರಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಪಿಎಸ್​ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್ ಪೌಲ್​ ಫಾರ್ಮ್​ಹೌಸ್​​ನಲ್ಲಿ ಪರಿಶೀಲನೆ..
ಕಾರು ಬರುತ್ತಿದ್ದಂತೆ ದೊಡ್ಡದೊಂದು ಕೊಂಬೆ ಸರಿಯಾಗಿ ಅದರ ಬಾನೆಟ್​ ಮೇಲೆಯೇ ಬಿದ್ದಿದೆ. ಅದಾಗ್ಯೂ ಚಾಲಕ ತಕ್ಷಣ ಕಾರನ್ನು ನಿಯಂತ್ರಣಕ್ಕೆ ತಂದು ನಿಲ್ಲಿಸಿದ್ದರಿಂದ ಹೆಚ್ಚಿನ ಅಪಾಯ ತಪ್ಪಿದೆ. ಎಲ್ಲಕ್ಕಿಂತ ಹೆಚ್ಚು ಕಾರಿನಲ್ಲಿದ್ದವರೆಲ್ಲರೂ ಒಮ್ಮೆ ಆಘಾತಕ್ಕೆ ಒಳಗಾದರೂ ಯಾವುದೇ ಪವಾಡಸದೃಶ ಎಂಬಂತೆ ಸುರಕ್ಷಿತವಾಗಿ ಪಾರಾಗಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಚಲಿಸುತ್ತಿದ್ದ ಕಾರಿನ ಮೇಲೇ ಬಿದ್ದ ಬೃಹತ್​ ಕೊಂಬೆ; ಇಲ್ಲಿದೆ ಬೆಚ್ಚಿ ಬೀಳಿಸುವಂಥ ದೃಶ್ಯ..ವಿವರಗಳಿಗೆhttps://t.co/YaFZZchf1Jನೋಡಿpic.twitter.com/mYSbgkuaqV— Vijayavani (@VVani4U)July 6, 2022
ಚಲಿಸುತ್ತಿದ್ದ ಕಾರಿನ ಮೇಲೇ ಬಿದ್ದ ಬೃಹತ್​ ಕೊಂಬೆ; ಇಲ್ಲಿದೆ ಬೆಚ್ಚಿ ಬೀಳಿಸುವಂಥ ದೃಶ್ಯ..ವಿವರಗಳಿಗೆhttps://t.co/YaFZZchf1Jನೋಡಿpic.twitter.com/mYSbgkuaqV
ಗಜಪ್ರಸವಕ್ಕಾಗಿ ರಸ್ತೆಯೇ ಬಂದ್; 2 ರಾಜ್ಯಗಳ ಮಾರ್ಗದ ಮಧ್ಯೆ 1 ಗಂಟೆ ಸಂಚಾರ ಸ್ಥಗಿತ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − seventeen =
Remember me
